ಉತ್ತಮ ಪ್ಯಾಕೇಜಿಂಗ್​ನಿಂದ ಉತ್ಪನ್ನಕ್ಕೆ ಹೆಚ್ಚಿನ ಬಾಳಿಕೆ

ಉದ್ಯಮಿ ಕಲ್ಬಾವಿ ಪ್ರಕಾಶ್​ ರಾವ್​ ಆಹಾರ ಪ್ಯಾಕೇಜಿಂಗ್​ ಕಾರ್ಯಾಗಾರ ಉದ್ಘಾಟಿಸಿದರು.
ಉದ್ಯಮಿ ಕಲ್ಬಾವಿ ಪ್ರಕಾಶ್​ ರಾವ್​ ಆಹಾರ ಪ್ಯಾಕೇಜಿಂಗ್​ ಕಾರ್ಯಾಗಾರ ಉದ್ಘಾಟಿಸಿದರು.
Published on
ಉಡುಪಿ: ಉತ್ತಮ ಪ್ಯಾಕೇಜಿಂಗ್​ನಿಂದ ಉತ್ಪನ್ನಕ್ಕೆ ಹೆಚ್ಚಿನ ಬಾಳಿಕೆ ಸಾಧ್ಯ. ಕೆಟ್ಟ ಪ್ಯಾಕೇಜಿಂಗ್​ನಿಂದ ಒಳ್ಳೆಯ ಉತ್ಪನ್ನ ಬೇಡಿಕೆ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಉತ್ಪನ್ನಗಳ ಬ್ರಾ$್ಯಂಡಿಂಗ್​ಗೆ ಉತ್ತಮ ಪ್ಯಾಕೇಜಿಂಗ್​ ಅತೀ ಅಗತ್ಯ ಎಂದು ಉದ್ಯಮಿ ಕಲ್ಬಾವಿ ಪ್ರಕಾಶ್​ ರಾವ್​ ಹೇಳಿದರು.
ಕೇಂದ್ರ ಸರ್ಕಾರದ ಸಣ್ಣ ಮತ್ತು ಮಧ್ಯಮ ಉದ್ಯಮ ಕೈಗಾರಿಕಾ ಸಚಿವಾಲಯ ಹಾಗೂ ಉಡುಪಿ ಜಿಲ್ಲಾ ಬೇಕರಿ ಮತ್ತು ಫುಡ್​ ಪ್ರಾಡಕ್ಟ್​ ತಯಾರಿಕರು ಅಂಡ್​ ಮಾರಾಟಗಾರರ ಸಂದ ಆಶ್ರಯದಲ್ಲಿ ಆಹಾರ ಪ್ಯಾಕೇಜಿಂಗ್​ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಆಹಾರ ಉದ್ಯಮವು ವೃತ್ತಿಪರವಾಗುತ್ತಿದೆ. ಯುವ ಸಮುದಾಯವು ಆನ್​ಲೈನ್​ ವೇದಿಕೆಯಲ್ಲಿ ದರ, ಶ್ರೇಯಾಂಕವನ್ನು ವಿಮರ್ಶೆಗೆ ಒಳಪಡಿಸುತ್ತಿದ್ದಾರೆ ಎಂದು ಹೇಳಿದರು.
ಎಂಎಸ್​ಎಂಇ ಅಭಿವೃದ್ಧಿ ಹಾಗೂ ನೆರವು ಕೇಂದ್ರ ಸಹಾಯಕ ನಿರ್ದೇಶಕ ಸುಂದರ ಶೇರಿಗಾರ್​ ಮಾತನಾಡಿ, ಆಹಾರ ಉತ್ಪನ್ನಗಳ ಸುರಕ್ಷಿತ ಹಾಗೂ ಆಧುನಿಕ ಪ್ಯಾಕೇಜಿಂಗ್​ ವಿಧಾನಗಳ ಕುರಿತು ಉದ್ಯಮಿಗಳಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ವಿಚಾರಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ. ಆಹಾರ ಉದ್ಯಮಗಳಲ್ಲಿ ಪ್ಯಾಕೇಜಿಂಗ್​ ಅತ್ಯಂತ ಮುಖ್ಯವಾಗಿದೆ. ಗುಣಮಟ್ಟದ ಆಹಾರ ಪದಾರ್ಥಗಳಿಗೆ ಉತ್ತಮ ಪ್ಯಾಕೇಟ್​ ಅವಶ್ಯ. ಕಳಪೆ ಆಹಾರ ಮತ್ತು ಪ್ಯಾಕೇಜಿಂಗ್​ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಪ್ರತಿಯೊಬ್ಬ ಆಹಾರ ಉತ್ಪಾದಕರು ಪ್ಯಾಕೇಜಿಂಗ್​ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಇದರಿಂದ ಉತ್ತಮ ಮಾರುಕಟ್ಟೆಯೂ ಲಭ್ಯವಾಗುತ್ತದೆ ಎಂದು ಹೇಳಿದರು.
ಲೀಟ್​ ಬ್ಯಾಂಕ್​ ಮುಖ್ಯಸ್ಥ ಹರೀಶ್​ ಜಿ., ಉಡುಪಿ ಫುಡ್​ಪಾರ್ಕ್​ ಆಡಳಿತ ನಿರ್ದೇಶಕ ಜಾನ್​ ಆರ್​. ಡಿ'ಸಿಲ್ವಾ, ಜಿಲ್ಲಾ ಬೇಕರಿ ಅಸೋಸಿಯೇಶನ್​ ಅಧ್ಯಕ್ಷ ವಿಶ್ವನಾಥ ಕುಲಾಲ್​, ಕಾನೂನು ಸಲಹೆಗಾರ ಶ್ರೀಧರ್​ ಪಿ.ಎಸ್​. ಉಪಸ್ಥಿತರಿದ್ದರು. ಸುಮನಾ ರಾಜು ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net