

ಎಚ್ಪಿವಿ ಲಸಿಕೆಯಿಂದ ಆರೋಗ್ಯದಲ್ಲಿ ವ್ಯತ್ಯಯ, ಅಡ್ಡಪರಿಣಾಮ ಆಗದು ಎನ್ನುವುದನ್ನು ಮತ್ತು ಪ್ರಯೋಜನದ ಕುರಿತಾಗಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಅರಿವು ಮೂಡಿಸಬೇಕು. ಲಸಿಕೆ ಪಡೆದ ವಿದ್ಯಾರ್ಥಿನಿಯರು ತಮ್ಮ ಸಹಪಾಠಿಗಳಿಗೂ ಪ್ರೇರೇಪಿಸಬೇಕು. ಹೆಣ್ಣು ಮಕ್ಕಳು ಆರೋಗ್ಯಪೂರ್ಣ ಬದುಕು ಸಾಗಿಸಲು ಎಲ್ಲರೂ ಅವಕಾಶ ಮಾಡಿಕೊಡಬೇಕು.