ಶಿಕ್ಷಕರು ಅಧಿಕೃತ ಉದ್ದೇಶ ಹೊರತುಪಡಿಸಿ ಶಾಲೆಗಳಲ್ಲಿ ಫೋನ್ ಬಳಸದಂತೆ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳುವುದು ಆಯಾ ಶಾಲೆಗಳ ಮುಖ್ಯಶಿಕ್ಷರ ಜವಾಬ್ದಾರಿ. ಶಾಲಾ ಕೊಠಡಿಗಳಲ್ಲಿ, ವಿಶೇಷವಾಗಿ ಯಾವುದೇ ಅಧಿಕೃತ ಅಗತ್ಯಗಳಿಲ್ಲದಿದ್ದಾಗ, ಫೋನ್ ಕೊಂಡೊಯ್ಯಲು ಅವಕಾಶ ನೀಡದಂತೆ ಮುಖ್ಯಶಿಕ್ಷಕರು ನೋಡಿಕೊಳ್ಳಬೇಕು ಎಂದು ಜಿಲ್ಲಾ ಶಿಕ್ಷಣಾಧಿಕಾರಿ ನಿರ್ದೇಶನ ನೀಡಿದ್ದಾರೆ.