ಬ್ಲಾಕ್​ ಲಿಸ್ಟ್​ನಲ್ಲಿದ್ದ 7 ಮೊಬೈಲ್​ ಪೊಲೀಸರಿಗೆ ಹಸ್ತಾಂತರ

 ಮೊಬೈಲ್​ ಫೋನ್​ಗಳನ್ನು ಉಡುಪಿ ಜಿಲ್ಲಾ ಮೊಬೈಲ್​ ರಿಟೈರ್ಲಸ್​ ಅಸೋಸಿಯೇಶನ್​ ಪದಾಧಿಕಾರಿಗಳು ಜಿಲ್ಲಾ ಪೊಲೀಸ್​ ಅಧೀಕ್ಷಕ ಹರಿರಾಂ ಶಂಕರ್​ ಅವರಿಗೆ ಹಸ್ತಾಂತರಿಸಿದ್ದಾರೆ.
ಮೊಬೈಲ್​ ಫೋನ್​ಗಳನ್ನು ಉಡುಪಿ ಜಿಲ್ಲಾ ಮೊಬೈಲ್​ ರಿಟೈರ್ಲಸ್​ ಅಸೋಸಿಯೇಶನ್​ ಪದಾಧಿಕಾರಿಗಳು ಜಿಲ್ಲಾ ಪೊಲೀಸ್​ ಅಧೀಕ್ಷಕ ಹರಿರಾಂ ಶಂಕರ್​ ಅವರಿಗೆ ಹಸ್ತಾಂತರಿಸಿದ್ದಾರೆ.
Published on
ಉಡುಪಿ: ಜಿಲ್ಲೆಯ ಮೊಬೈಲ್​ ಅಂಗಡಿಗಳಿಗೆ ಅಪರಿಚಿತ ವ್ಯಕ್ತಿಗಳು ಅನುಮಾನಾಸ್ಪದ ರೀತಿಯಲ್ಲಿ ಮಾರಾಟ ಮಾಡಲು ತಂದಿದ್ದ, ಲಕ್ಷಾಂತರ ರೂ. ಮೌಲ್ಯದ 7 ಮೊಬೈಲ್​ ಫೋನ್​ಗಳನ್ನು ಉಡುಪಿ ಜಿಲ್ಲಾ ಮೊಬೈಲ್​ ರಿಟೈರ್ಲಸ್​ ಅಸೋಸಿಯೇಶನ್​ ಪದಾಧಿಕಾರಿಗಳು ಜಿಲ್ಲಾ ಪೊಲೀಸ್​ ಅಧೀಕ್ಷಕ ಹರಿರಾಂ ಶಂಕರ್​ ಅವರಿಗೆ ಹಸ್ತಾಂತರಿಸಿದ್ದಾರೆ.
ಮೊಬೈಲ್​ ಅಂಗಡಿಗಳಿಗೆ ಬಂದಿದ್ದ ಅಪರಿಚಿತರು ಮೊಬೈಲ್​ ಮಾರಾಟ ಮಾಡಲು ಯತ್ನಿಸಿದಾಗ, ಅಂಗಡಿ ಮಾಲೀಕರು ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಕೇಂದ್ರ ಸರ್ಕಾರದ 'ಸಂಚಾರ್​ ಸಾಥಿ' ಆಪ್​ ಮೂಲಕ ಮೊಬೈಲ್​ಗಳ ಐಎಂಇಐ ಸಂಖ್ಯೆಯನ್ನು ಪರಿಶೀಲಿಸಿದಾಗ, ಆ ಎಲ್ಲಾ ಫೋನ್​ಗಳು ಬ್ಲಾಕ್​ ಲಿಸ್ಟ್​ನಲ್ಲಿರುವುದು ಪತ್ತೆಯಾಗಿದೆ. ಫೋನ್​ಗಳ ಸೂಕ್ತ ದಾಖಲೆಗಳನ್ನು ಕೇಳಿದಾಗ ಅಪರಿಚಿತರು ಯಾವುದೇ ದಾಖಲೆ ನೀಡದೆ ಪರಾರಿಯಾಗಿದ್ದಾರೆ. ಹೀಗೆ ಸಂಗ್ರಹಿಸಿ ಮೊಬೈಲ್​ಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಈ ಮೊಬೈಲ್​ಗಳ ಮೂಲ ವಾರಸುದಾರರನ್ನು ಸಿಇಐಆರ್​ ಪೋರ್ಟಲ್​ ಮೂಲಕ ಪತ್ತೆಹಚ್ಚಿ, ಅವರಿಗೆ ತಲುಪಿಸಲಾಗುವುದು ಎಂದು ಪೊಲೀಸ್​ ಇಲಾಖೆ ತಿಳಿಸಿದೆ.

ಅಸೋಸಿಯೇಶನ್​ ಅಧ್ಯಕ್ಷ ವಿವೇಕ್​ ಜಿ. ಸುವರ್ಣ, ಸದಸ್ಯರಾದ ರಂಜಿತ್​ ಶೆಟ್ಟಿ, ಸಂದೇಶ್​, ಸುಧರ್ಶನ್​, ಗಣೇಶ್​ ಮತ್ತು ಅಭಿಷೇಕ್​ ಎಸ್​ಪಿಯವರನ್ನು ಭೇಟಿಯಾಗಿ ಏಳು ಮೊಬೈಲ್​ ಫೋನ್​ಗಳನ್ನು ಕಾನೂನು ಪ್ರಕ್ರಿಯೆಗಾಗಿ ಒಪ್ಪಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net