ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನ ಆಚರಿಸಲಾಯಿತು. ಡಾ. ಎಸ್.ಆರ್. ಅರುಣ್, ಡಾ. ಎಂ.ವಿಶ್ವನಾಥ್ ಪೈ, ಡಾ. ದೇವಿದಾಸ್ ಎಸ್. ನಾಯ್ಕ, ಪ್ರೊ. ಮಾಲತಿದೇವಿ, ಡಾ. ಗಾಯತ್ರಿ ಪೈ, ಪ್ರೊ.ಶೈಲಜಾ, ಪ್ರೊ. ವೀರಾ ಐಡಾ ಪಿಂಟೋ, ಕಿಶೋರ್ ಎಚ್.ವಿ., ವಿನೀತ್ ರಾವ್ ಇದ್ದರು.
* ಉಡುಪಿ ಎಂಜಿಎಂ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನ
ಉಡುಪಿ: ಗ್ರಂಥಗಳು ಮತ್ತು ಗ್ರಂಥಾಲಯಗಳು ಕಾಲಾತೀತ ಪ್ರಸ್ತುತತೆ ಹೊಂದಿದೆ. ಜ್ಞಾನದ ಪ್ರಸಾರ ಹಾಗೂ ಪುಸ್ತಕ ಸಂರಕ್ಷಣೆಯಲ್ಲಿ ಗ್ರಂಥಾಲಯಗಳ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ಉಡುಪಿ ಪ್ರಾದೇಶಿಕ ಜಾನಪದ ರಂಗಕಲೆಗಳ ಸಂಪನ್ಮೂಲ ಕೇಂದ್ರ (ಆರ್ಆರ್ಸಿ)ದ ಮುಖ್ಯ ಸಂಶೋಧಕ ಡಾ. ಎಸ್.ಆರ್. ಅರುಣ್ ಅಭಿಪ್ರಾಯಪಟ್ಟರು.
ಉಡುಪಿಯ ಎಂಜಿಎಂ ಕಾಲೇಜಿನ ಗ್ರಂಥಾಲಯದ ವತಿಯಿಂದ ಗ್ರಂಥಾಲಯ ವಿಜ್ಞಾನ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಜನ್ಮದಿನಾಚರಣೆ ನಿಮಿತ್ತ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನ ಹಾಗೂ ಗ್ರಂಥಾಲಯ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ಮಯೋಗಿ ಡಾ. ರಂಗನಾಥನ್ ಹಾಕಿಕೊಟ್ಟ ಗ್ರಂಥಾಲಯ ವಿಜ್ಞಾನದ ಬುನಾದಿಯಿಂದಾಗಿ ಇಂದಿಗೂ ಗ್ರಂಥಾಲಯಗಳು, ಗ್ರಂಥಾಲಯ ಸಿಬ್ಬಂದಿ ಒಳ್ಳೆಯ ಸೇವೆ ಒದಗಿಸುತ್ತಿದ್ದಾರೆ. ಶಿಕ್ಷಣಕ್ಕೆ ಮತ್ತು ಸಂಶೋಧನೆಗೆ ಬೆಂಬಲ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕ
, ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಪ್ರೊ. ಮಾಲತಿದೇವಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಗಾಯತ್ರಿ ಪೈ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಪ್ರೊ.ಶೈಲಜಾ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ವೀರಾ ಐಡಾ ಪಿಂಟೋ ಉಪಸ್ಥಿತರಿದ್ದರು.
ಗ್ರಂಥಪಾಲಕ ಕಿಶೋರ್ ಎಚ್.ವಿ. ಸ್ವಾಗತಿಸಿ, ವಂದಿಸಿದರು. ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ರಾವ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಗಾಗಿ ವಿವಿಧ ಗ್ರಂಥಗಳ ಪ್ರದರ್ಶನ ಆಯೋಜಿಸಲಾಗಿತ್ತು.