ಜು.26ಕ್ಕೆ ಮಾದರಿ ಪರೀಕ್ಷೆ, ಪ್ರೇರಣಾ ಉಚಿತ ಶಿಬಿರ

ಪೊಲೀಸ್​ ಕಾನ್​ಸ್ಟೇಬಲ್​ ಹುದ್ದೆ ನಿಮಿತ್ತ ಉಡುಪಿಯಲ್ಲಿ ಜು.26ರಂದು ಮಾದರಿ ಪರೀಕ್ಷೆ, ಪ್ರೇರಣಾ ಉಚಿತ ಶಿಬಿರ.
ಪೊಲೀಸ್​ ಕಾನ್​ಸ್ಟೇಬಲ್​ ಹುದ್ದೆ ನಿಮಿತ್ತ ಉಡುಪಿಯಲ್ಲಿ ಜು.26ರಂದು ಮಾದರಿ ಪರೀಕ್ಷೆ, ಪ್ರೇರಣಾ ಉಚಿತ ಶಿಬಿರ.
Published on

* ಪೊಲೀಸ್​ ಕಾನ್​ಸ್ಟೇಬಲ್​ ಹುದ್ದೆ ಅಭ್ಯರ್ಥಿಗಳಿಗೆ

 ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ

ಉಡುಪಿ: ರಾಜ್ಯ ಸರ್ಕಾರ ಪೊಲೀಸ್​ ಕಾನ್​ಸ್ಟೇಬಲ್​ ಹುದ್ದೆಗೆ ಆಹ್ವಾನಿಸಿದ್ದು, ಉಡುಪಿ ಜಿಲ್ಲೆಯಿಂದ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಅನುಕೂಲಕರವಾಗಿ ಜು.26ರಂದು ಬೆಳಗ್ಗೆ 9:30ಕ್ಕೆ ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮಾದರಿ ಪರೀಕ್ಷೆ, ಪ್ರೇರಣಾ ಉಚಿತ ಶಿಬಿರ ಆಯೋಜಿಸಲಾಗಿದೆ.
ಅಭಿನವ ಭಾರತ ಉಡುಪಿ, ಕುಂದಾಪುರದ ಸ್ಪರ್ಧಾ ಸಾರಥಿ ಕೆಎಎಸ್​ ಅಕಾಡೆಮಿ ಮತ್ತು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಸಹಕಾರದಲ್ಲಿ ಈ ಶಿಬಿರ ಆಯೋಜಿಸಲಾಗಿದೆ.
ಪೊಲೀಸ್​ ಕಾನ್​ಸ್ಟೇಬಲ್​ ಹುದ್ದೆಗೆ ಪರೀಕ್ಷೆ ಬರೆಯಲು ಇಚ್ಛಿಸುವ ಅಭ್ಯರ್ಥಿಗಳು ಈ ಶಿಬಿರದ ಸದುಪಯೋಗ ಮಾಡಿಕೊಳ್ಳಬೇಕು.
ಮಾಹಿತಿಗಾಗಿ ಮೊ.ಸಂ. 7019130402, 9845348700 ಸಂಪರ್ಕಿಸಬಹುದು ಎಂದು ಶಾಸಕ ಯಶ್​ಪಾಲ್​ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net