ನಾಡೋಜ ಡಾ. ಜಿ.ಶಂಕರ್​ 71ನೇ ಹುಟ್ಟುಹಬ್ಬ

ನಾಡೋಜ ಡಾ. ಜಿ.ಶಂಕರ್​ ಅವರು 71ನೇ ಜನ್ಮದಿನದ ನಿಮಿತ್ತ ಪತ್ನಿ ಶಾಲಿನಿ ಉಪಸ್ಥಿತಿಯಲ್ಲಿ ಕಿಡ್ನಿ ವೈಫಲ್ಯತೆಗೊಳಗಾದ ಕಿದಿಯೂರಿನ ವಿನಯ ಟಿ. ಸುವರ್ಣ ಅವರಿಗೆ ಧನ ಸಹಾಯದ ಚೆಕ್​ ಹಸ್ತಾಂತರಿಸಿದರು.
ನಾಡೋಜ ಡಾ. ಜಿ.ಶಂಕರ್​ ಅವರು 71ನೇ ಜನ್ಮದಿನದ ನಿಮಿತ್ತ ಪತ್ನಿ ಶಾಲಿನಿ ಉಪಸ್ಥಿತಿಯಲ್ಲಿ ಕಿಡ್ನಿ ವೈಫಲ್ಯತೆಗೊಳಗಾದ ಕಿದಿಯೂರಿನ ವಿನಯ ಟಿ. ಸುವರ್ಣ ಅವರಿಗೆ ಧನ ಸಹಾಯದ ಚೆಕ್​ ಹಸ್ತಾಂತರಿಸಿದರು.
Published on: 

* 412 ಕ್ಯಾನ್ಸರ್​, 224 ಕಿಡ್ನಿ ರೋಗಿಗಳಿಗೆ ಸಹಾಯಧನ

* ಯಕ್ಷಗಾನ ಕಲಾವಿದರು, ರುದ್ರಭೂಮಿ ನೌಕರರಿಗೆ ಸಹಾಯಹಸ್ತ

ಉಡುಪಿ: ನಾಡೋಜ ಡಾ. ಜಿ.ಶಂಕರ್​ ಅವರ 71ನೇ ಜನ್ಮದಿನದ ನಿಮಿತ್ತ ಉಡುಪಿ, ದಕ್ಷಿಣ ಕನ್ನಡ ಹಾಗೂ ಇನ್ನಿತರ ಜಿಲ್ಲೆಗಳಲ್ಲಿ ಆರ್ಥಿಕ ತೊಂದರೆಯಲ್ಲಿರುವವರಿಗೆ ಸಹಾಯಧನ ವಿತರಿಸಲಾಯಿತು.

ಆಯ್ದ ಆಸ್ಪತ್ರೆಗಳಲ್ಲಿ ಕ್ಯಾನ್ಸರ್​, ಕಿಡ್ನಿ ಹಾಗೂ ಹೃದ್ರೋಗಿಗಳಿಗೆ ಚಿಕಿತ್ಸೆ ಪಡೆಯುತ್ತಿರುವವರಿಗೆ ವಿಶೇಷ ಶಾಲೆಗಳಿಗೆ, ಹಿರಿಯ ಯಕ್ಷಗಾನ ಕಲಾವಿದರಿಗೆ, ಸಾರ್ವಜನಿಕ ರುದ್ರಭೂಮಿಗಳಲ್ಲಿ ಶವ ಸಂಸ್ಕಾರ ಕೆಲಸ ಮಾಡುವ ಬಂಧುಗಳಿಗೆ ಸಹಾಯಧನ ವಿತರಿಸಲಾಯಿತು.

