

ಅದೆಷ್ಟೋ ಊರುಗಳಲ್ಲಿ ಸ್ಮಶಾನಕ್ಕೆ ಸೂಕ್ತ ಸ್ಥಳವಿಲ್ಲದೆ ಕಷ್ಟ ಪಡುತ್ತಿದಾರೆ. ಬ್ರಹ್ಮಾವರದಲ್ಲಿ ವಿಶಾಲ ಜಾಗ ಇದ್ದರೂ ಅದಕ್ಕೆ ಸೂಕ್ತ ವ್ಯವಸ್ಥೆ ಇಲ್ಲದಿರುವುದು ನಿರ್ಲಕ್ಷೃಕ್ಕೆ ಹಿಡಿದ ಕೈಗನ್ನಡಿಯಂತಿದೆ. ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಹಿಂದೂ ರುದ್ರಭೂಮಿಗೆ ಸೂಕ್ತ ವ್ಯವಸ್ಥೆ ಮಾಡಬೇಕಾಗಿದೆ
ಬಡವರ ಅನೇಕ ಶವಗಳು ದಹನಕ್ಕೆ ಬಂದಾಗ ಇಲ್ಲಿ ಕಟ್ಟಿಗೆ ಇಲ್ಲದಿರುವುದು, ದೂರ ಕೊಂಡು ಹೋಗಲು ಹಣ ಇರದವರಿಗೆ ಇಲ್ಲಿನ ಪರಿಸರದ ಜನರು ಸೇರಿ ಶವ ದಹನ ಕಾರ್ಯ ಮಾಡಿದ್ದೇವೆ. ಹಿಂದೂ ರುದ್ರಭೂಮಿಗೆ ಸೂಕ್ತ ಕಾಯಕಲ್ಪ ನೀಡಿ, ಸಾರ್ವಜನಿಕರಿಗೆ ಉಪಯುಕ್ತವಾಗುವಂತೆ ಮಾಡಬೇಕಾಗಿದೆ.