ತಲ್ಲೂರು ಚರ್ಚ್​ನಲ್ಲಿ ತಾಯಂದಿರ ದಿನ ಆಚರಣೆ

ತಲ್ಲೂರು ಸಂತ ಫ್ರಾನ್ಸಿಸ್​ ಆಸ್ಸಿಸಿ ಚರ್ಚ್​ನಲ್ಲಿ ತಾಯಂದಿರ ದಿನವನ್ನು ಆಚರಿಸಲಾಯಿತು. ಪ್ರಮುಖರಾದ ಸಿರಿಲ್​ ಲೋಬೋ, ಎಡ್ವಿನ್​ ಡಿಸೋಜ, ಸಿಲ್ವಿಯಾ ಸುವಾರಿಸ್​ ಮೊದಲಾದವರು ಉಪಸ್ಥಿತರಿದ್ದರು.
ತಲ್ಲೂರು ಸಂತ ಫ್ರಾನ್ಸಿಸ್​ ಆಸ್ಸಿಸಿ ಚರ್ಚ್​ನಲ್ಲಿ ತಾಯಂದಿರ ದಿನವನ್ನು ಆಚರಿಸಲಾಯಿತು. ಪ್ರಮುಖರಾದ ಸಿರಿಲ್​ ಲೋಬೋ, ಎಡ್ವಿನ್​ ಡಿಸೋಜ, ಸಿಲ್ವಿಯಾ ಸುವಾರಿಸ್​ ಮೊದಲಾದವರು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ಆಯೋಗ ಸಹಯೋಗ
  • ದಿವ್ಯ ಬಲಿಪೂಜೆ
ಕುಂದಾಪುರ: ತಲ್ಲೂರು ಸಂತ ಫ್ರಾನ್ಸಿಸ್​ ಆಸ್ಸಿಸಿ ಚರ್ಚ್​ನಲ್ಲಿ ಮಹಿಳಾ ಆಯೋಗ ಸಹಯೋಗದಲ್ಲಿ ತಾಯಂದಿರ ದಿನವನ್ನು ಭಾನುವಾರ ಆಚರಿಸಲಾಯಿತು.
ಮೂಡಬೆಳ್ಳೆ ಸೆಮಿನರಿಯ ಆಧ್ಯಾತ್ಮಿಕ ನಿರ್ದೇಶಕ ಸಿರಿಲ್​ ಲೋಬೋ, ಪ್ರಧಾನ ಯಾಜಕರಾಗಿ ಬೆಳಗಿನ ದಿವ್ಯ ಬಲಿಪೂಜೆ ನೆರವೇರಿಸಿ, ತಾಯಂದಿರ ಬಗ್ಗೆ ಮಾತನಾಡಿದರು. ಚರ್ಚ್​ ಧರ್ಮಗುರು ಎಡ್ವಿನ್​ ಡಿಸೋಜ ಸಂದೇಶ ನೀಡಿದರು.
ಜಯರಾಣಿ ಆಂಗ್ಲ ಮಾಧ್ಯಮ ಶಾಲೆ ಸಭಾಂಗಣದಲ್ಲಿ ತಾಯಂದಿರಿಗಾಗಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಯಿತು. ಚರ್ಚ್​ ಧರ್ಮ ಭಗಿನಿಯರಿಗೆ, ತಾಯಂದಿಯರಿಗೆ, ಗೃಹಿಣಿಯರನ್ನು ಗೌರವಿಸಲಾಯಿತು. ಸಿ ಸಂಘಟನೆಯ ಕೇಂದ್ರೀಯ ಅಧ್ಯೆ ಸಿಲ್ವಿಯಾ ಸುವಾರಿಸ್​ ಮತ್ತಿತರರಿದ್ದರು.
ಚರ್ಚ್​ ಸಂದ ಅಧ್ಯೆ ವಿಲ್ಮಾ ಅಂದ್ರಾದೆ ಸ್ವಾಗತಿಸಿದರು. ಕಾರ್ಯದರ್ಶಿ ನಿರ್ಮಲ ಮಿನೇಜಸ್​ ವರದಿ ವಾಚಿಸಿದರು. ವಲಯದ ಉಪ ಕಾರ್ಯದರ್ಸಿ ಸವಿತಾ ಮೆಂಡೊನ್ಸಾ ವಂದಿಸಿದರು. 
ರೀನಾ ಮೆಂಡೊನ್ಸಾ ನೀತಾ ಮೆಂಡೊನ್ಸಾ ವಿವಿಧ ಮನರಂಜನಾ ಆಟಗಳನ್ನು ನಡೆಸಿಕೊಟ್ಟರು. ಡಯಾನ ಮಿನೇಜಸ್​ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net