ಭಾರತದ ಸಂಸ್ಕೃತಿ ಜಾನಪದದ ರಕ್ಷಣೆ ಅತ್ಯಗತ್ಯ

ಉಡುಪಿಯಲ್ಲಿ ನಡೆದ 'ರತ್ನಾಕರ ಉತ್ಸವ'ದಲ್ಲಿ ಡಾ. ಗೊಲ್ಲಹಳ್ಳಿ ಶಿವಪ್ರಸಾದ್​ ಅವರಿಗೆ 'ತಲ್ಲೂರ್ಸ್​ ಜಾನಪದ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಕೋಟ ಶ್ರೀನಿವಾಸ ಪೂಜಾರಿ, ಡಾ. ತಲ್ಲೂರು ಶಿವರಾಂ ಶೆಟ್ಟಿ, ಪೂರ್ಣಿಮಾ, ಗಜಾನನ ಶೆಲ್ಕೆ, ಪ್ರೊ. ದೇವಿದಾಸ್​ ನಾಯ್ಕ್​, ಪ್ರದೀಪ ಚಂದ್ರ ಕುತ್ಪಾಡಿ, ರವಿರಾಜ್​ ನಾಯಕ್​, ಅನೂಷಾ ಆಚಾರ್ಯ ಇದ್ದರು.
ಉಡುಪಿಯಲ್ಲಿ ನಡೆದ 'ರತ್ನಾಕರ ಉತ್ಸವ'ದಲ್ಲಿ ಡಾ. ಗೊಲ್ಲಹಳ್ಳಿ ಶಿವಪ್ರಸಾದ್​ ಅವರಿಗೆ 'ತಲ್ಲೂರ್ಸ್​ ಜಾನಪದ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಕೋಟ ಶ್ರೀನಿವಾಸ ಪೂಜಾರಿ, ಡಾ. ತಲ್ಲೂರು ಶಿವರಾಂ ಶೆಟ್ಟಿ, ಪೂರ್ಣಿಮಾ, ಗಜಾನನ ಶೆಲ್ಕೆ, ಪ್ರೊ. ದೇವಿದಾಸ್​ ನಾಯ್ಕ್​, ಪ್ರದೀಪ ಚಂದ್ರ ಕುತ್ಪಾಡಿ, ರವಿರಾಜ್​ ನಾಯಕ್​, ಅನೂಷಾ ಆಚಾರ್ಯ ಇದ್ದರು.
Published on

* ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅನಿಸಿಕೆ 

* ಮಧ್ಯಭಾರತದ ರಾಜ್ಯಗಳ 'ರತ್ನಾಕರ ಉತ್ಸವ' ಉದ್ಘಾಟನೆ

ಉಡುಪಿ: ಭಾರತವೂ ಸೇರಿದಂತೆ ಪ್ರಪಂಚದಲ್ಲಿರುವ ಕಲೆಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟಸಾಧ್ಯ. ಅದೆಷ್ಟೋ ಕಲೆಗಳು ವಿನಾಶವಾಗುತ್ತಿವೆ. ಅವುಗಳನ್ನು ರಕ್ಷಿಸಲು ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ ಮುಂದಾಗಿರುವುದು ಸಂತಸದ ವಿಚಾರ. ಉಡುಪಿಯಲ್ಲಿ 6 ರಾಜ್ಯಗಳ ಬುಡಕಟ್ಟು ಜನಾಂಗಗಳ ಜಾನಪದ ನೃತ್ಯ ಪ್ರದರ್ಶನ ಆಯೋಜಿಸಿರುವ ರಂಗಭೂಮಿ ಉಡುಪಿ ಅರ್ಥಪೂರ್ಣ ಕಾರ್ಯ ಮಾಡಿದೆ. ಜಾನಪದವು ಭಾರತದ ಸಂಸ್ಕೃತಿಯಾಗಿದ್ದು ಅವುಗಳ ರಕ್ಷಣೆ ಅತ್ಯಗತ್ಯ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗಭೂಮಿ ಉಡುಪಿ (ರಿ.), ತಲ್ಲೂರ್ಸ್​ ಫ್ಯಾಮಿಲಿ ಟ್ರಸ್ಟ್​ (ರಿ.) ಉಡುಪಿ, ಕರ್ನಾಟಕ ಜಾನಪದ ಪರಿಷತ್​ ಉಡುಪಿ ಜಿಲ್ಲಾ ಘಟಕ, ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರ ನಾಗ್ಪುರ ಸಹಯೋಗದಲ್ಲಿ ಶುಕ್ರವಾರ (ಮಾ.6) ಸಂಜೆ ಆಯೋಜಿಸಿದ್ದ ದಕ್ಷಿಣ ಮಧ್ಯಭಾರತದ ರಾಜ್ಯಗಳ ಮೂರು ದಿನಗಳ ಜಾನಪದ 'ರತ್ನಾಕರ ಉತ್ಸವ' ಉದ್ಘಾಟಿಸಿ ಮಾತನಾಡಿದರು.

