ಸೌಹಾರ್ದತೆಯ ಸಂಕೇತ ನಾಗಾರಾಧನೆ

 ಸಾಸ್ತಾನದ ಚೆಲ್ಲೆಮಕ್ಕಿ ಶ್ರೀ ನಾಗಬನದ ವರ್ಧಂತಿ ಉತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಸಾಧನೆಗೈದ  ಸ್ಥಳೀಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಿ.ಎ.ದೇವಾನಂದ, ಸುಧಾಕರ್ ಜಿ.ಆರ್., ರಮೇಶ್ ಗಾಣಿಗ ಇತರರು ಇದ್ದರು.
ಸಾಸ್ತಾನದ ಚೆಲ್ಲೆಮಕ್ಕಿ ಶ್ರೀ ನಾಗಬನದ ವರ್ಧಂತಿ ಉತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಸಾಧನೆಗೈದ ಸ್ಥಳೀಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಿ.ಎ.ದೇವಾನಂದ, ಸುಧಾಕರ್ ಜಿ.ಆರ್., ರಮೇಶ್ ಗಾಣಿಗ ಇತರರು ಇದ್ದರು.
Published on
ಕೋಟ: ನಾಗಾರಾಧನೆಯಿಂದ ಸಮಾಜ ಉದ್ಧಾರದ ಜತೆಗೆ ಪರಸ್ಪರ ಸೌಹಾರ್ದತೆಯನ್ನು ಸಾರುತ್ತದೆ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಸಿ.ಎ.ದೇವಾನಂದ ಹೇಳಿದರು.
ಸಾಸ್ತಾನದ ಚೆಲ್ಲೆಮಕ್ಕಿ ಶ್ರೀ ನಾಗಬನದ ಪುನಃ ನಿರ್ಮಾಣ ಜೀರ್ಣೋದ್ಧಾರ ಹಾಗೂ ವರ್ಧಂತಿ ಉತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಸಾಧನೆಗೈದ ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಸಿಎ ಪರೀಕ್ಷೆ ಉತ್ತಿರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಂದಾರ್ತಿ ದೇಗುಲದ ಮಾಜಿ ಟ್ರಸ್ಟಿ ಶಂಭು ತಿಂಗಳಾಯ ಅವರನ್ನು ಅಭಿನಂದಿಸಲಾಯಿತು. ಸಭೆ ಅಧ್ಯಕ್ಷತೆಯನ್ನು ನಾಗಬನದ ಅಧ್ಯಕ್ಷ ಸುಧಾಕರ್ ಜಿ.ಆರ್. ವಹಿಸಿದ್ದರು.
ಕುಂದಾಪುರ ಶ್ರೀ ವೇಣುಗೋಪಾಲಕೃಷ್ಣ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಅಧ್ಯಕ್ಷ ರಮೇಶ್ ಗಾಣಿಗ ಕೊಲ್ಲೂರು, ಉದ್ಯಮಿ ಮಾಧವ ಪೂಜಾರಿ ಸಾಲಿಗ್ರಾಮ, ನಾಗಬನ ಸಮಿತಿ ಉಪಾಧ್ಯಕ್ಷ ಬಾಲಕೃಷ್ಣ ಬಿರ್ತಿ, ಕೋಶಾಧಿಕಾರಿ ಪರಮೇಶ್ವರ ಗಾಣಿಗ, ಕಾರ್ಯಾಧ್ಯಕ್ಷ ದಿನಕರ್ ವಿ.ರಾವ್, ಎಲ್‌ಐಸಿ ಅಧಿಕಾರಿ ನಾಗರಾಜ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಗಣೇಶ್ ಜಿ.ಸ್ವಾಗತಿಸಿದರು.
ಕಾರ್ಯಕ್ರಮವನ್ನು ಶೈಲಜಾ ವಿವೇಕ್ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಶೇರುಗಾರ್ ವಂದಿಸಿದರು. ಧಾರ್ಮಿಕ ಕಾರ್ಯಕ್ರಮವನ್ನು ಪ್ರಸನ್ನ ತುಂಗ ನೆರವೇರಿಸಿದರು. ಸುಬ್ರಹ್ಮಣ್ಯ ಮಧ್ಯಸ್ಥ ನಾಗಸಂದರ್ಶನ ನೆರವೇರಿಸಿದರು. ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ರಾತ್ರಿ ಮಂದಾರ್ತಿ ಮೇಳದಿಂದ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net