ಗ್ರಾಮದ ಚಂದ್ರ ಕಾಂಚನ್ ಮಾತನಾಡಿ, 2022ರಿಂದ ಜಿಲ್ಲಾಡಳಿತಕ್ಕೆ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಮನವಿ ನೀಡುತ್ತಲೇ ಇದ್ದೇವೆ. ಆದರೆ, ಯಾರೂ ಸಹ ಸ್ಪಂದಿಸುತ್ತಿಲ್ಲ. ಅವೈಜ್ಞಾನಿಕ ಮರಳುಗಾರಿಕೆಯಿಂದಾಗಿ ನಮ್ಮ ಭಾಗದ ಕೃಷಿ ಚಟುವಟಿಕೆಗೆ ತುಂಬ ಹಾನಿಯಾಗುತ್ತಿದೆ. ಮರಳು ತೆಗೆಯುವ ಕಾರ್ಯದಿಂದ ನೀರು ಕೊಚ್ಚಿಕೊಂಡು ಗದ್ದೆಗೆ ನುಗ್ಗುತ್ತಿವೆ. ತಡೆಗೋಡೆ ನಿರ್ಮಿಸಿ ಎಂದರೂ ಗಮನ ಹರಿಸುತ್ತಿಲ್ಲ. ನದಿಯಿಂದ ತೆಗೆದ ಮರಳನ್ನು ಸಾಗಿಸಲು ನಮ್ಮ ಹೊಲದ ಮಧ್ಯದಲ್ಲಿಯೇ ಕೆಂಪು ಮಣ್ಣು ಸುರಿದು ಅಕ್ರಮವಾಗಿ ರಸ್ತೆಯನ್ನೂ ಮಾಡಿದ್ದಾರೆ. ಅದರಿಂದಾಗಿ ಮಳೆಗಾಲದಲ್ಲಿ ನೀರು ಇನ್ನೊಂದುಕಡೆ ಸಾಗಲು ತೊಡಕುಂಟಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೆ ಅವರು ನಮಗೇ 'ಆತ್ಮ ವಿಮರ್ಶೆ ಮಾಡಿಕೊಳ್ಳಿ' ಎನ್ನುತ್ತಾರೆ. ಇದೆಂತಹ ಉತ್ತರ ಎಂದು ಅಸಮಾಧಾನ ವ್ಯಕ್ತಪಡಿಸಿದರು.