ಕೆಎಂಸಿ ಮಣಿಪಾಲದಲ್ಲರಿವ 145 ಕ್ಯಾನ್ಸರ್​ ರೋಗಿಗಳು, 28 ಕಿಡ್ನಿ ರೋಗಿಗಳು ಮತ್ತು ಹೃದ್ರೋಗಿಗಳಿಗೆ, ಕೆಎಂಸಿ ಅತ್ತಾವರ ಮಂಗಳೂರಿನ 53 ಕ್ಯಾನ್ಸರ್​ ಹಾಗೂ 46 ಕಿಡ್ನಿ ರೋಗಿಗಳು, ಕೆಎಂಸಿ ಮಂಗಳೂರು ಜ್ಯೋತಿಯ 17 ಕ್ಯಾನ್ಸರ್​ ಹಾಗೂ 50 ಕಿಡ್ನಿ ರೋಗಿಗಳು, ಫಾದರ್​ ಮುಲ್ಲರ್​ ಮಂಗಳೂರಿನ 76 ಕ್ಯಾನ್ಸರ್​ ಹಾಗೂ 19 ಕಿಡ್ನಿ ರೋಗಿಗಳು, ವೆನ್ಲಾಕ್​ ಆಸ್ಪತ್ರೆ ಮಂಗಳೂರಿನ 45 ಕ್ಯಾನ್ಸರ್​ ಹಾಗೂ 35 ಕಿಡ್ನಿ ರೋಗಿಗಳು, ಎಂಐಒ ಮಂಗಳೂರಿನ 24 ಕ್ಯಾನ್ಸರ್​ ರೋಗಿಗಳು, ಸರ್ಕಾರಿ ಆಸ್ಪತ್ರೆ ಮಂಗಳೂರಿನ 11 ಕ್ಯಾನ್ಸರ್​ ಹಾಗೂ 2 ಕಿಡ್ನಿ ರೋಗಿಗಳು.

ಆದರ್ಶ ಆಸ್ಪತ್ರೆ ಉಡುಪಿಯ 17 ಕ್ಯಾನ್ಸರ್​ ಹಾಗೂ 29 ಕಿಡ್ನಿ ರೋಗಿಗಳು, ಗಾಂಧಿ ಆಸ್ಪತ್ರೆ ಉಡುಪಿಯ 6 ಕ್ಯಾನ್ಸರ್​ ರೋಗಿಗಳು, ಸರ್ಕಾರಿ ಆಸ್ಪತ್ರೆ ಕುಂದಾಪುರದ 11 ಕ್ಯಾನ್ಸರ್​ ಹಾಗೂ 5 ಕಿಡ್ನಿ ರೋಗಿಗಳು, ಸರ್ಕಾರಿ ಆಸ್ಪತ್ರೆ ಬ್ರಹ್ಮಾವರದ 10 ಕಿಡ್ನಿ ರೋಗಿಗಳು ಹಾಗೂ ಇನ್ನಿತರ 7 ಕ್ಯಾನ್ಸರ್​ ರೋಗಿಗಳು ಸೇರಿದಂತೆ ಒಟ್ಟು 412 ಕ್ಯಾನ್ಸರ್​ ರೋಗಿಗಳು ಹಾಗೂ 224 ಕಿಡ್ನಿ ಸಮಸ್ಯೆ ಬಾಧಿತರಿಗೆ ಸಹಾಯಹಸ್ತ ನೀಡಲಾಯಿತು.

ಉಭಯ ಜಿಲ್ಲೆಗಳ 89 ಹಿರಿಯ ಯಕ್ಷಗಾನ ಕಲಾವಿದರು, ಉಭಯ ಜಿಲ್ಲೆಗಳ 31 ವಿಶೇಷ ಶಾಲೆ ಹಾಗೂ ರುದ್ರಭೂಮಿಯಲ್ಲಿ ದಿನಂಪ್ರತಿ ಶವ ಸಂಸ್ಕಾರದಲ್ಲಿ ತೊಡಗುವವರಿಗೆ ಸಹಾಯಹಸ್ತ ನೀಡಲಾಯಿತು.

ಕ್ಯಾನ್ಸರ್​, ಕಿಡ್ನಿ, ವಿಶೇಷ ಶಾಲೆ ಹಾಗೂ ರುದ್ರಭೂಮಿ ನೌಕರರಿಗೆ ತಲಾ 25 ಸಾವಿರ ರೂ., ಯಕ್ಷಗಾನ ಕಲಾವಿದರಿಗೆ ತಲಾ 10 ಸಾವಿರ ರೂ.ವನ್ನು ಅವರ ಬ್ಯಾಂಕ್​ ಖಾತೆಗಳಿಗೆ ಈಗಾಗಲೇ ನೇರ ಜಮಾ ಮಾಡಲಾಗಿದೆ ಎಂದು ಜಿ.ಶಂಕರ್​ ಫ್ಯಾಮಿಲಿ ಟ್ರಸ್ಟ್​ ಉಡುಪಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net