ವೈಜ್ಞಾನಿಕವಾಗಿ ಬೆಳೆಸಿರಿ ಭಾರತವರ್ಷ

ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ, ತಂತ್ರಜ್ಞಾನ ಸಮ್ಮೇಳನದಲ್ಲಿ ಈಶಪ್ರಿಯ ಸ್ವಾಮೀಜಿ ಮಾತನಾಡಿದರು. ಡಾ.ಪ್ರಹ್ಲಾದ್​ ರಾಮ ರಾವ್​, ಡಾ. ಬಿ.ಆರ್​. ಗುರುಪ್ರಸಾದ್​, ಡಾ.ಎ.ಪಿ ಭಟ್​, ಡಾ. ಜಿ.ಎಸ್​. ಚಂದ್ರಶೇಖರ್​, ಡಾ. ಪಿ.ಎಸ್​. ಐತಾಳ್​, ಪ್ರೊ.ವಿದ್ಯಾಧಿರಾಜ ಎನ್​.ಎಸ್​., ಡಾ.ವಿನಾಯಕ ಕೆ.ಪತ್ತಾರ್​ ಇದ್ದರು.
ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ, ತಂತ್ರಜ್ಞಾನ ಸಮ್ಮೇಳನದಲ್ಲಿ ಈಶಪ್ರಿಯ ಸ್ವಾಮೀಜಿ ಮಾತನಾಡಿದರು. ಡಾ.ಪ್ರಹ್ಲಾದ್​ ರಾಮ ರಾವ್​, ಡಾ. ಬಿ.ಆರ್​. ಗುರುಪ್ರಸಾದ್​, ಡಾ.ಎ.ಪಿ ಭಟ್​, ಡಾ. ಜಿ.ಎಸ್​. ಚಂದ್ರಶೇಖರ್​, ಡಾ. ಪಿ.ಎಸ್​. ಐತಾಳ್​, ಪ್ರೊ.ವಿದ್ಯಾಧಿರಾಜ ಎನ್​.ಎಸ್​., ಡಾ.ವಿನಾಯಕ ಕೆ.ಪತ್ತಾರ್​ ಇದ್ದರು.
Published on

* ಪದ್ಮಶ್ರೀ ಡಾ.ಪ್ರಹ್ಲಾದ​ ರಾಮ ರಾವ್​ ಕರೆ

* ರಾಷ್ಟ್ರೀಯ ವಿಜ್ಞಾನ&ತಂತ್ರಜ್ಞಾನ, ವಿಜ್ಞಾನಿಗಳ ಸಮ್ಮೇಳನ

ಉಡುಪಿ: ವಿಜ್ಞಾನಕ್ಕೆ ಸಂಬಂಧಿತ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಆಗಮಿಸಿರುವುದೇ ಅತ್ಯದ್ಭುತ ಕ್ಷಣ. ವೈಜ್ಞಾನಿಕವಾಗಿ ಭಾರತವೂ ಸಹ ಸಾಧನೆಯ ಮಾರ್ಗದಲ್ಲಿದ್ದು, ಮುಂದಿನ ಭಾರತವರ್ಷವನ್ನು ತಾವುಗಳು ವೈಜ್ಞಾನಿಕವಾಗಿ ಯಾವ ರೀತಿ ಬೆಳೆಸಬೇಕು ಎನ್ನುವುದನ್ನು ಇಂತಹ ಸಮ್ಮೇಳನದಿಂದ ಅರಿತುಕೊಳ್ಳಬೇಕು. ಪ್ರಕೃತಿಯ ಜ್ಞಾನ ತಿಳಿದುಕೊಳ್ಳಬೇಕಿದ್ದು, ವಿಜ್ಞಾನವನ್ನು ಬಿಡಬೇಡಿ ಎಂದು ಬ್ರಹ್ಮೋಸ್​ ಕ್ಷಿಪಣಿ ತಯಾರಿ ಹಿಂದಿನ ವಿಜ್ಞಾನಿ, ಪದ್ಮಶ್ರೀ ಡಾ.ಪ್ರಹ್ಲಾದ ರಾಮ ರಾವ್​ ತಿಳಿಸಿದರು.
ಉಡುಪಿ ಪೂರ್ಣಪ್ರಜ್ಞ ಕಾಲೇಜ್​(ಸ್ವಾಯತ್ತ)ನ ಐಕ್ಯುಎಸಿ ಹಾಗೂ ವಿಜ್ಞಾನ ಸಂಘದ ವತಿಯಿಂದ ಶನಿವಾರ (ಏ.4) ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ, ತಂತ್ರಜ್ಞಾನ ಹಾಗೂ ವಿಜ್ಞಾನಿಗಳ ಸಮ್ಮೇಳನದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.

