ಹೆದ್ದಾರಿಯ ಬಹುತೇಕ ಸಮಸ್ಯೆಗೆ ಮುಕ್ತಿ

 ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಅಂಡರ್‌ಪಾಸ್ ಏಕಮುಖ ಹೆದ್ದಾರಿ ವಾಹನ ಸಂಚಾರವನ್ನು  ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮುಕ್ತಗೊಳಿಸಿದರು. ಪ್ರಮುಖರಾದ ಜಿತೇಂದ್ರ ಶೆಟ್ಟಿ, ಲಾಲಾಜಿ ಆರ್.ಮೆಂಡನ್, ಗೀತಾಂಜಲಿ ಸುವರ್ಣ, ಶಿಲ್ಪಾ ಜಿ.ಸುವರ್ಣ,  ಶ್ರೀನಿವಾಸ್ ಕಿಣಿ ಮತ್ತಿತರರಿದ್ದರು.
ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಅಂಡರ್‌ಪಾಸ್ ಏಕಮುಖ ಹೆದ್ದಾರಿ ವಾಹನ ಸಂಚಾರವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮುಕ್ತಗೊಳಿಸಿದರು. ಪ್ರಮುಖರಾದ ಜಿತೇಂದ್ರ ಶೆಟ್ಟಿ, ಲಾಲಾಜಿ ಆರ್.ಮೆಂಡನ್, ಗೀತಾಂಜಲಿ ಸುವರ್ಣ, ಶಿಲ್ಪಾ ಜಿ.ಸುವರ್ಣ, ಶ್ರೀನಿವಾಸ್ ಕಿಣಿ ಮತ್ತಿತರರಿದ್ದರು.
Published on
ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್ ಬಳಿ ಅಂಡರ್‌ಪಾಸ್ ಏಕಮುಖ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಈಗಾಗಲೇ ಕಲ್ಯಾಣಪುರ ಸಂತೆಕಟ್ಟೆ ಅಂಡರ್‌ಪಾಸ್ ಸಂಚಾರ ಮುಕ್ತಗೊಳಿಸಲಾಗಿದ್ದು, ಅಂಬಲಪಾಡಿ ವ್ಯಾಪ್ತಿಯ ಕಾಮಗಾರಿ ಮಳೆಗಾಲದೊಳಗೆ ಪೂರ್ಣಗೊಂಡಲ್ಲಿ ಹೆದ್ದಾರಿಯ ಬಹುತೇಕ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕಟಪಾಡಿ ಜಂಕ್ಷನ್ ಅಂಡರ್‌ಪಾಸ್ ಹೆದ್ದಾರಿ ಏಕಮುಖ ವಾಹನ ಸಂಚಾರಕ್ಕೆ ಶುಕ್ರವಾರ ಮುಕ್ತಗೊಳಿಸಿ ಮಾತನಾಡಿದರು.
ಹೆಜವಾಡಿಯಿಂದ ಕುಂದಾಪುರವರೆಗೆ 64 ಕಿ.ಮೀ. ಸರ್ವೀಸ್ ರಸ್ತೆ ನಿರ್ವಾಣವಾಗಲಿದೆ. 24 ಕಿ.ಮೀ. ಈಗಾಗಲೇ ಮಂಜೂರಾತಿ ಆಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿ ಶೇ.75ರಷ್ಟು ಪೂರ್ಣಗೊಂಡ ಬಳಿಕ ಉಳಿದಿರುವಂತಹ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ರಾಷ್ಟ್ರೀಯ ಹೆದ್ದರಿ 66 ಮೇಲ್ದರ್ಜೆಗೇರಿಸುವ ಬಗ್ಗೆ ನಮ್ಮ ಪ್ರಸ್ತಾಪನೆ ಮೇರೆಗೆ ವಿಸ್ತೃತ ಯೋಜನಾ ವರದಿ ಸಿದ್ಧವಾಗುತ್ತಿದೆ. ಆ ವರದಿ ಬಂದಾಗ ಎಲ್ಲೆಲ್ಲಿ ಅಪಘಾತ ವಲಯಗಳಿವೆಯೋ ಅಲ್ಲಿ ಮೇಲ್ಸೇತುವೆ ವಾಡುವ ಯೋಜನೆಗೆ ಮಂಜೂರಾತಿ ಆಗಲಿದೆ ಎಂದರು.\
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಾತನಾಡಿದರು. ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ವಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಜಿಪಂ ವಾಜಿ ಸದಸ್ಯರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಜಿ.ಸುವರ್ಣ, ಕಟಪಾಡಿ ಗ್ರಾಪಂ ವಾಜಿ ಸದಸ್ಯರಾದ ಶ್ರೀನಿವಾಸ್ ಕಿಣಿ, ಕವಿತಾ ಸುವರ್ಣ, ಕುರ್ಕಾಲು ಗ್ರಾಪಂ ವಾಜಿ ಸದಸ್ಯರಾದ ಸುದರ್ಶನ್ ಭಟ್, ಎಂ.ಜಿ.ನಾಗೇಂದ್ರ, ಏಣಗುಡ್ಡೆ ಶಕ್ತಿ ಕೇಂದ್ರದ ಸಂತೋಷ್, ಕೋಟೆ ಶಕ್ತಿ ಕೇಂದ್ರದ ಹರ್ಷಿತ್, ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸುವಾ ಶೆಟ್ಟಿ, ವೀಣಾ ಶೆಟ್ಟಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net