ಚತುಷ್ಪಥ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಕಲ್ಲಡ್ಕ ಹಾಗೂ ಮೆಲ್ಕಾರ್ ನಡುವೆ ಬೋಳಂಗಡಿ ತಿರುವು ಹಾಗೂ ಏರು ರಸ್ತೆ ಈಗ ನೇರ ರಸ್ತೆಯಾಗಿ ಸಂಪೂರ್ಣ ಬದಲಾಗಿದೆ. ಏರು ರಸ್ತೆಯನ್ನು ತಗ್ಗಿಸಿ ಕಾಂಕ್ರೀಟೀಕರಣದ ಚತುಷ್ಪಥ ರಸ್ತೆಯಾಗಿದೆ. ಹೀಗಾಗಿ ನರಹರಿ ಪರ್ವತ ರಸ್ತೆಗೆ ಸಂಪರ್ಕಿಸುತ್ತಿದ್ದ ರಸ್ತೆಯನ್ನು ಕಡಿದು ಹಾಕಲಾಗಿತ್ತು. ಚತುಷ್ಪಥ ರಸ್ತೆಯಿಂದ ನರಹರಿ ಪರ್ವತ ಮತ್ತಷ್ಟು ಎತ್ತರವಾಗುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಇದಕ್ಕಾಗಿ, ಹೆದ್ದಾರಿ ಪಕ್ಕದಲ್ಲಿಯೇ ನರಹರಿ ಪರ್ವತಕ್ಕೆ ಹೋಗಲು ಅನುಕೂಲವಾಗುವ ಹೊಸ ರಸ್ತೆಯನ್ನು ಹೆದ್ದಾರಿ ಇಲಾಖೆಯೇ ನಿರ್ಮಿಸಿದೆ.