ಆಳ್ವಾಸ್​ ಕಾಲೇಜ್​ ಮೂಡಬಿದರೆ ಸಮಗ್ರ ಚಾಂಪಿಯನ್​

ಉಡುಪಿಯಲ್ಲಿ ನಡೆದ ಮಂಗಳೂರು ವಿವಿ ಅಂತರ್​ ಕಾಲೇಜ್​ ಅಥ್ಲೆಟಿಕ್​ ಕ್ರೀಡಾಕೂಟದಲ್ಲಿ ಸಮಗ್ರ ಚಾಂಪಿಯನ್​ ಆದ ಆಳ್ವಾಸ್​ ಕಾಲೇಜ್​ ಮೂಡಬಿದರೆ ತಂಡಕ್ಕೆ ಪ್ರಶಸ್ತಿ ವಿತರಿಸಲಾಯಿತು. ನಿತ್ಯಾನಂದ ವಿ. ಗಾಂವಕರ, ಓಂಪ್ರಕಾಶ, ಎವರೆಸ್ಟ್​ ರೊಡ್ರಿಗಸ್​, ಡಾ. ಹರಿದಾಸ ಕೂಳೂರು,ಡಾ. ಶ್ರೀದೇವಿ ಕೆ., ಡಾ. ರೋಶನ್​ ಶೆಟ್ಟಿ ಇತರರಿದ್ದರು.

Published on: 

* ಮಂಗಳೂರು ವಿವಿ ಅಂತರ್​ ಕಾಲೇಜ್​ ಅಥ್ಲೆಟಿಕ್​ ಕ್ರೀಡಾಕೂಟ

ಉಡುಪಿ: ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ 3 ದಿನಗಳ ಕಾಲ ನಡೆದಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್​ ಕಾಲೇಜ್​ ಅಥ್ಲೆಟಿಕ್​ ಕ್ರೀಡಾಕೂಟದ ಸಮಾರೋಪ ಸಮಾರಂಭ ಗುರುವಾರ (ನ.13) ನಡೆಯಿತು.

ಕ್ರೀಡಾಕೂಟದಲ್ಲಿ ಸಮಗ್ರ ಚಾಂಪಿಯನ್​ ಆದ ಆಳ್ವಾಸ್​ ಕಾಲೇಜ್​ ಮೂಡಬಿದರೆ ಹಾಗೂ ರನ್ನರ್​ ಅಪ್​ ಆದ ಉಜಿರೆಯ ಎಸ್​ಡಿಎಂ ಕಾಲೇಜ್​, 3ನೇ ಸ್ಥಾನ ಗಳಿಸಿದ ಬೆಳ್ತಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ ಹಾಗೂ 4ನೇ ಸ್ಥಾನ ಗಳಿಸಿದ ಆತಿಥೇಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ತಂಡಗಳಿಗೆ ಪ್ರಶಸ್ತಿ ವಿತರಿಸಲಾಯಿತು.

ಕಾಲೇಜ್​ನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವಕರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ಹಾಗೂ ಯುವ ಸಬಲೀಕರಣ ಇಲಾಖೆಯ ಉಪನಿರ್ದೇಶಕ ಓಂಪ್ರಕಾಶ, ದೈಹಿಕ ಶಿಕ್ಷಣ ಭೋದಕರ ಸಂಘದ ಅಧ್ಯಕ್ಷ ಎವರೆಸ್ಟ್​ ರೊಡ್ರಿಗಸ್​, ಕ್ರೀಡಾಕೂಟದ ವೀಕ್ಷಕರಾದ ಡಾ. ಹರಿದಾಸ ಕೂಳೂರು, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಸಂಚಾಲಕಿ ಡಾ. ಶ್ರೀದೇವಿ ಕೆ. ಉಪಸ್ಥಿತರಿದ್ದರು.

ಜಿಲ್ಲಾ ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.

ರೋಶನ್​ ಶೆಟ್ಟಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರವೀಣಕುಮಾರ ಕಾರ್ಯಕ್ರಮ ನಿರೂಪಿಸಿದರು.