ಮತದಾರರ ಗಮನಸೆಳೆದ ಮಾದರಿ ಮತಗಟ್ಟೆಗಳು

 ಮಧೂರು ಗ್ರಾಪಂ ವ್ಯಾಪ್ತಿಯ ಕೂಡ್ಲು ಶ್ರೀಗೋಪಾಲಕೃಷ್ಣ ಶಾಲೆಯಲ್ಲಿ ಹಸಿರು ಸಂಹಿತೆಯೊಂದಿಗೆ ಸಜ್ಜುಗೊಳಿಸಲಾದ ಮತಗಟ್ಟೆಯಲ್ಲಿ ಕಂಡು ಬಂದ ಸರತಿ ಸಾಲು.
ಮಧೂರು ಗ್ರಾಪಂ ವ್ಯಾಪ್ತಿಯ ಕೂಡ್ಲು ಶ್ರೀಗೋಪಾಲಕೃಷ್ಣ ಶಾಲೆಯಲ್ಲಿ ಹಸಿರು ಸಂಹಿತೆಯೊಂದಿಗೆ ಸಜ್ಜುಗೊಳಿಸಲಾದ ಮತಗಟ್ಟೆಯಲ್ಲಿ ಕಂಡು ಬಂದ ಸರತಿ ಸಾಲು.
Published on
ಕಾಸರಗೋಡು: ಪ್ರಜಾಪ್ರಭುತ್ವದ ಹಬ್ಬ ಆಚರಿಸಲು ಜಿಲ್ಲೆಯಲ್ಲಿ ಸಜ್ಜುಗೊಳಿಸಲಾದ ಮಾದರಿ ಮತಗಟ್ಟೆಗಳು ಜನಮನ್ನಣೆ ಪಡೆದವು. ಹಸಿರು ಮಾನದಂಡಗಳನ್ನು ಸಂಪೂರ್ಣವಾಗಿ ಪಾಲಿಸಿ ಸ್ಥಾಪಿಸಲಾದ ಮತಗಟ್ಟೆಗಳು ಮತದಾರರಿಗೆ ಹೃದಯಸ್ಪರ್ಶಿ ಮತ್ತು ಹಸಿರು ಅನುಭವ ನೀಡಿತು.
ಮಂಜೇಶ್ವರಂ ಕ್ಷೇತ್ರದಲ್ಲಿ, ಪೈವಳಿಗೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಮತ್ತು ಕಾಸರಗೋಡು ವಿದ್ಯಾಗಿರಿಯಲ್ಲಿ ಎಸ್‌ಎಂಬಿಎಂ ಪಂಚಾಯಿತಿ ಯುಪಿ ಶಾಲೆ, ಉದುಮ ಬಾರ ಜಿಡಬ್ಲುೃ ಎಲ್‌ಪಿ ಶಾಲೆ ಮತ್ತು ಕಾಞಂಗಾಡ್‌ನ ರಾವಣೇಶ್ವರಂ ಜಿಎಚ್‌ಎಸ್‌ಎಸ್, ನೀಲೇಶ್ವರ ಸರ್ಕಾರಿ ಎಲ್‌ಪಿ ಶಾಲೆ ಹಾಗೂ ತ್ರಿಕರಿಪುರ ಕ್ಷೇತ್ರದಲ್ಲಿ ಮಾದರಿ ಮತಗಟ್ಟೆಗಳನ್ನು ನಿರ್ಮಿಸಲಾಗಿತ್ತು.
ಹಳೇ ಶೈಲಿಯ ಕುರ್ಚಿಗಳು ಮತ್ತು ಗತಕಾಲದ ವೈಭವ ಮೆಲುಕು ಹಾಕುವ ರೇಡಿಯೊದೊಂದಿಗೆ ಸ್ಥಾಪಿಸಲಾದ ಮತಗಟ್ಟೆಗಳನ್ನು ಮತದಾರರು ಕುತೂಹಲದಿಂದ ವೀಕ್ಷಿಸಿದರು. ಪ್ಲಾಸ್ಟಿಕ್‌ರಹಿತವಾದ ಪರಿಸರಸ್ನೇಹಿ ತರಗೆಲೆ, ತೆಂಗಿನಗರಿ ಮತ್ತು ನೈಸರ್ಗಿಕ ವಸ್ತುಬಳಸಿ ನಿರ್ಮಿಸಿದ್ದ ಬೂತ್‌ಗಳು ಪರಿಸರ ಸಂರಕ್ಷಣೆಯ ಸಂದೇಶ ಸಾರಿದವು. ಮಹಿಳೆಯರೇ ಚುನಾವಣೆ ಕರ್ತವ್ಯದಲ್ಲಿದ್ದ ‘ಪಿಂಕ್ ಬೂತ್’ಗಳೂ ಗಮನಸೆಳೆದವು.
ಬಾಯಾರಿಕೆ ತಣಿಸಲು ನೀರು ಮತ್ತು ವಿಶ್ರಾಂತಿ ಪಡೆಯಲು ವಿಶೇಷ ಸೌಲಭ್ಯ ಒದಗಿಸಲಾಗಿತ್ತು. ಹಿರಿಯ ನಾಗರಿಕರು ಮತ್ತು ಅಂಗವಿಕಲರು ಯಾವುದೇ ಅಡೆತಡೆಯಿಲ್ಲದೆ ಮತ ಚಲಾಯಿಸಲು ಮತಗಟ್ಟೆಯಲ್ಲಿ ಸೌಲಭ್ಯ ಕಲ್ಪಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net