ಗುಂಡಾಲು ಕ್ಷೇತ್ರದಲ್ಲಿ ನಾಗಮಂಡಲೋತ್ಸವ

 ಗುಂಡಾಲು ಶ್ರೀ ಬ್ರಹ್ಮಲಿಂಗೇಶ್ವರ ದೇವಳದಲ್ಲಿ ಚತುಃಪವಿತ್ರ ನಾಗಮಂಡಲೋತ್ಸವ ಅಂಗವಾಗಿ ಪಲ್ಲಪೂಜೆ ನಡೆಯಿತು. ಹಳ್ಳಿ ರಾಮಚಂದ್ರ ಶಾಸ್ತ್ರಿ, ಬನ್ನಾಡಿ ಗಣೇಶ್ ಭಟ್, ರಾಕೇಶ್ ಜೈನ್ ಮೊದಲಾದವರು ಇದ್ದರು.
ಗುಂಡಾಲು ಶ್ರೀ ಬ್ರಹ್ಮಲಿಂಗೇಶ್ವರ ದೇವಳದಲ್ಲಿ ಚತುಃಪವಿತ್ರ ನಾಗಮಂಡಲೋತ್ಸವ ಅಂಗವಾಗಿ ಪಲ್ಲಪೂಜೆ ನಡೆಯಿತು. ಹಳ್ಳಿ ರಾಮಚಂದ್ರ ಶಾಸ್ತ್ರಿ, ಬನ್ನಾಡಿ ಗಣೇಶ್ ಭಟ್, ರಾಕೇಶ್ ಜೈನ್ ಮೊದಲಾದವರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಇಲ್ಲಿನ ಗುಂಡಾಲು ಶ್ರೀ ಬ್ರಹ್ಮಲಿಂಗೇಶ್ವರ ಶ್ರೀ ನಾಗಬ್ರಹ್ಮ ಹಾಗೂ ಸಪರಿವಾರ ದೇವಸ್ಥಾನದಲ್ಲಿ ಹಳ್ಳಿ ರಾಮಚಂದ್ರ ಶಾಸಿ ನೇತೃತ್ವ ಹಾಗೂ ಬನ್ನಾಡಿ ಗಣೇಶ್ ಭಟ್ ಮಾರ್ಗದರ್ಶನದೊಂದಿಗೆ ಚತುಃಪವಿತ್ರ ನಾಗಮಂಡಲೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಗುರುಗಣಪತಿ ಪೂಜೆ, ಪುಣ್ಯಾಹ ವಾಚನ, ವಾತೃ ಪೂಜೆ, ಋತ್ವಿಗ್ವರಣೆ, ಷಣ್ಣಾಳಿಕೇರ ಮಹಾಗಣಪತಿ ಹೋಮ, ಚತುರ್ವೇದ ಪಾರಾಯಣ, ನವಗ್ರಹ ಹೋಮ, ಪವವಾನ ಹೋಮ, ಕೂಷ್ಮಾಂಡ ಹೋಮ, ಅಯುತ ಸಂಖ್ಯಾತಿಲ ಹೋಮ, ದುರ್ಗಾ ಹೋಮ, ಸರ್ಪಸೂಕ್ತ ಹೋಮ, ಆಶ್ಲೇಷಾ ಬಲಿ ಉದ್ಯಾಪನ ಹೋಮ ನಡೆಯಿತು. ಬಳಿಕ ಚತುರ್ವಿಂಶತಿ ಪರಿಕಲಶೈ ಸಹ ದ್ರವ್ಯಮಿಳಿತ ಕಲಾತತ್ವ ಬ್ರಹ್ಮಕಲಶ ಸ್ಥಾಪನೆ, ಕಲಾತತ್ವಹೋಮ, ಕಲಶಾಧೀವಾಸ ಹೋಮ, ಬ್ರಹ್ಮಕಲಶಾಭಿಷೇಕ ಪೂರ್ವಕ ಮಹಾಪೂಜೆ, ಕನ್ನಿಕಾ, ಸುವಾಸಿನಿ ಪೂಜೆ, ವಟು, ಬ್ರಾಹ್ಮಣ ದಂಪತಿ ಆಚಾರ್ಯ ಪೂಜೆ, ಸಂದರ್ಶನ, ಪಲ್ಲಪೂಜೆ ಕಾರ್ಯಕ್ರಮಗಳು ಜರುಗಿದವು.
ಸಮಿತಿ ಗೌರವಾಧ್ಯಕ್ಷ ರಾಕೇಶ್ ಜೈನ್, ರಾಜೇಶ್ ಜೈನ್ ಕೊಕ್ಕರ್ಣೆ ಅರಮನೆ, ಗಿರೀಶ್ ಉಡುಪ ಕೋಟಂಬೈಲು, ಸಲಹಾ ಸಮಿತಿಯ ರಾಜೇಶ್ ಜೈನ್, ಗಾಡು ನಾಯ್ಕ ಮತ್ತು ಕುಟುಂಬಸ್ಥರು, ಅಧ್ಯಕ್ಷ ಗೋಪಾಲ ನಾಯ್ಕ ಗುಂಡಾಲು, ಪ್ರಮುಖರಾದ ಶಂಕರ ನಾಯ್ಕ, ಅಶೋಕ ನಾಯ್ಕ, ರತ್ನಾಕರ ನಾಯ್ಕ, ಜಯಕರ ನಾಯ್ಕ, ಯಶೋದಾ, ಸತೀಶ ನಾಯ್ಕ, ಸದಸ್ಯರು, ವಿವಿಧ ಸಂ ಸಂಸ್ಥೆಯವರು ಮತ್ತಿತರರು ಉಪಸ್ಥಿತರಿದ್ದರು.
ಹೊರೆಕಾಣಿಕೆ ಮೆರವಣಿಗೆ: ಚತುಃಪವಿತ್ರ ನಾಗಮಂಡಲೋತ್ಸವದ ಪ್ರಯುಕ್ತ ಕೊಕ್ಕರ್ಣೆಯ ಶ್ರೀ ನಾರಾಯಣ ಗುರು ಮಂದಿರದಿಂದ ಶ್ರೀ ಬ್ರಹ್ಮಲಿಂಗೇಶ್ವರ ಶ್ರೀ ನಾಗಬ್ರಹ್ಮ ಹಾಗೂ ಸಪರಿವಾರ ದೇವಸ್ಥಾನಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net