ಉಡುಪಿ: ದಿ.ನೆಂಪು ನರಸಿಂಹ ಭಟ್ ವಿಶೇಷ, ವಿಶಿಷ್ಟ ಸಾಹಿತಿ. 1980ರ ದಶಕದಲ್ಲಿಯೇ ನನಗೆ ಪರಿಚಯವಿದ್ದು ಹತ್ತಿರದಿಂದ ಅವರ ಜೀವನ ಕಂಡಿದ್ದೇನೆ. ಮಕ್ಕಳ ಸಾಹಿತ್ಯದ ಬಗ್ಗೆ ಅಪಾರ ಒಲವು ಹೊಂದಿದ್ದರಲ್ಲದೆ, ಬರೆದಂತೆಯೇ ಬದುಕಿದ್ದರು. ಕೃತಿಗೂ ಹಾಗೂ ಅವರ ಜೀವನಕ್ಕೂ ಸಾಮ್ಯತೆ ಇತ್ತು. ಸಂಸಾರ, ಸಂಸ್ಕಾರ ಹಾಗೂ ಸಂಸ್ಕೃತಿ ಈ ಮೂರೂ ಸಹ ಅವರ ವ್ಯಕ್ತಿತ್ವದೊಳಗಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.