ಮತದಾರರ ಪಟ್ಟಿಯಲ್ಲಿ ಅರ್ಹರ ಸೇರ್ಪಡೆಗೆ ಶ್ರಮಿಸಿ

ಉಡುಪಿಯ ಜಿಲ್ಲಾ ಕಾಂಗ್ರೆಸ್​ ಭವನದಲ್ಲಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್​ನ ಮಾಸಿಕ ಸಭೆ ನಡೆಯಿತು. ಜ್ಯೋತಿ ಹೆಬ್ಬಾರ್​, ಗೀತಾ ವಾಗ್ಳೆ, ಸರಸು ಬಂಗೇರ, ಮಾಲಿನಿ ರೈ, ದೇವಕಿ ಸಣ್ಣಯ್ಯ, ಸುಮಾ ಅಡ್ಯಂತಾಯ, ಅನಿತಾ ಬಾಬು ಪೂಜಾರಿ, ಶಾಂತಾ ರೈ, ರೇಖಾ ಸುವರ್ಣ, ಮೀನಾಕ್ಷಿ ಮಾಧವ ಬನ್ನಂಜೆ, ಪುಷ್ಪಾ ಅಂಚನ್​, ಸಂಧ್ಯಾ ತಿಲಕ್​ರಾಜ್​, ಮಮತಾ ಶೆಟ್ಟಿ ಇತರರಿದ್ದರು.
ಉಡುಪಿಯ ಜಿಲ್ಲಾ ಕಾಂಗ್ರೆಸ್​ ಭವನದಲ್ಲಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್​ನ ಮಾಸಿಕ ಸಭೆ ನಡೆಯಿತು. ಜ್ಯೋತಿ ಹೆಬ್ಬಾರ್​, ಗೀತಾ ವಾಗ್ಳೆ, ಸರಸು ಬಂಗೇರ, ಮಾಲಿನಿ ರೈ, ದೇವಕಿ ಸಣ್ಣಯ್ಯ, ಸುಮಾ ಅಡ್ಯಂತಾಯ, ಅನಿತಾ ಬಾಬು ಪೂಜಾರಿ, ಶಾಂತಾ ರೈ, ರೇಖಾ ಸುವರ್ಣ, ಮೀನಾಕ್ಷಿ ಮಾಧವ ಬನ್ನಂಜೆ, ಪುಷ್ಪಾ ಅಂಚನ್​, ಸಂಧ್ಯಾ ತಿಲಕ್​ರಾಜ್​, ಮಮತಾ ಶೆಟ್ಟಿ ಇತರರಿದ್ದರು.
Published on

* ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಅಶೋಕ್​ ಕೊಡವೂರು ಕರೆ

* ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್​ನ ಮಾಸಿಕ ಸಭೆ

ಉಡುಪಿ: ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್​) ಪ್ರಕ್ರಿಯೆ ಮುಂದುವರಿದಿದೆ. ಆಯಾ ವ್ಯಾಪ್ತಿಯ ಬಿಎಲ್​ಒಗಳೊಂದಿಗೆ ಸ್ಥಳೀಯ ಬ್ಲಾಕ್​ ಮಹಿಳಾ ಕಾಂಗ್ರೆಸ್​ನ ಅಧ್ಯಕ್ಷರು ಹಾಗೂ ಜಿಲ್ಲಾ ಮಹಿಳಾ ಕಾಂಗ್ರೆಸ್​ನ ಪದಾಧಿಕಾರಿಗಳು ಉಪಸ್ಥಿತರಿದ್ದು ಪ್ರಕ್ರಿಯೆ ಪರಿಶೀಲಿಸಬೇಕು. ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರನ್ನು ಸೇರ್ಪಡೆಗೊಳಿಸಲು ಶ್ರಮಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್​ ಸಮಿತಿಯ ಅಧ್ಯಕ್ಷ ಅಶೋಕ್​ ಕೊಡವೂರು ಕರೆ ನೀಡಿದರು.
ಉಡುಪಿಯ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್​ ಭವನದಲ್ಲಿ ಶನಿವಾರ (ಜು.18) ಆಯೋಜಿಸಿದ್ದ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್​ನ ಮಾಸಿಕ ಸಭೆಯಲ್ಲಿ ಮಾತನಾಡಿದರು.
'ಆಟಿಡೊಂಜಿ ದಿನ' ಕಾರ್ಯಕ್ರಮ
ಮಹಿಳಾ ಕಾಂಗ್ರೆಸ್​ನ ಜಿಲ್ಲಾಧ್ಯಕ್ಷೆ ಜ್ಯೋತಿ ಹೆಬ್ಬಾರ್​ ಮಾತನಾಡಿ, ತುಳುನಾಡಿನ ಸಂಸ್ಕೃತಿ ಹಾಗೂ ಸಾಂಪ್ರದಾಯ ಬೆಳೆಸುವ ನಿಟ್ಟಿನಲ್ಲಿ 'ಆಟಿಡೊಂಜಿ ದಿನ' ಕಾರ್ಯಕ್ರಮ ಆಯೋಜಿಸಲಾಗುವುದು. ಗೃಹಜ್ಯೋತಿ ಮರುನೋಂದಣಿಯ ಪ್ರಕ್ರಿಯೆಯಲ್ಲಿ ಅರ್ಹ ಫಲಾನುಭವಿಗಳಿಗೆ ಸಹಾಯ ಮಾಡಲು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್​ನ ಪದಾಧಿಕಾರಿಗಳು ಹಾಗೂ ಎಲ್ಲ ಬ್ಲಾಕ್​ ಮಹಿಳಾ ಕಾಂಗ್ರೆಸ್​ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಹಕರಿಸಬೇಕು ಎಂದರು.
ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್​ ಸಮಿತಿಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ನಿರೀಕ್ಷಾ ಮೆಂಡನ್​ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಗೀತಾ ವಾಗ್ಳೆ, ಮಹಿಳಾ ಕಾಂಗ್ರೆಸ್​ನ ಹಿರಿಯ ನಾಯಕಿಯರಾದ ಸರಸು ಬಂಗೇರ, ಮಾಲಿನಿ ರೈ, ಬ್ಲಾಕ್​ ಮಹಿಳಾ ಕಾಂಗ್ರೆಸ್​ನ ಅಧ್ಯಕ್ಷೆಯರಾದ ದೇವಕಿ ಸಣ್ಣಯ್ಯ, ಸುಮಾ ಅಡ್ಯಂತಾಯ, ಅನಿತಾ ಬಾಬು ಪೂಜಾರಿ, ಶಾಂತಾ ರೈ, ರೇಖಾ ಸುವರ್ಣ, ಜಿಲ್ಲಾ ಮಹಿಳಾ ಕಾಂಗ್ರೆಸ್​ನ ಪ್ರಮುಖರಾದ ಮೀನಾಕ್ಷಿ ಮಾಧವ ಬನ್ನಂಜೆ, ಗೋಪಿ ನಾಯ್ಕ್​, ದೇವಕಿ ಕೋಟ್ಯಾನ್​, ಸರಸ್ವತಿ, ಜ್ಯೋತಿ ಪುತ್ರನ್​, ಮಮತಾ ಕಿಶೋರ್​ ಶೆಟ್ಟಿ, ರೋಶಿನಿ ಶೆಟ್ಟಿ, ಜಾನಕಿ ನಾಯ್ಕ್​, ವಾಣಿ ಶೆಟ್ಟಿ, ಶೋಭಾ ನಾಯ್ಕ್​, ಸುಧಾ ಪೂಜಾರಿ, ಲೀಲಾವತಿ, ಸುಮನಾ ಹಾಗೂ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪಾ ಅಂಚನ್​ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸಂಧ್ಯಾ ತಿಲಕ್​ರಾಜ್​ ವರದಿ ವಾಚಿಸಿದರು. ಉಡುಪಿ ಬ್ಲಾಕ್​ನ ಅಧ್ಯಕ್ಷೆ ಮಮತಾ ಶೆಟ್ಟಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net