ಉಡುಪಿ: ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ ಸೋಲಾರ್ ಅಳವಡಿಕೆಗೆ 4,546 ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 1,258 ಮನೆಗಳಿಗೆ ಸೋಲಾರ್ ಸಬ್ಸಿಡಿ ಮಂಜೂರಾತಿ ಆಗಿದೆ. 1,280 ಕುಟುಂಬಗಳಿಗೆ ತಲಾ 78 ಸಾವಿರ ರೂ.ನಂತೆ ಸಬ್ಸಿಡಿ ಹಣ ನೀಡಲಾಗಿದ್ದು, ಒಟ್ಟು 9.98 ಲಕ್ಷ ರೂ.ವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದರು.