ನ.30ಕ್ಕೆ ರಾಷ್ಟ್ರಮಟ್ಟದ ಏಕವ್ಯಕ್ತಿ ಭರತನಾಟ್ಯ ಸ್ಪರ್ಧೆ

ಸುದ್ದಿಗೋಷ್ಠಿಯಲ್ಲಿ ವಿದುಷಿ ದೀಕ್ಷಾ ರಾಮಕೃಷ್ಣ , ಸಂಸ್ಥೆಯ ನಿರ್ದೇಶಕ ಡಾ. ರಾಮಕೃಷ್ಣ ಹೆಗಡೆ, ರಂಜಿನಿ ಸಾಮಗ ಉಪಸ್ಥಿತರಿದ್ದರು.
ಸುದ್ದಿಗೋಷ್ಠಿಯಲ್ಲಿ ವಿದುಷಿ ದೀಕ್ಷಾ ರಾಮಕೃಷ್ಣ , ಸಂಸ್ಥೆಯ ನಿರ್ದೇಶಕ ಡಾ. ರಾಮಕೃಷ್ಣ ಹೆಗಡೆ, ರಂಜಿನಿ ಸಾಮಗ ಉಪಸ್ಥಿತರಿದ್ದರು.
Published on
ಉಡುಪಿ: ಮಣಿಪಾಲದ ಹೆಜ್ಜೆ ಗೆಜ್ಜೆ ಫೌಂಡೇಶನ್​ ವತಿಯಿಂದ ನ.30 ರಂದು ರಾಷ್ಟ್ರಮಟ್ಟದ ಏಕವ್ಯಕ್ತಿ ಭರತನಾಟ್ಯ ಮತ್ತು ಸಂಗೀತ ಸ್ಪರ್ಧೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ವಿದುಷಿ ದೀಕ್ಷಾ ರಾಮಕೃಷ್ಣ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಎರಡು ಸ್ಪರ್ಧೆಗಳಿಗೆ 13 ರಿಂದ 25 ವರ್ಷ ವಯೋಮಿತಿಯವರು ಭಾಗವಹಿಸಬಹುದು. ಪ್ರತಿಯೊಬ್ಬ ಸ್ಪರ್ಧಾಳುಗಳಿಗೆ 10 ನಿಮಿಷಗಳ ಕಲಾವಕಾಶವಿದೆ. ಪ್ರಥಮ ಬಹುಮಾನ ಪಡೆದವರಿಗೆ ಫಲಕದೊಂದಿಗೆ 10 ಸಾವಿರ ರೂ. ಹಾಗೂ ನೃತ್ಯದಾಸರತ್ನ ಬಿರುದು, ದ್ವೀತಿಯ 7 ಸಾವಿರ ರೂ., ತೃತೀಯ 5 ಸಾವಿರ ರೂ.ಬಹುಮಾನ ನೀಡಲಾಗುವುದು. ಡಿ.7ರಂದು ಭಕ್ತಿಗಾನ ಲಹರಿ ರಾಷ್ಟ್ರಮಟ್ಟದ ದಾಸ ಪದ ಸಂಗೀತ ಸ್ಪರ್ಧೆ ನಡೆಯಲಿದೆ ಎಂದು ಹೇಳಿದರು. ಸಂಸ್ಥೆಯ ನಿರ್ದೇಶಕ ಡಾ. ರಾಮಕೃಷ್ಣ ಹೆಗಡೆ, ರಂಜಿನಿ ಸಾಮಗ ಉಪಸ್ಥಿತರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net