ಅಕ್ಷರದೊಂದಿಗೆ ಮೊಬೈಲ್ ಸಾಕ್ಷರತೆ ಅವಶ್ಯ

 ನಯನಾಡು ಗೆಳೆಯರ ಬಳಗ ಸೇವಾ ಸಂಸ್ಥೆ ಟ್ರಸ್ಟ್ ವತಿಯಿಂದ ಉಚಿತ ಲೇಖನ ಪುಸ್ತಕ ಹಾಗೂ ವಿದ್ಯಾರ್ಥಿ ಸಹಾಯಧನ ವಿತರಣೆ ಕಾರ್ಯಕ್ರಮ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಿತು. ಜಯಪ್ರಕಾಶ್ ಕೆ.ಎಸ್., ಡೋನ್ ಪ್ರವೀಣ್ ಕ್ರಾಸ್ತಾ, ಜಾಯ್ಸ ಪಿಂಟೊ ಮತ್ತಿತರರಿದ್ದರು.
ನಯನಾಡು ಗೆಳೆಯರ ಬಳಗ ಸೇವಾ ಸಂಸ್ಥೆ ಟ್ರಸ್ಟ್ ವತಿಯಿಂದ ಉಚಿತ ಲೇಖನ ಪುಸ್ತಕ ಹಾಗೂ ವಿದ್ಯಾರ್ಥಿ ಸಹಾಯಧನ ವಿತರಣೆ ಕಾರ್ಯಕ್ರಮ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಿತು. ಜಯಪ್ರಕಾಶ್ ಕೆ.ಎಸ್., ಡೋನ್ ಪ್ರವೀಣ್ ಕ್ರಾಸ್ತಾ, ಜಾಯ್ಸ ಪಿಂಟೊ ಮತ್ತಿತರರಿದ್ದರು.
Published on
ಬಂಟ್ವಾಳ: ಮಕ್ಕಳು ಮತ್ತು ಪಾಲಕರು ಅಕ್ಷರ ಸಾಕ್ಷರರಾಗುವ ಜತೆಗೆ ಮೊಬೈಲ್ ಸಾಕ್ಷರತೆಯನ್ನೂ ಪಡೆದುಕೊಳ್ಳಬೇಕು. ಇಂದಿನ ದಿನಗಳಲ್ಲಿ ಮೊಬೈಲ್ ಬಳಕೆ ಅನಿವಾರ್ಯವಾಗಿದ್ದು, ಇದರ ದುರುಪಯೋಗದ ಬಗ್ಗೆ ಅರಿವು ಹೊಂದಿರಬೇಕು. ಮಕ್ಕಳು ಮೊಬೈಲ್ ಎಂಬ ಭ್ರಮಲೋಕದಿಂದ ಹೊರ ಬರಬೇಕು ಎಂದು ಪುಂಜಾಲಕಟ್ಟೆ ಠಾಣೆ ಉಪನಿರೀಕ್ಷಕ ರಾಜೇಶ್ ಕೆ.ವಿ. ಹೇಳಿದರು.
ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ನಯನಾಡು ಗೆಳೆಯರ ಬಳಗ ಸೇವಾ ಸಂಸ್ಥೆ ಟ್ರಸ್ಟ್ ವತಿಯಿಂದ ಉಚಿತ ಲೇಖನ ಪುಸ್ತಕ ಹಾಗೂ ವಿದ್ಯಾರ್ಥಿ ಸಹಾಯಧನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೆಳೆಯರ ಬಳಗದ ನಿರ್ದೇಶಕ ವಿನ್ಸೆಂಟ್ ಗಲ್ಬಾವೊ ಕಾರ್ಯಕ್ರಮ ಉದ್ಘಾಟಿಸಿದರು. ನಯನಾಡು ಸರ್ಕಾರಿ ಪ್ರೌಢಶಾಲೆ ಕನ್ನಡ ಅಧ್ಯಾಪಕ ಜಯಪ್ರಕಾಶ್ ಕೆ.ಎಸ್., ಗೆಳೆಯರ ಬಳಗದ ಅಧ್ಯಕ್ಷ ಡೋನ್ ಪ್ರವೀಣ್ ಕ್ರಾಸ್ತಾ ಮಾತನಾಡಿದರು. ಗೌರವಾಧ್ಯಕ್ಷ ನೆಲ್ವಿಸ್ಟರ್ ಪಿಂಟೊ, ಗೌರವ ಸಲಹೆಗಾರ ಎಲಿಯಾಸ್ ಕ್ರಾಸ್ತಾ, ಪ್ರಗತಿಪರ ಕೃಷಿಕ ಜಾಯ್ಸ ಪಿಂಟೊ, ಗ್ರಾಪಂ ಮಾಜಿ ಸದಸ್ಯೆ ಪುಷ್ಪಲತಾ ಸಾಲ್ಯಾನ್, ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆ ಸಿಬ್ಬಂದಿ ಮೇಬುಲ್ ಫರ್ನಾಂಡಿಸ್, ಪತ್ರಕರ್ತ ರತ್ನದೇವ್ ಉಪಸ್ಥಿತರಿದ್ದರು.
90 ಮಕ್ಕಳಿಗೆ ಲೇಖನ ಸಾಮಾಗ್ರಿ ಸಹಿತ ಪುಸ್ತಕ ವಿತರಣೆ, ಇಬ್ಬರು ಮಕ್ಕಳ ಉನ್ನತ ಶಿಕ್ಷಣಕ್ಕೆ ಸಹಾಯಧನ, ಸಂಕಷ್ಟದಲ್ಲಿರುವ ಇಬ್ಬರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಸಹಾಯಧನ ನೀಡಲಾಯಿತು. ನಯನಾಡು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಜೊಯೆಲ್ ಲೋಬೊ ಸ್ವಾಗತಿಸಿದರು. ಪ್ರದೀಪ್ ಪಿಂಟೋ ನಿರೂಪಿಸಿದರು.

ಮಕ್ಕಳು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು. ಉತ್ತಮ ಶಿಕ್ಷಣ ಪಡೆದು ಸರ್ಕಾರಿ ಸೇವೆಗೆ ಸೇರಲು ಪ್ರಯತ್ನಿಸಬೇಕು.

— ನೆಲ್ವಿಸ್ಟರ್ ಪಿಂಟೊ, ಗೆಳೆಯರ ಬಳಗದ ಗೌರವಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net