ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಬಾಂಬ್​ ಪತ್ತೆ ಅಣಕು ಕಾರ್ಯಾಚರಣೆ

ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ  ಅಣಕು ಕಾರ್ಯಾಚರಣೆ ನಡೆಯಿತು.
ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಅಣಕು ಕಾರ್ಯಾಚರಣೆ ನಡೆಯಿತು.
Published on
ಉಡುಪಿ: ಸಾರ್ವಜನಿಕ ಸ್ಥಳಗಳಲ್ಲಿ ಸಂಭವಿಸಬಹುದಾದ ತುರ್ತು ಪರಿಸ್ಥಿತಿ ಮತ್ತು ಬಾಂಬ್​ ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ರೈಲ್ವೆ ಸುರಕ್ಷತಾ ಪಡೆ, ನಗರ ಪೊಲೀಸ್​, ಮಣಿಪಾಲ ಪೊಲೀಸ್​ ಹಾಗೂ ಬಾಂಬ್​ ಪತ್ತೆ ದಳದ ಸಹಯೋಗದಲ್ಲಿ ಗುರುವಾರ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಅಣಕು ಕಾರ್ಯಾಚರಣೆ ನಡೆಯಿತು.

ಅಣಕು ಕಾರ್ಯಾಚರಣೆಯಲ್ಲಿ ರೈಲ್ವೆ ನಿಲ್ದಾಣದ ಅಧಿಕಾರಿಗಳು, ವೈದ್ಯಕಿಯ ತಂಡ, ಶ್ವಾನ ದಳ ಹಾಗೂ ಸ್ಥಳಿಯ ಪೊಲೀಸ್​ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕಾರ್ಯಾಚರಣೆ
ಮಧ್ಯಾಹ್ನ 2:30ಕ್ಕೆ ನಿಲ್ದಾಣ ಒಂದನೇ ಪ್ಲಾಟ್​ಫಾಮ್​ರ್ನಲ್ಲಿ ಸಂಶಯಾಸ್ಪದ ವಸ್ತು ಪತ್ತೆಯಾಗಿದೆ ಎಂಬ ಮಾಹಿತಿ ಲಭಿಸುತ್ತಿದ್ದಂತೆ ಕಾರ್ಯಪ್ರವೃತ್ತರಾದ ಆರ್​ಪಿಎಫ್​ ಇನ್ಸ್​ಪೆಕ್ಟರ್​ ಮತ್ತು ತಂಡ ಸ್ಥಳವನ್ನು ಸುತ್ತುವರೆದು, ಮೆಗಾಫೋನ್​ ಮೂಲಕ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಶ್ವಾನ ದಳದ ನೆರವಿನೊಂದಿಗೆ ಮೊದಲ ಹಂತದ ತಪಾಸಣೆ ನಡೆಸಲಾಯಿತು. ನಂತರ ಬಾಂಬ್​ ಪತ್ತೆ ದಳದವರು ಅತ್ಯಾಧುನಿಕ ರೋಬೋಟಿಕ್​ ಸಾಧನ ಹಾಗೂ ಬಾಂಬ್​ ಡಿಟೆಕ್ಷನ್​ ಕಿಟ್​ ಬಳಸಿ ವಸ್ತುವನ್ನು ಪರೀಕ್ಷಿಸಿದರು. ಅಂತಿಮವಾಗಿ ಯಾವುದೇ ಅಪಾಯಕಾರಿ ಸ್ಫೋಟಕಗಳಿಲ್ಲ ಎಂದು ಖಚಿತಪಡಿಸಿಕೊಂಡು ಮಧ್ಯಾಹ್ನ 3:25ಕ್ಕೆ ಕಾರ್ಯಾಚರಣೆ ಮುಕ್ತಾಯಗೊಳಿಸಲಾಯಿತು.

ಭದ್ರತಾ ಉಪಕರಣಗಳ ಪ್ರದರ್ಶನ
ಕಾರ್ಯಾಚರಣೆಯಲ್ಲಿ ಆರ್​ಪಿಎಫ್​ ಸಿಬ್ಬಂದಿ ಗಲಭೆ ನಿಯಂತ್ರಣ ಕವಚ, ಹೆಲ್ಮೆಟ್​, ಶೀಲ್ಡ್​ ಹಾಗೂ ಹ್ಯಾಂಡ್​ ಹೆಲ್ಡ್​ ಮೆಟಲ್​ ಡಿಟೆಕ್ಟರ್​ಗಳನ್ನು ಬಳಸಿದರು. ತುರ್ತು ಸಂದರ್ಭದಲ್ಲಿ ಇಲಾಖೆಗಳ ನಡುವಿನ ಸಮನ್ವಯ ಮತ್ತು ಕ್ಷಿಪ್ರ ಪ್ರತಿಕ್ರಿಯೆಯನ್ನು ಪರೀಕ್ಷಿಸುವುದು ತಾಲೀಮಿನ ಮುಖ್ಯ ಉದ್ದೇಶವಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net