ಬೈಕ್ ಡಿಕ್ಕಿಯಾಗಿ ತಾಯಿ, ಮಗಳಿಗೆ ಗಾಯ

ACCIDENT
ACCIDENT
Published on

ಬಂಟ್ವಾಳ: ಮಣಿಹಳ್ಳ ಬಸ್ ತಂಗುದಾಣದ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ತಾಯಿ ಮತ್ತು ಮಗಳು ಬೈಕ್ ಡಿಕ್ಕಿಯಾಗಿ ಗಾಯಗೊಂಡಿದ್ದಾರೆ. ನಾವೂರು ನಿವಾಸಿಗಳಾದ ತಸ್ಲೀವಾ ಹಾಗೂ ಅವರ ಮಗಳು ಗಾಯಗೊಂಡಿದ್ದ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕಣ್ಣೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಣಿಹಳ್ಳ ಸರಪಾಡಿ ಕ್ರಾಸ್ ಬಳಿ ಬಸ್ಸಿಗಾಗಿ ಕಾಯುತ್ತ ನಿಂತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಧರ್ಮಸ್ಥಳ ಕಡೆಯಿಂದ ಬಂದ ಬೈಕೊಂದು ತಾಯಿ, ಮಗಳಿಗೆ ಹೊಡೆದಿದೆ. ಬೈಕ್ ಸವಾರನಿಗೂ ಗಾಯಗಾಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net