ಸೂರ್ಯನ ಶಕ್ತಿ ಅಪಾರ

ಸೂರ್ಯನ ಮೇಲ್ಮೆನಲ್ಲಿ 17 ಮಿಲಿಯನ್​ ಡಿಗ್ರಿ ಸೆಂಟ್ರಿಗೇಡ್​ ತಾಪ ಇರುವುದರಿಂದ ಅಲ್ಲಿ ಹೈಡ್ರೋಜನ್​ ಹೀಲಿಯಂ ಆಗಿ ಪರಿವರ್ತನೆ ಆಗುವುದರಿಂದ ಅತ್ಯಧಿಕ ತಾಪ ಉಂಟಾಗುತ್ತದೆ. ಈ ಪ್ರಕ್ರಿಯೆ ಕುತೂಹಲಕಾರಿಯಾಗಿ ಮುಂದುವರಿದಿದ್ದು, ಮಿಲಿಯನ್​ ವರ್ಷಗಳಿಂದ ನಮಗೆ ಬೆಳಕು, ತಾಪ, ಅಲ್ಟ್ರಾ ವೈಲಟ್​ ಬರುತ್ತಿದೆ. ಭೂಮಿಯಲ್ಲಿ ಅಷ್ಟೊಂದು ಪ್ರಮಾಣದ ತಾಪಮಾನ ಸೃಷ್ಟಿಸಲು ಸಾಧ್ಯವಿಲ್ಲ. ಪ್ರಯತ್ನ ನಡೆದಿದ್ದರೂ ಅದು ಅಸಾಧ್ಯ. 1 ಸಾವಿರ ಡಿ.ಸೆ. ಮಾಡಲು ಸಾಧ್ಯವಿದ್ದು, ಆ ಕುರಿತಂತೆ 2012ರಿಂದ ್ರೆಂಚ್​ ವಿಜ್ಞಾನಿಯಿಂದ ಅಮೆರಿಕದಲ್ಲಿ ಪ್ರಯತ್ನ ಸಾಗಿದೆ. ಅದು ಯಶ ಕಾಣಲಿ. ಆದರೆ, ನೀರು ಮತ್ತು ಹೈಡ್ರೋಜನ್​ ನಮ್ಮಲ್ಲಿಯೇ ಇದೆ. ನಮ್ಮ ದೇಶದ ಶಕ್ತಿ ನಮ್ಮಲ್ಲಿಯೇ ಇರಬೇಕು. ಆತ್ಮ ನಿರ್ಭರ ಭಾರತ ನಮ್ಮದಾಗಬೇಕು ಎಂದರು.

