

ಸೇನಾಪುರ ರೈಲ್ವೆ ನಿಲ್ದಾಣ ಬಳಿಯಿಂದ ನಾಡಗುಡ್ಡೆಯಂಗಡಿ ಸಂಪರ್ಕಿಸುವ ರಸ್ತೆಯ ಅಲ್ಲಲ್ಲಿ ಅನೇಕ ಹೊಂಡ ಗುಂಡಿ ಬಿದ್ದಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಪ್ರತಿ ವರ್ಷ ತೇಪೆ ಹಾಕುವ ಕಾರ್ಯ ವಾತ್ರ ನಡೆದಿದೆ ಬಿಟ್ಟರೆ ರಸ್ತೆ ಅಭಿವೃದ್ಧಿಯಾಗದೆ ದಶಕಗಳೇ ಕಳೆದಿವೆ. ಈ ಬಾರಿಯಾದರೂ ಈ ರಸ್ತೆ ಅಭಿವೃದ್ಧಿಗೆ ಸರ್ಕಾರ ಅನುದಾನ ಮಂಜೂರು ವಾಡಬೇಕು.