ಕಾಂಕ್ರೀಟ್ ರೋಡಲ್ಲಿ ಕೆಸರು ಸಿಂಚನ!

 ರಾಷ್ಟ್ರೀಯ ಹೆದ್ದಾರಿ 66ರಿಂದ ಬಿಜೂರು ರೈಲ್ವೆ ಗೇಟ್ ವರೆಗಿನ ರಸ್ತೆಯಲ್ಲಿ ಅಲಲ್ಲಿ ಮಳೆ ನೀರು ಹರಿದುಹೋಗಲು ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ಕೆಸರು ನೀರು ತುಂಬಿಕೊಂಡಿರುವುದು.
ರಾಷ್ಟ್ರೀಯ ಹೆದ್ದಾರಿ 66ರಿಂದ ಬಿಜೂರು ರೈಲ್ವೆ ಗೇಟ್ ವರೆಗಿನ ರಸ್ತೆಯಲ್ಲಿ ಅಲಲ್ಲಿ ಮಳೆ ನೀರು ಹರಿದುಹೋಗಲು ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ಕೆಸರು ನೀರು ತುಂಬಿಕೊಂಡಿರುವುದು.
Published on

ನರಸಿಂಹ ನಾಯಕ್ ಬೈಂದೂರು

ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಸಮರ್ಪಕ ಕಾಂಕ್ರೀಟ್ ರಸ್ತೆ ನಿರ್ವಾಣವಾಗಿದ್ದರೂ ಈ ವಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ನಿತ್ಯ ಕಿರಿಕಿರಿ ತಪ್ಪಿಲ್ಲ. ಚರಂಡಿ ಸಮಸ್ಯೆಯಿಂದ ರಸ್ತೆಯ ಮೇಲೆ ಕೆಸರು ನೀರು ನಿಂತುಕೊಂಡಿದ್ದು, ಸಾರ್ವಜನಿಕರ ನಿತ್ಯ ಸಂಚಾರ ಹಾಗೂ ವಾಹನ ಸವಾರರಿಗೆ ನರಕಯಾತನೆ ಎಂಬಂತಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ನಂಬಿಯಾರ್ ಕ್ಲಿನಿಕ್‌ನಿಂದ ಬಿಜೂರು ರೈಲ್ವೆ ಗೇಟ್‌ವರೆಗಿನ ರಸ್ತೆಯಲ್ಲಿ ಅಲಲ್ಲಿ ಮಳೆ ನೀರು ಹರಿದುಹೋಗಲು ವ್ಯವಸ್ಥೆ ಇಲ್ಲದೆ ಇರುವುದು, ರಸ್ತೆಯಂಚಿಗೆ ಕಾಂಪೌಂಡ್ ರಚನೆಯಿಂದಾಗಿ ರಸ್ತೆಯಲ್ಲಿ ಕೆಸರು ನೀರು ತುಂಬಿಕೊಂಡ ಪರಿಣಾಮ ಪಾದಚಾರಿಗಳಿಗೆ, ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಉಂಟಾಗಿದೆ.

80 ಲಕ್ಷ ರೂ. ಕಾಮಗಾರಿ ಕೆಸರುಮಯ

ಸ್ಥಳೀಯರ ನಿರಂತರ ಆಗ್ರಹದ ಫಲವಾಗಿ ವಾಜಿ ಶಾಸಕ ಬಿ.ಎಂ.ಸುಕುವಾರ್ ಶೆಟ್ಟಿ ಮತ್ತು ಸಂಸದ ಬಿ.ವೈ.ರಾವೇಂದ್ರ ಸಂಪೂರ್ಣವಾಗಿ ಹದ್ದಗೆಟ್ಟ ಬಿಜೂರು ಸರ್ಕಾರಿಗೆ ಶಾಲೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗೆ ಸುವಾರು 80ಲಕ್ಷ ರೂ.ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಟ್ಟಿದ್ದರು. ಮಳೆ ನೀರು ಕೂಡ ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ವಾಡಲಾಗಿತ್ತು. ದುರಾದೃಷ್ಟವಶಾತ್ ಕೆಲವು ಕಡೆಗಳಲ್ಲಿ ರಸ್ತೆಗೆ ತಾಗಿ ಕಾಂಪೌಂಡ್ ನಿರ್ಮಾಣ, ಇನ್ನು ಕೆಲವು ಕಡೆಗಳಲ್ಲಿ ಮಳೆ ನೀರು ಹರಿದು ಹೋಗುವ ಚರಂಡಿಯನ್ನು ಮುಚ್ಚಿರುವುದು ಸಮಸ್ಯೆಗೆ ಮುಖ್ಯ ಕಾರಣವಾಗಿದೆ.

