ದೇಶದ ಉನ್ನತಿಗೆ ಶ್ರಮಿಸುವ ಪರಿಜ್ಞಾನವಿರಲಿ

ಉಡುಪಿ ಗಾಂಧಿ ಆಸ್ಪತ್ರೆಯಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಡಾ. ಆರ್​.ಎನ್​. ಭಟ್​,  ಎಂ.ಹರಿಶ್ಚಂದ್ರ, ಡಾ. ವ್ಯಾಸರಾಜ ತಂತ್ರಿ, ಡಾ. ಸುರೇಶ್​ ಹೆಗ್ಡೆ, ಡಾ. ಮಧುಸೂದನ್​ ನಾಯಕ್​, ಡಾ. ಕಿರಣಕುಮಾರ್​ ಎನ್​., ಡಾ. ವೈ.ಸುರ್ದಶನ್​ ರಾವ್​, ಡಾ. ಸತ್ಯಪಾಲ್​ ನಂಬಿಯಾರ್​, ಡಾ. ಸೂರಜ್​ ಹೆಗ್ಡೆ, ಡಾ. ಟಿ.ಶ್ರೀಧರ್​ ಬಾಯರಿ, ಡಾ. ರೋಶನ್​, ಡಾ. ವಿದ್ಯಾ ವಿ. ತಂತ್ರಿ, ಡಾ. ಪಂಚಮಿ ಇತರರಿದ್ದರು.
ಉಡುಪಿ ಗಾಂಧಿ ಆಸ್ಪತ್ರೆಯಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಡಾ. ಆರ್​.ಎನ್​. ಭಟ್​, ಎಂ.ಹರಿಶ್ಚಂದ್ರ, ಡಾ. ವ್ಯಾಸರಾಜ ತಂತ್ರಿ, ಡಾ. ಸುರೇಶ್​ ಹೆಗ್ಡೆ, ಡಾ. ಮಧುಸೂದನ್​ ನಾಯಕ್​, ಡಾ. ಕಿರಣಕುಮಾರ್​ ಎನ್​., ಡಾ. ವೈ.ಸುರ್ದಶನ್​ ರಾವ್​, ಡಾ. ಸತ್ಯಪಾಲ್​ ನಂಬಿಯಾರ್​, ಡಾ. ಸೂರಜ್​ ಹೆಗ್ಡೆ, ಡಾ. ಟಿ.ಶ್ರೀಧರ್​ ಬಾಯರಿ, ಡಾ. ರೋಶನ್​, ಡಾ. ವಿದ್ಯಾ ವಿ. ತಂತ್ರಿ, ಡಾ. ಪಂಚಮಿ ಇತರರಿದ್ದರು.
Published on

