ಮೂಡೂರು-ಪಡೂರು ಕಂಬಳ ಫಲಿತಾಂಶ

 ಕಂಬಳ
ಕಂಬಳ
Published on
ಬಂಟ್ವಾಳ: ಮೂಡೂರು-ಪಡೂರು ಕಂಬಳ ಸಮಿತಿ ಆಶ್ರಯದಲ್ಲಿ ನಾವೂರು ಗ್ರಾಮದ ಕೂಡಿಬೈಲುವಿನಲ್ಲಿ ಶನಿವಾರ ನಡೆದ
15ನೇ ವರ್ಷದ ಮೂಡೂರು-ಪಡೂರು ಜೋಡುಕರೆ ಬಂಟ್ವಾಳ ಕಂಬಳದ ಫಲಿತಾಂಶ.
ಭಾಗವಹಿಸಿದ ಕೋಣಗಳು: ಕನೆಹಲಗೆ 11 ಜತೆ, ಅಡ್ಡಹಲಗೆ 8 ಜತೆ, ಹಗ್ಗ ಹಿರಿಯ 14 ಜತೆ, ನೇಗಿಲು ಹಿರಿಯ 26 ಜತೆ, ಹಗ್ಗ ಕಿರಿಯ 30 ಜತೆ, ನೇಗಿಲು ಕಿರಿಯ 62 ಜತೆ. ಒಟ್ಟು-151 ಜತೆ.
ಕನೆ ಹಲಗೆ ವಿಭಾಗದಲ್ಲಿ 6.5 ಕೋಲು ನಿಶಾನೆಗೆ ನೀರು ಹಾಯಿಸಿದವರು: ಪ್ರಥಮ-ಅಲ್ಲಿಪಾದೆ ಕೆಳಗಿನಮನೆ ವಿನ್ಸೆಂಟ್ ಪಿಂಟೋ, ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ.
ಅಡ್ಡ ಹಲಗೆ ವಿಭಾಗ: ಪ್ರಥಮ: ಇರುವೈಲು ದೊಡ್ಡಗುತ್ತು ಜಗದೀಶ್ ಎಂ.ಶೆಟ್ಟಿ(12.17). ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ, ದ್ಬಿತೀಯ-ನಕ್ರೆ ಕೊರಪಲಕಟ್ಟೆ ಲವೀನಾ ಡಿ.ಅಲ್ಮೇಡ (12.49). ಹಲಗೆ ಮುಟ್ಟಿದವರು: ಭಟ್ಕಳ ಪಾಂಡು.
ಹಗ್ಗ ಹಿರಿಯ ವಿಭಾಗ: ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ ಬಿ.(11.46) ಕೋಣ ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ, ದ್ವಿತೀಯ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್.ಕೋಟ್ಯಾನ್( 11.54). ಕೋಣ ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ.
ಹಗ್ಗ ಕಿರಿಯ ವಿಭಾಗ: ಪ್ರಥಮ-ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯ ಪೂಜಾರಿ( 11.65). ಕೋಣ ಓಡಿಸಿದವರು-ಭಟ್ಕಳ ಶಂಕರ್. ದ್ವಿತೀಯ-ಮಿಯಾರ್ ಬೋರ್ಕಟ್ಟೆ ಅನುಗ್ರಹ ಪ್ರಥಮ್ ಪ್ರಭಾಕರ ಶೆಟ್ಟಿ( 12.01). ಕೋಣ ಓಡಿಸಿದವರು-ಹೊಕ್ಕಾಡಿಗೋಳಿ ಗುರುಪ್ರಸಾದ್.
ನೇಗಿಲು ಹಿರಿಯ ವಿಭಾಗ: ಪ್ರಥಮ-ಮಾಣಿ ನಾಗರಾಜ ಶೆಟ್ಟಿ ಎ.( 11.59). ಕೋಣ ಓಡಿಸಿದವರು-ಸೂರಾಲ್ ಪ್ರದೀಪ್ ನಾಯ್ಕ, ದ್ವಿತೀಯ-ಮಾಣಿ ನಾಗರಾಜ ಶೆಟ್ಟಿ ಬಿ(11.05). ಕೋಣ ಓಡಿಸಿದವರು-ಕುಂದ ಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್.
ನೇಗಿಲು ಕಿರಿಯ ವಿಭಾಗ: ಪ್ರಥಮ-ಪಣೋಲಿಬೈಲು ಭಂಡಾರದ ಮನೆ ರಮೇಶ್ ಎಂ.ಕುಲಾಲ್ ಬಿ.(11.33), ಕೋಣ ಓಡಿಸಿದವರು-ಪಡು ಸಾಂತೂರು ಸುಕೇಶ್ ಪೂಜಾರಿ, ದ್ವಿತೀಯ-80 ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ(11.46), ಕೋಣ ಓಡಿಸಿದವರು-ಪಡು ಸಾಂತೂರು ಪೃಥ್ವಿರಾಜ್ ಪೂಜಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net