ಉಡುಪಿ: ಸುದೀರ್ಘ ಇತಿಹಾಸ ಹೊಂದಿರುವ ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ)ನ ತರಬೇತಿ, ಕೃಷಿ ಪ್ರಯೋಗ, ಮಹಿಳಾ ಸಬಲೀಕರಣ ಮತ್ತು ಯುವ ಜನತೆಯ ಸ್ವಾವಲಂಬನೆಯಲ್ಲಿ ಇನ್ನೂ ಗಮನಾರ್ಹ ಕೆಲಸ ಮಾಡಬೇಕಿದೆ. ನಮ್ಮ ನಂತರವೂ ಸಹ ಮಹತ್ವದ ನೂರಾರು ಜ್ಞಾನವನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ಪ್ರಯತ್ನವೂ ಆಗಬೇಕಿದೆ. ಆ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಅಳವಡಿಸಿ ಹೊಸ ಬಗೆಯ ಕಾಯಕ ರೂಪಿಸಲಾಗುವುದು ಎಂದು ಮೋಹನ್ ಭಾಸ್ಕರ್ ಹೆಗಡೆ ತಿಳಿಸಿದರು.