* ಡಾ. ಆರ್​.ಎನ್​. ಭಟ್​ ಕಿವಿಮಾತು

* ಗಾಂಧಿ ಆಸ್ಪತ್ರೆಯಲ್ಲಿ ಪೌರಕಾರ್ಮಿಕರಿಗೆ ಸನ್ಮಾನ

ಉಡುಪಿ: ನಮಗೆ ಲಭಿಸಿರುವ ಸ್ವಾತಂತ್ರ್ಯವನ್ನು ಯಾವ ರೀತಿ ಬಳಸಿಕೊಂಡು ದೇಶದ ಉನ್ನತಿಗೆ ಶ್ರಮಿಸಬೇಕು ಎಂಬ ಪರಿಜ್ಞಾನ ಎಲ್ಲರಿಗೂ ಇರಬೇಕು. ದೇಶದ ಸಂಸ್ಕೃತಿ, ಸಂಪ್ರದಾಯಕ್ಕೆ ಧಕ್ಕೆ ಆಗದಂತೆ ಯುವ ಸಮುದಾಯ ವರ್ತಿಸಬೇಕು ಎಂದು ಡಾ. ಆರ್​.ಎನ್​. ಭಟ್​ ಕಿವಿಮಾತು ಹೇಳಿದರು.
ಉಡುಪಿಯ ಗಾಂಧಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವದ ನಿಮಿತ್ತ ಉಡುಪಿ ನಗರಸಭೆಯ ಪೌರ ಕಾರ್ಮಿಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಸ್ಪತ್ರೆಯ ಸಿಬ್ಬಂದಿ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲಾಯಿತು. ವಿಶೇಷ ಮಕ್ಕಳ ಕಾಳಜಿ ವಹಿಸುವ ಉಡುಪಿಯ ಉಪ್ಪೂರು ಸಾಲ್ಮರದ ಸ್ಪಂದನ ಶಾಲೆಯ ಪ್ರಮುಖ ಜನಾರ್ದನ ಅವರಿಗೆ ಸಹಾಯಧನ ಹಸ್ತಾಂತರಿಸಲಾಯಿತು. ಪರಿಸರ ಕಾಳಜಿ ನಿಮಿತ್ತ ಹಲವಾರು ರೀತಿಯ ಸಸಿ ವಿತರಿಸಲಾಯಿತು.
ಪೌರ ಕಾರ್ಮಿಕರಾದ ಭೋಜ, ಕೆ. ಪ್ರವೀಣ್​, ಸುನೀಲ್​, ತಿಪ್ಪೇಶ್​, ಚಿದಾನಂದ್​, ಪೂರ್ಣಿಮಾ, ಚಿತ್ರಕಲಾ, ತ್ಯಾಜ್ಯ ವಿಲೇವಾರಿ ಸಿಬ್ಬಂದಿ ರಾಜು, ಪರಶುರಾಮ್​ ಮತ್ತು ಸಂತೋಷ್​ ಅವರನ್ನು ಸನ್ಮಾನಿಸಲಾಯಿತು.
ಆಸ್ಪತ್ರೆಯ ಸಂಸ್ಥಾಪಕ ಎಂ.ಹರಿಶ್ಚಂದ್ರ ಮಾತನಾಡಿ, ಯುವ ಜನಾಂಗದ ಸಾಮಾಜಿಕ ಜವಾಬ್ದಾರಿ ಮತ್ತು ಕರ್ತವ್ಯ ನಿಷ್ಠೆಯ ಬಗ್ಗೆ ತಿಳಿಸಿದರು.
ಡಾ. ಸುರೇಶ್​ ಹೆಗ್ಡೆ, ಡಾ. ಮಧುಸೂದನ್​ ನಾಯಕ್​, ಡಾ. ಕಿರಣಕುಮಾರ್​ ಎನ್​., ಡಾ. ವೈ.ಸುರ್ದಶನ್​ ರಾವ್​, ಡಾ. ಸತ್ಯಪಾಲ್​ ನಂಬಿಯಾರ್, ಡಾ. ಸೂರಜ್​ ಹೆಗ್ಡೆ, ಡಾ. ಟಿ.ಶ್ರೀಧರ್​ ಬಾಯರಿ, ಡಾ. ರೋಶನ್​, ಡಾ. ವಿದ್ಯಾ ವಿ. ತಂತ್ರಿ, ಡಾ. ಪಂಚಮಿ, ಪಂಚಮಿ ಟ್ರಸ್ಟ್​ನ ಲಕ್ಷ್ಮೀ ಹರಿಶ್ಚಂದ್ರ, ನಾಗೇಶ್​, ಪ್ರಕಾಶ್​, ಎಂ.ಡಿ. ಭಟ್​ ಉಪಸ್ಥಿತರಿದ್ದರು.
ಮನ್ಯು ವಿ ತಂತ್ರಿ, ಮಧ್ವ ವಿ. ತಂತ್ರಿ ಹಾಗೂ ವಿಜಯಲಕ್ಷ್ಮೀ ದೇಶಭಕ್ತಿ ಗೀತೆ ಹಾಡಿದರು. ಆಸ್ಪತ್ರೆಯ ಆಡಳಿತ ಹಾಗೂ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂರ್ಣಿಮ ಜನಾರ್ದನ್​ ಕಾರ್ಯಕ್ರಮ ನಿರ್ವಹಿಸಿದರು. ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net