ವಿದ್ಯಾರ್ಥಿಗಳಿಗೆ ಪ್ರೇರಣೆ

ಇಸ್ರೋ ಮಾಜಿ ವಿಜ್ಞಾನಿ ಡಾ.ಬಿ.ಆರ್​.ಗುರುಪ್ರಸಾದ್​ ಅವರು ಇಂಡಿಯನ್​ ಸ್ಪೇಸ್​ ಒರ್ಗಾನೈಸೇಷನ್​ (ಇಸ್ರೋ) ಕುರಿತು ಮಾತನಾಡಿ, ಭಾರತದಲ್ಲಿ ವಿವಿಧ ಸ್ಥರಗಳಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಹುರುದುಂಬಿಸುವಲ್ಲಿ, ಪ್ರೇರೇಪಿಸುವಲ್ಲಿ ಇಸ್ರೋ ಮಹತ್ವದ ಪಾತ್ರ ವಹಿಸಿದೆ. ಹೀಗಾಗಿಯೇ ಇಸ್ರೋವನ್ನು ವಿಶಿಷ್ಟ ಹಾಗೂ ಅನನ್ಯ ಸಂಸ್ಥೆ ಎಂದು ಬಣ್ಣಿಸಲಾಗುತ್ತದೆ ಎಂದು ತಿಳಿಸಿ, ಶ್ರೀಹರಿಕೋಟಾದಲ್ಲಿ ರಾಕೆಟ್​ ಉಡಾವಣೆ ಮಾಡುವ ರೀತಿ, ವಿಶಿಷ್ಟತೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. 
ಬೆಂಗಳೂರಿನ ಜೆಎನ್​ಸಿಎಎಸ್​ಆರ್​ನ ಸಂಶೋಧಕ ಡಾ.ವಿನಾಯಕ ಕೆ.ಪತ್ತಾರ್​ ಅವರು ರಾಸಾಯನಿಕಗಳ ವಿವಿಧ ವೈಜ್ಞಾನಿಕ ಕುತೂಹಲ ಹಾಗೂ ಕೋಲ್ಡ್​ ಪ್ಯೂಸನ್​ ಆಗುವ ರೀತಿಯನ್ನು ಪ್ರದರ್ಶಿಸಿದರು. ಅದಮಾರು ಮಠದ ಶಿಕ್ಷಣ ಮಂಡಳಿಯ ಗೌರವ ಕಾರ್ಯದರ್ಶಿ ಡಾ.ಎ.ಪಿ ಭಟ್​, ಕಾರ್ಯದರ್ಶಿ ಡಾ. ಜಿ.ಎಸ್​. ಚಂದ್ರಶೇಖರ್​, ಅಕಾಡೆಮಿ ನಿರ್ದೇಶಕ ಡಾ. ಪಿ.ಎಸ್​. ಐತಾಳ್​ ಉಪಸ್ಥಿತರಿದ್ದರು.

ವಿಜ್ಞಾನಿಗಳಿಗೆ ಸನ್ಮಾನ

ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಪಾದರು ಸಾಧಕ ವಿಜ್ಞಾನಿಗಳನ್ನು ಹಾಗೂ ಪೂರ್ಣಪ್ರಜ್ಞ ಕಾಲೇಜಿನ ಮಾಜಿ ಪ್ರಾಂಶುಪಾಲ ಪ್ರೊ.ಎನ್​.ಎ.ಮಧ್ಯಸ್ಥ ಅವರನ್ನು ಸನ್ಮಾನಿಸಿದರು. 
ಚಿನ್ಮಯಿ ರಾವ್​ ಹಾಗೂ ನಿಹಾರಿಕಾ ಪ್ರಾರ್ಥಿಸಿದರು. ಪ್ರಾಂಶುಪಾಲ ರಾಮು ಎಲ್​. ಸ್ವಾಗತಿಸಿದರು. ಉಪನ್ಯಾಸಕಿ ಪ್ರತೀಕ್ಷಾ ಪರಿಚಯಿಸಿದರು. ಡಾ. ವಿನಯಕುಮಾರ್​ ಡಿ. ವಂದಿಸಿದರು. ಕಂಪ್ಯೂಟರ್​ ಸೈನ್ಸ್​ ವಿಭಾಗದ ಸ್ನೇಹಲತಾ ಶೆಟ್ಟಿಗಾರ್​ ಕಾರ್ಯಕ್ರಮ ನಿರ್ವಹಿಸಿದರು.

