ಕೆಸರುಮಯ ರಸ್ತೆಗೆ ‘ಸಂಕ’ಷ್ಟ!

ಕಾರ್ಕಳಜಡ್ಡು ಸಂಪರ್ಕ ರಸ್ತೆಯಲ್ಲಿ ಹಳ್ಳ ಇರುವುದರಿಂದ ಸುಗಮ ಸಂಚಾರಕ್ಕೆ ತೊಡಕಾಗಿರುವುದು.
ಕಾರ್ಕಳಜಡ್ಡು ಸಂಪರ್ಕ ರಸ್ತೆಯಲ್ಲಿ ಹಳ್ಳ ಇರುವುದರಿಂದ ಸುಗಮ ಸಂಚಾರಕ್ಕೆ ತೊಡಕಾಗಿರುವುದು.
Published on

ನರೇಂದ್ರ ಎಸ್.ಮರಸಣಿಗೆ ಹೆಬ್ರಿ

ಬೇಸಿಗೆ ಕಾಲದಲ್ಲಿ ಮಣ್ಣು ತುಂಬಿಸಿ ರಸ್ತೆಯನ್ನು ಎಷ್ಟೇ ದುರಸ್ತಿ ವಾಡಿದರೂ ಮಳೆಗಾಲದಲ್ಲಿ ರಸ್ತೆಯ ಮಣ್ಣು ಕೊಚ್ಚಿ ಹೋಗಿ ಗುಂಡಿಗಳು ಬಿದ್ದು ಕಲ್ಲುಗಳು ರಸ್ತೆಯ ಮೇಲೆ ಹರಡಿ ನಡೆದುಕೊಂಡು ಹೋಗುವುದು ಕೂಡ ಕಷ್ಟವಾಗಿದೆ. ಇದರೊಂದಿಗೆ ಸುಸಜ್ಜಿತ ಸೇತುವೆ ಇಲ್ಲಿದೆ, ಆದರೆ ಮಳೆಗಾಲದಲ್ಲಿ ವಾಹನವನ್ನು ರಸ್ತೆಗೆ ಇಳಿಸದಂತಾಗಿದೆ ಎಂಬುವುದು ಹೆಬ್ರಿ ಗ್ರಾಮದ ಸಾಂತೊಳ್ಳಿ ಮಣಿಗುಂಡಿ ಪರಿಸರದ ಗ್ರಾಮಸ್ಥರ ರೋಧನೆಯಾಗಿದೆ.
ಹೆಬ್ರಿಯಿಂದ ಸಾಂತೊಳ್ಳಿ- ಮಣಿಗುಂಡಿ- ಕಾರ್ಕಳಜಡ್ಡು ಪ್ರದೇಶಕ್ಕೆ ತಲುಪಲು 7 ಕಿ.ಮೀ. ದೂರವಿದೆ. ಹೆಬ್ರಿ ಬಚ್ಚಪ್ಪು ಕಬ್ಬಿನಾಲೆ ಮುಖ್ಯ ರಸ್ತೆಗೆ 3 ಕಿ.ಮೀ. ದೂರ ಹೋಗಬೇಕಾಗಿದೆ. 17 ಮನೆಗಳಿರುವ ಸಾಂತೊಳ್ಳಿ ಮಣಿಗುಂಡಿ ಪ್ರದೇಶದ ಮನೆಮಂದಿಯ ಕಷ್ಟ ಹೇಳತೀರದು. ಪ್ರತಿ ಮನೆಯಲ್ಲೂ ವಾಹನಗಳಿದ್ದರೂ ವಾಹನವನ್ನು ರಸ್ತೆಗೆ ಇಳಿಸುವಂತಿಲ್ಲ ಎಂದು ಸ್ಥಳೀಯರಾದ ರಜನಿ ಪೂಜಾರಿ ಅಸಹಾಯಕತೆ ವ್ಯಕ್ತಪಡಿಸಿದರು.

ಮಾ

ಮಾ

ಸಾಂತೊಳ್ಳಿ- ಮಣಿಗುಂಡಿ ಜನತೆಯ ಸಂಕಷ್ಟ ಹೇಳ ತೀರದು. ಅಧಿಕಾರಿ ವರ್ಗ ಇಲ್ಲಿನ ಜನರ ಸಮಸ್ಯೆಯನ್ನು ಅರಿತು ಶ್ರೀವಾಗಿ ಪರಿಹಾರ ಕಂಡುಕೊಳ್ಳಬೇಕು. ಗ್ರಾಮಸ್ಥರೊಂದಿಗೆ ತೆರಳಿ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್‌ಗೆ ಮನವಿ ನೀಡುತ್ತೇವೆ.

— ಶ್ರೀಕಾಂತ್ ಪೂಜಾರಿ ಕುಚ್ಚೂರು ಸಾಮಾಜಿಕ ಹೋರಾಟಗಾರ

ಡೇರಿಗೆ ಹಾಲು ಕೊಡಲು ಹೋಗುವವರು, ಶಾಲೆಗೆ ಹೋಗುವ ಮಕ್ಕಳು, ಹಿರಿಯರು ಸೇರಿ ಇಲ್ಲಿನ ಮನೆಯವರು ಜೀವವನ್ನು ಕೈಯಲ್ಲಿ ಹಿಡಿದು ಹೋಗುವ ಪರಿಸ್ಥಿತಿ ಇದೆ. ಯಾರಿಗಾದರೂ ಅನಾರೋಗ್ಯವಿದ್ದಾಗ ಅವರನ್ನು ಹೊತ್ತುಕೊಂಡೇ ಹೋಗಬೇಕಿದೆ. ಇಂತಹ ಸಂಕಷ್ಟ ಕಾಲದಲ್ಲಿ 2 ಸಾವುಗಳು ಸಂಭವಿಸಿದೆ.

— ರಜನಿ ಪೂಜಾರಿ ಸ್ಥಳೀಯ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net