ಕೋಟ ಪತ್ರಕ್ಕೆ ಸ್ಪಂದಿಸಿ, ಮರುಪತ್ರದ ಮೂಲಕ ಉತ್ತರಿಸಿರುವ ಸಚಿವ ಕಿಂಜರಾಪು, ಈಗಾಗಲೇ ತಮ್ಮ ಪತ್ರದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಲಿಮಿಟೆಡ್ನೊಂದಿಗೆ ಸಮಾಲೋಚನೆ ಮಾಡಿದ್ದೇನೆ. ಮಾರ್ಚ್ ತಿಂಗಳಿನಿಂದ ಮಸ್ಕತ್-ಮಂಗಳೂರು ಮಾರ್ಗದಲ್ಲಿ ವಿಮಾನಯಾನ ಸಂಚಾರ ಪುನರಾರಂಭಿಸುವ ಬಗ್ಗೆ ಸಂಸ್ಥೆಯವರೊಂದಿಗೆ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.