ಕ್ವಾಂಟಮ್​ ಫಿಸಿಕ್ಸ್​ ಮಾಹಿತಿ

ಅಂತಾರಾಷ್ಟ್ರೀಯ ವಿಜ್ಞಾನ ತಂತ್ರಜ್ಞಾನ ಮತ್ತು ವಿಜ್ಞಾನಿಗಳ ಸಮ್ಮೇಳನವನ್ನು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ತರಬೇತಿ ಮತ್ತು ಶೈಕ್ಷಣಿಕ ನಿರ್ದೇಶಕ ಸಿ.ಎಂ. ಮಂಜುನಾಥ್​ ಉದ್ಘಾಟಿಸಿದರು. ಬೆಂಗಳೂರಿನ ಜವಾಹರಲಾಲ್​ ನೆಹರು ಸೆಂಟರ್​ ಫಾರ್​ ಅಡ್ವಾನ್ಸ್​ ಸೈಂಟಿಫಿಕ್​ ರಿಸರ್ಚ್​ ಥಿಯೋರಿಟಿಕಲ್​ ಸೈನ್ಸಸ್​ ಯುನಿಟ್​ ಪ್ರಾಧ್ಯಾಪಕ ಪ್ರೊ.ವಿದ್ಯಾಧಿರಾಜ ಎನ್​.ಎಸ್​., 'ಕ್ವಾಂಟಮ್​ ಫಿಸಿಕ್ಸ್​' ವಿಷಯ ಕುರಿತು ಹಾಗೂ 'ನ್ಯೂಟನ್​ನ ನಿಯಮ' ಕುರಿತು ಪವರ್​ ಪಾಯಿಂಟ್​ ಮೂಲಕ ಉಪನ್ಯಾಸ ನೀಡಿದರು. ಮೋಷನ್​, ಗ್ರ್ಯಾವಿಟೇಷನ್​ ಮತ್ತು ಕ್ಲಾಸಿಕಲ್​ ಇಲೆಕ್ಟ್ರೋಡೈನಾಮಿಕ್ಸ್​ ಈ ಮೂರು ಸಂಗತಿಗಳೇ ಫಿಸಿಕ್ಸ್​ನ ಮೂಲ ಆಧಾರವಾಗಿದೆ ಎನ್ನುವುದನ್ನು ವಿವಿಧ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಿಜಯಲಕ್ಷ್ಮೀ ಸಿ. ಭಟ್​, ಐಕ್ಯುಎಸಿ ಸಹ ಸಂಚಾಲಕ ಲಕ್ಷ್ಮೀಶ್​ ರಾವ್​ ಉಪಸ್ಥಿತರಿದ್ದರು. ಬಿಸಿಎ ವಿದ್ಯಾರ್ಥಿನಿ ನಯನಾ ಪ್ರಾರ್ಥಿಸಿದರು. ಕರಮಚಂದ ಕಿಶೋರ್​ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಅನೂಷಾ ಅತಿಥಿಗಳನ್ನು ಪರಿಚಯಿಸಿದರು.
"

ವಿಭುದೇಶ ತೀರ್ಥರ ಆಶೀರ್ವಾದಿಂದ ನಮಗೆ ವಿಜ್ಞಾನಿಗಳೊಂದಿಗೆ ಮಾತನಾಡುವ, ವೈಜ್ಞಾನಿಕ ವಿಚಾರ ಅರಿತುಕೊಳ್ಳಲು ಸಾಧ್ಯವಾಗುತ್ತಿದೆ. ನಮ್ಮ ಕಾಲ, ಬುದ್ಧಿಯ ಮಿತಿಯೂ ಚಿಕ್ಕದಿದೆ. ಹೀಗಾಗಿ ಹೊಸತನ ತಿಳಿಯುವುದರಿಂದ ಸಂತಸ ಲಭಿಸುತ್ತದೆಯೇ ಹೊರತು ವ್ಯಕ್ತಿಯಿಂದ ಅಥವಾ ವಸ್ತುವಿನಿಂದ ಅಲ್ಲ. ಯುವ ಸಮುದಾಯ ಭ್ರಮೆಗೆ ಸಿಲುಕದೆ ಜ್ಞಾನ ವರ್ಧನೆಗೆ ಯತ್ನಿಸಬೇಕು. ದುಶ್ಚಟಗಳಿಗೆ ಬಲಿಯಾಗದೆ ದೇಶದ ಸಂಪತ್ತಾದರೆ ಅದುವೇ ಪೂರ್ಣಪ್ರಜ್ಞ ಸಂಸ್ಥೆಗೆ ವಿದ್ಯಾರ್ಥಿಗಳು ನೀಡುವ ಕೊಡುಗೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net