ಪರ್ಯಾಯದ 730 ದಿನಗಳಲ್ಲಿ ಶ್ರೀಕೃಷ್ಣನ ಆರಾಧನೆಯನ್ನು ಭಗವದ್ಗೀತೆಯ ಮೂಲಕ ಆಚರಿಸಲು 'ವಿಶ್ವ ಗೀತಾ' ಪರ್ಯಾಯ ಎಂದು ನಾಮಕರಣ ಮಾಡಲಾಗಿತ್ತು. ಕೋಟಿ ಜನರಿಂದ ಗೀತೆ ಬರೆಸಿ ಅದನ್ನು ಶ್ರೀಕೃಷ್ಣನಿಗೆ ಸಮರ್ಪಿಸುವ ಕೋಟಿ ಗೀತಾ ಲೇಖನ ಯಜ್ಞ, ಗೀತಾಮಂದಿರದಲ್ಲಿ ಅಖಂಡ ಗೀತಾ ಪಾರಾಯಣ, ವಿಶ್ವಗೀತಾ ಸಮ್ಮೇಳನ, ಭಗವದ್ಗೀತೆಯ ಯಾಗಗಳು, ಲಕ್ಷ ಜನರಿಂದ ಗೀತಾ ಪಾರಾಯಣ, ಸಾವಿರಾರು ವಿದ್ವಾಂಸರಿಂದ ಗೀತೆಯ ಸಂವಾದ ಹಾಗೂ ಪ್ರವಚನ, ನೂರಾರು ಮಠಾಧಿಪತಿಗಳಿಂದ ಸಂತ ಸಂದೇಶ, ಸಾವಿರಾರು ಕಲಾವಿದರಿಂದ ಭರತನಾಟ್ಯ, ಸಂಗೀತ, ಪಾಠ-ಪ್ರವಚನ ಎಲ್ಲವೂ ಸಹ ಗೀತಾಮಯವಾಗಿಯೇ ನಡೆದು ನಮ್ಮ ಸಂಕಲ್ಪ ಎಲ್ಲವೂ ಈಡೇರಿದೆ ಎಂದರು.