 'ತಲ್ಲೂರ್ಸ್' ಜಾನಪದ ಪ್ರಶಸ್ತಿ ಪ್ರದಾನ

ಕರ್ನಾಟಕ ಜಾನಪದ ಪರಿಷತ್​ನ ಅಧ್ಯಕ್ಷ ಡಾ. ಗೊಲ್ಲಹಳ್ಳಿ ಶಿವಪ್ರಸಾದ್​ ಅವರಿಗೆ 'ತಲ್ಲೂರ್ಸ್​ ಜಾನಪದ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಕಲೆಗಳಿಂದ ಮಾತ್ರ ಜಗತ್ತು ಸಂತಸದಿಂದ ಇರಲು ಸಾಧ್ಯ. ಅಮ್ಮನ ಜೋಗುಳದಿಂದಲೇ ಆರಂಭವಾಗುವ ಪದ, ಜೀವನದ ಪ್ರತಿಹಂತದಲ್ಲೂ ಇದೆ. ಅದುವೇ ಜನಪದ. ಜಗತ್ತಿನಲ್ಲಿ ಸಂಬಂಧಗಳನ್ನು ಕಟ್ಟಿದ್ದೂ ಸಹ ಇದೇ ಜನಪದವಾಗಿದೆ. ಸಾಂಸ್ಕೃತಿಕ ಅಧ:ಪತನದ ಈ ಕಾಲದಲ್ಲೂ ನಾವೆಲ್ಲ ಬದುಕಿದ್ದೇವೆ ಎಂಬ ಸಂದೇಶವನ್ನು ಈ ವೇದಿಕೆ ನೀಡುತ್ತಿದೆ ಎಂದರು.
ನಾಗ್ಪುರ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರದ ಪ್ರಮುಖ ಗಜಾನನ ಶೆಲ್ಕೆ, ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ದೇವಿದಾಸ್​ ನಾಯ್ಕ್​ ಉಪಸ್ಥಿತರಿದ್ದರು. ರಂಗಭೂಮಿ ಉಡುಪಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ರಂಗಭೂಮಿ ಉಡುಪಿಯ ಉಪಾಧ್ಯಕ್ಷ ಎನ್​.ಆರ್​. ಬಲ್ಲಾಳ ಸ್ವಾಗತಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್​ ಚಂದ್ರ ಕುತ್ಪಾಡಿ ವಂದಿಸಿದರು. ವಿವಿಧ ರಾಜ್ಯಗಳ ಕಲಾತಂಡಗಳನ್ನು ಉಡುಪಿ ಜಿಲ್ಲಾ ಜಾನಪದ ಪರಿಷತ್​ನ ಕಾರ್ಯದರ್ಶಿ ರವಿರಾಜ್​ ನಾಯಕ್​ ಪರಿಚಯಿಸಿದರು. ಅನೂಷಾ ಆಚಾರ್ಯ ಪ್ರಶಸ್ತಿ ಪತ್ರ ವಾಚಿಸಿದರು. ಡಾ ವಿಷ್ಣುಮೂರ್ತಿ ಪ್ರಭು ಕಾರ್ಯಕ್ರಮ ನಿರೂಪಿಸಿದರು.

ಗಮನ ಸೆಳೆದ ಕಲಾ ವೈವಿಧ್ಯ

ಸಭಾ ಕಾರ್ಯಕ್ರಮದ ಬಳಿಕ ನಾಗ್ಪುರದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಛತ್ತೀಸ್​ಘಡ ರಾಜ್ಯಗಳ ಜಾನಪದ ಕಲಾ ವೈವಿಧ್ಯದ 1ನೇ ಸರಣಿಯ ಪ್ರದರ್ಶನ ನಡೆಯಿತು. ಮಾ.7 ಸಂಜೆ 6 ಗಂಟೆಗೆ ಜಾನಪದ ಕಲಾವೈವಿಧ್ಯಯದ 2ನೇ ಸರಣಿಯ ಪ್ರದರ್ಶನ ನಡೆಯಲಿದೆ.
"

ಪ್ರಕೃತಿ-ಸಂಸ್ಕೃತಿಯ ಸೊಗಡೇ ಜನಪದವಾಗಿದ್ದು, ಅವು ಎಲ್ಲವುಗಳ ಮೂಲವಾಗಿದೆ. ಸಮಾಜ ಸಾಮರಸ್ಯದಿಂದ ಇರಲು ಜನಪದ, ಕಲೆ, ಸಂಸ್ಕೃತಿ ಪೂರಕವಾಗಿದೆ. ಶಿಕ್ಷಣದ ಭಾಗವೂ ಆಗಿರುವುದರಿಂದ ಇಂತಹ ಕಲೆ ವಿದ್ಯಾರ್ಥಿಗಳನ್ನು ತಲುಪಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net