ಮುರಾರಿ-ಕೆದ್ಲಾಯ ರಂಗೋತ್ಸವ ಮಾ.13ರಿಂದ

ಉಡುಪಿಯಲ್ಲಿ ಡ್ರಾಮಾ
ಉಡುಪಿಯಲ್ಲಿ ಡ್ರಾಮಾ
Published on

* ಮುದ್ದಣ ಮಂಟಪದಲ್ಲಿ 3 ದಿನ ನಾಟಕೋತ್ಸವ

ಉಡುಪಿ: ರಥಬೀದಿ ಗೆಳೆಯರು (ರಿ.) ಉಡುಪಿ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಪ್ರತಿವರ್ಷ ಆಯೋಜಿಸುವ ಮುರಾರಿ-ಕೆದ್ಲಾಯ ರಂಗೋತ್ಸವ ಮಾ.13, 14 ಮತ್ತು 15ರಂದು ಸಂಜೆ 6:30ಕ್ಕೆ  ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ.
ಮಾ.13ರಂದು ಸಂಜೆ 5:45ಕ್ಕೆ ಮೈಸೂರು ರಂಗಾಯಣದ ನಿರ್ದೇಶಕ ಸತೀಶ್​ ತಿಪಟೂರು 'ರಂಗೋತ್ಸವ" ಉದ್ಘಾಟಿಸಲಿದ್ದಾರೆ. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ ಪಾಲ್ಗೊಳ್ಳಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ರಂಗಾಯಣ ಮೈಸೂರು ರೆಪರ್ಟರಿ ಕಲಾವಿದರಿಂದ ಕೋಟಿಗಾನ ಹಳ್ಳಿ ರಾಮಯ್ಯ ರಚನೆಯ, ಚಿದಂಬರ್​ ರಾವ್​ ಜಂಬೆ ನಿರ್ದೇಶನದ 'ಅಂಬೇಡ್ಕರ್​ ಕೊಲಾಜ್​' ನಾಟಕ ಪ್ರದರ್ಶನಗೊಳ್ಳಲಿದೆ.
ಮಾ.14ರಂದು ಸಮುದಾಯ ಶಿವಮೊಗ್ಗ ಕಲಾವಿದರಿಂದ ಡಾ.ಸಾಸ್ವೇಹಳ್ಳಿ ಸತೀಶ್​ ಹಾಗೂ ಐ.ಕೆ. ಬೊಳುವಾರು ರಂಗರೂಪದಲ್ಲಿ, ಡಾ.ಸಾಸ್ವೇಹಳ್ಳಿ ಸತೀಶ್​ ನಿರ್ದೇಶನದಲ್ಲಿ 'ನೀರೊಳಗಣ ಕಿಚ್ಚು' ನಾಟಕ ಪ್ರದರ್ಶನಗೊಳ್ಳಲಿದೆ. 
ಮಾ.15ರಂದು ಸಮುದಾಯ ಬೆಂಗಳೂರು ಕಲಾವಿದರಿಂದ ಕೆ.ಆರ್​. ಮೀರಾ ಅವರ ಮಲಯಾಳಂ ಮೂಲ ಕಥೆಯನ್ನು ಕೆ. ಪ್ರಭಾಕರನ್​ ಕನ್ನಡಕ್ಕೆ ಭಾಷಾಂತರಿಸಿದ ಹಾಗೂ ಡಾ.ಸ್ಯಾಮ್​ ಕುಟ್ಟಿ ಪಟ್ಟಂಕರಿ ರಂಗರೂಪ/ನಿರ್ದೇಶನದಲ್ಲಿ 'ಭಗವಂತನ ಮರಣ' ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಎಂದು ಸಂಸ್ಥೆಯ ನಾಟಕ ವಿಭಾಗದ ಸಂಚಾಲಕರಾದ ಸಂತೋಷ್​ ಶೆಟ್ಟಿ ಹಿರಿಯಡ್ಕ ಮತ್ತು ಸಂತೋಷ್​ ನಾಯಕ್​ ಪಟ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net