ದೇಹದಾರ್ಢ್ಯ ಸ್ಪರ್ಧೆ; ಆಳ್ವಾಸ್​ ಕಾಲೇಜ್​ ಚಾಂಪಿಯನ್​

ಉಡುಪಿಯ ಪೂರ್ಣಪ್ರಜ್ಞ ಕಾಲೇಜ್​ನಲ್ಲಿ ಆಯೋಜಿಸಿದ್ದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ವಿಜೇತರಾದ ಮೂಡಬಿದ್ರೆಯ ಆಳ್ವಾಸ್​ ಕಾಲೇಜ್​ ತಂಡಕ್ಕೆ ಸಮಗ್ರ ಚಾಂಪಿಯನ್​ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಉಡುಪಿಯ ಪೂರ್ಣಪ್ರಜ್ಞ ಕಾಲೇಜ್​ನಲ್ಲಿ ಆಯೋಜಿಸಿದ್ದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ವಿಜೇತರಾದ ಮೂಡಬಿದ್ರೆಯ ಆಳ್ವಾಸ್​ ಕಾಲೇಜ್​ ತಂಡಕ್ಕೆ ಸಮಗ್ರ ಚಾಂಪಿಯನ್​ ಪ್ರಶಸ್ತಿ ಪ್ರದಾನ ಮಾಡಲಾಯಿತು.
Published on: 

* ಉಡುಪಿಯಲ್ಲಿ ನಡೆದಿದ್ದ ಮಂಗಳೂರು ವಿವಿ ಪುರುಷರ ಸ್ಪರ್ಧೆ

ಉಡುಪಿ: ಮಂಗಳೂರು ವಿವಿ ಮಟ್ಟದ ಪುರುಷರ ಅಂತರ್​ ಕಾಲೇಜ್​ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮೂಡಬಿದ್ರೆಯ ಆಳ್ವಾಸ್​ ಕಾಲೇಜ್​ ತಂಡ ಸಮಗ್ರ ಚಾಂಪಿಯನ್​ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಉಡುಪಿಯ ಪೂರ್ಣಪ್ರಜ್ಞ ಕಾಲೇಜ್​ (ಸ್ವಾಯತ್ತ)ನಲ್ಲಿ ಮಂಗಳೂರು ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಭಾಗಿತ್ವದಲ್ಲಿ ಕಾಲೇಜ್​ನ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಗುರುವಾರ (ಅ.22) ಆಯೋಜಿಸಿದ್ದ ಮಂಗಳೂರು ವಿವಿ ಮಟ್ಟದ ಪುರುಷರ ಅಂತರ್​ ಕಾಲೇಜ್​ ದೇಹದಾರ್ಢ್ಯ ಸ್ಪರ್ಧೆ ನಡೆದಿತ್ತು.

ಆಳ್ವಾಸ್​ ಕಾಲೇಜ್​ನ ಪ್ರಥಮ್​ ಪೂಜಾರಿ ಅವರು ಟೂರ್ನಿಯ ಅತ್ಯುತ್ತಮ ದೇಹದಾರ್ಢ್ಯ ಪಟುವಾಗಿ ಸಾಧನೆ ಮಾಡಿದ್ದು, 'ಮಿ.ಮಂಗಳೂರು ವಿವಿ' ಪ್ರಶಸ್ತಿಗೆ ಭಾಜನರಾದರು. ಆಕಾಶ ಹಳೆಯಂಗಡಿ 'ಅತ್ಯುತ್ತಮ ಮಸ್ಕ್ಯೂಲರ್​' (ಸ್ನಾಯು) ಹೊಂದಿರುವ ಕ್ರೀಡಾಪಟುವಾಗಿ ಗುರುತಿಸಲ್ಪಟ್ಟರು.

ಟೂರ್ನಿಯಲ್ಲಿ ಗರಿಷ್ಠ ಅಂಕ ಸಂಗ್ರಹಿಸಿದ ಆಳ್ವಾಸ್​ ಕಾಲೇಜ್​ ತಂಡ ಪ್ರಶಸ್ತಿ ಗೆದ್ದಿದ್ದು, ಮಡಂತ್ಯಾರಿನ ಸೆಕ್ರೇಡ್​ ಹಾರ್ಟ್​ ಕಾಲೇಜ್​ ರನ್ನರ್​ಅಪ್​ ಪ್ರಶಸ್ತಿ ಗಳಿಸಿತು. ಮಂಗಳೂರಿನ ಎಸ್​ಡಿಎಂ ಕಾಲೇಜ್​ ಮೂರನೇ ಹಾಗೂ ಅತಿಥೇಯ ಪೂರ್ಣಪ್ರಜ್ಞ ಕಾಲೇಜ್​ ನಾಲ್ಕನೇ ಸ್ಥಾನ ಗಳಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net