ಜವಾಬ್ದಾರಿ ಮರೆತ ಸ್ಥಳೀಯಾಡಳಿತ

ಪ್ರೌಢಶಾಲೆ, ಪ್ರಾಥಮಿಕ ಶಾಲೆ, ಪ್ರಸಿದ್ಧ ದೈವಸ್ಥಾನ, ದೇವಸ್ಥಾನ, ಗರಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಡಿತರ ಕೇಂದ್ರಗಳನ್ನು ಸಂಪರ್ಕಿಸಲು ಇದು ಪ್ರಮುಖ ರಸ್ತೆಯಾಗಿದ್ದು, ರಸ್ತೆಯ ಮೇಲೆ ಕೊಳಚೆ ನೀರಿನಿಂದಾಗಿ ಜನರ ಓಡಾಟಕ್ಕೆ ತುಂಬಾ ಕಿರಿಕಿರಿಯಾಗುತ್ತಿದೆ. ಈ ಬಗ್ಗೆ ಈ ಭಾಗದ ಜನರಲ್ಲಿ ಆಡಳಿತ ವ್ಯವಸ್ಥೆಯ ಕುರಿತು ಅಸವಾಧಾನ ಉಂಟಾಗಿದೆ. ರಸ್ತೆ ಬದಿಯಲ್ಲಿ ನೂತನ ಮನೆ, ಕಾಂಪೌಂಡ್ ನಿರ್ವಾಣಕ್ಕೆ ಅನುಮತಿ (ಎನ್‌ಒಸಿ) ಪತ್ರ ನೀಡುವಾಗ ಚರಂಡಿಗೆ ಸ್ಥಳಾವಕಾಶ, ಮಳೆ ನೀರು ಹರಿದು ಹೋಗುವ ವಾರ್ಗ ಮುಚ್ಚಿರುವ ಕುರಿತು ಸರಿಯಾಗಿ ಪರಿಶೀಲನೆ ನಡೆಸದೆ ನಿರೀಕ್ಷಣಾ ಪತ್ರ ನೀಡಿ, ಸೂಕ್ತ ಕ್ರಮಕೈಗೊಳ್ಳದ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಪ್ರಸ್ರುತ ಸ್ಥಳಕ್ಕೆ ಭೇಟಿ ನೀಡಿ ಪರಸ್ಪರ ವಾತುಕತೆಯ ಮೂಲಕ ಸಮಸ್ಯೆ ಬಗೆಹರಿಯಬಹುದಾದರೂ ಸ್ಥಳೀಯಾಡಳಿತ ಯಾವುದೇ ಪ್ರತಿಕ್ರಿಯೆ ನೀಡದೆ ತನ್ನ ನಿರ್ಲಕ್ಷ್ಯ ಧೋರಣೆಯಿಂದಾಗಿ ಈ ಸಮಸ್ಯೆಗೆ ಮುಕ್ತಿ ನೀಡದೆ ಹಾಗೆಯೇ ಉಳಿಸಿಕೊಂಡಿರುವುದು ವಾತ್ರ ದುರಂತ ಎಂಬುವುದು ನಾಗರಿಕರ ಆರೋಪವಾಗಿದೆ.

ಸಾಂಕ್ರಾಮಿಕ ರೋಗ ಭೀತಿ

ಕಾಂಕ್ರೀಟ್ ರಸ್ತೆ ನಿರ್ವಾಣದ ಸಮಯದಲ್ಲಿ ರಸ್ತೆಯ ಬದಿಗಳಿಗೆ ಮಣ್ಣು ಹಾಕಿದ್ದು, ಕೆಲವು ಕಡೆಗಳಲ್ಲಿ ಈ ಮಣ್ಣಿನಿಂದಾಗಿ ಕೆಸರು ನೀರು ಸೃಷ್ಟಿಯಾಗಿದೆ. ಮರ, ಗಿಡಗಳ ಎಲೆಗಳು ಮಣ್ಣಿಗೆ ಸೇರಿ ಕೊಳಚೆ ನೀರು ಉಂಟಾಗಿದೆ. ಜನರು ನಿತ್ಯ ನಡೆದಾಡುವಾಗ ಕೊಳಚೆ ಮಣ್ಣು ಕಾಲಿಗೆ ಅಂಟಿಕೊಳ್ಳುತ್ತಿರುವುದರಿಂದ ಸಾಂಕ್ರಾಮಿಕ ರೋಗ ಭೀತಿ ಉಂಟಾಗಿದೆ. ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಇದರಲ್ಲಿ ಹೋಗಲು ಅಸಹ್ಯ ಅನುಭವ. ವಾಹನಗಳು ಹೋಗುವಾಗ ವಿದ್ಯಾರ್ಥಿಗಳ ಮೇಲೆ ಕೆಸರು ನೀರು ಹಾರುತ್ತಿದ್ದು, ಕೆಲವು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದಾರೆ. ಬೈಕ್‌ನಲ್ಲಿ ಹೋಗುವಾಗ ವಿದ್ಯಾರ್ಥಿನಿಯೊಬ್ಬಳು ಕೆಸರಿಗೆ ಬಿದ್ದು ಗಾಯಗೊಂಡ ಘಟನೆ ನಡೆದಿದೆ.

ಚರಂಡಿ ಸಮಸ್ಯೆ ಮತ್ತು ಅನಾದಿ ಕಾಲದಿಂದ ನೀರು ಹರಿದು ಹೋಗುವ ವಾರ್ಗವನ್ನು ಮುಚ್ಚಿರುವುದು ಈ ಸಮಸ್ಯೆಗೆ ಕಾರಣವಾಗಿದೆ. ಸ್ಥಳಿಯಾಡಳಿತ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ಮನಃಸ್ಥಿತಿ ಬೆಳೆಸಿಕೊಂಡು ಸೂಕ್ತ ಕ್ರಮಕೈಗೊಳ್ಳದೆ ಇದ್ದರೆ ಸರ್ಕಾರ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ರಸ್ತೆ ಹಾಳಾಗುತ್ತದೆ.

— ರಾಜೇಂದ್ರ ಎಸ್. ಬಿಜೂರು ಗ್ರಾ.ಪಂ. ನಿಕಟಪೂರ್ವ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net