ಮೊಬೈಲ್​ ಗೀಳಿನಿಂದಾಗಿ ಓದಿನ ಮಹತ್ವಕ್ಕೆ ಮಂಕು

ಉಡುಪಿಯಲ್ಲಿ ಆಯೋಜಿಸಿದ್ದ ಗ್ರಂಥಾಲಯ ಸಪ್ತಾಹವನ್ನು ನಿತ್ಯಾನಂದ ಒಳಕಾಡು ಉದ್ಘಾಟಿಸಿದರು. ತಾರಾನಾಥ ಮೇಸ್ತ ಶಿರೂರು, ಸುನೀತಾ ಬಿ.ಎಸ್​., ಆಶಾ, ಸಾಧನಾ ಅಂಚನ್​, ವಿದ್ಯಾ ವಾಣಿ ಇತರರಿದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ಗ್ರಂಥಾಲಯ ಸಪ್ತಾಹವನ್ನು ನಿತ್ಯಾನಂದ ಒಳಕಾಡು ಉದ್ಘಾಟಿಸಿದರು. ತಾರಾನಾಥ ಮೇಸ್ತ ಶಿರೂರು, ಸುನೀತಾ ಬಿ.ಎಸ್​., ಆಶಾ, ಸಾಧನಾ ಅಂಚನ್​, ವಿದ್ಯಾ ವಾಣಿ ಇತರರಿದ್ದರು.
Published on: 

* ಸಮಾಜಸೇವಕ ನಿತ್ಯಾನಂದ ಒಳಕಾಡು ಅಭಿಪ್ರಾಯ

* ಉಡುಪಿಯಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹಕ್ಕೆ ಚಾಲನೆ

ಉಡುಪಿ: ಜ್ಞಾನ ಸಂಪಾದನೆಗೆ ಗ್ರಂಥಾಲಯಗಳು ಮಹತ್ವದ ಕೇಂದ್ರಗಳಾಗಿವೆ. ಮೊಬೈಲ್​ ಗೀಳಿನಿಂದಾಗಿ ಓದಿನ ಮಹತ್ವ ಕಡಿಮೆಯಾಗುತ್ತಿದೆ. ಇಂದಿನ ಕಾಲಘಟ್ಟದಲ್ಲಿ ಗ್ರಂಥಾಲಯಗಳ ಅಗತ್ಯತೆ ಹೆಚ್ಚಿದೆ. ಯುವಸಮುದಾಯ ಗ್ರಂಥಾಲಯದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಅಭಿಪ್ರಾಯಪಟ್ಟರು.

ಉಡುಪಿ ನಗರದಲ್ಲಿ ಕವಿ ಮುದ್ದಣ ಮಾರ್ಗದಲ್ಲಿರುವ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಗರ ಕೇಂದ್ರದ ಶಾಖಾ ಗ್ರಂಥಾಲಯದ ವತಿಯಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ನಿಮಿತ್ತ ಶನಿವಾರ (ನ.14) ಆಯೋಜಿಸಿದ್ದ ಪುಸ್ತಕ ಪ್ರದರ್ಶನ, ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪುಸ್ತಕ ಪ್ರದರ್ಶನ, ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ನಿತ್ಯಾನಂದ ಒಳಕಾಡು ಚಾಲನೆ ನೀಡಿದರು.
ಪುಸ್ತಕ ಪ್ರದರ್ಶನ, ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ನಿತ್ಯಾನಂದ ಒಳಕಾಡು ಚಾಲನೆ ನೀಡಿದರು.

ಭಾಷಾ ಕೌಶಲ ವೃದ್ಧಿ

ಯುವಸಾಹಿತಿ ತಾರಾನಾಥ ಮೇಸ್ತ ಶಿರೂರು ಮಾತನಾಡಿ, ಓದುವ ಹವ್ಯಾಸದಿಂದ ಜ್ಞಾನವಿಸ್ತಾರವಷ್ಟೇ ಅಲ್ಲದೆ ಚಿಂತನಾ ಶಕ್ತಿ, ಭಾಷಾ ಕೌಶಲ ಹಾಗೂ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗುತ್ತದೆ. ಮೊಬೈಲ್​ ಮತ್ತು ಅಂತರ್ಜಾಲದ ದಾಸ್ಯದಿಂದ ಹೊರಬಂದು ಕೆಲ ಸಮಯವಾದರೂ ಯುವಜನತೆ ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು. ಸಮೀಪದಲ್ಲಿರುವ ಇಂತಹ ಗ್ರಂಥಾಲಯಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಭಾರತದ ಗ್ರಂಥಾಲಯ ಚಳವಳಿಯ ಪಿತಾಮಹ, ಪದ್ಮಶ್ರೀ ಡಾ. ಎಸ್​.ಆರ್​. ರಂಗನಾಥನ್​ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಂಥಾಲಯ ಸಿಬ್ಬಂದಿ ಆಶಾ, ಸಾಧನಾ ಅಂಚನ್​, ವಿದ್ಯಾ ವಾಣಿ, ಕಾಲೇಜ್​ ವಿದ್ಯಾರ್ಥಿಗಳು ಹಾಗೂ ಓದುಗರು ಉಪಸ್ಥಿತರಿದ್ದರು. ಗ್ರಂಥಾಲಯ ಸಹಾಯಕಿ ಸುನೀತಾ ಬಿ.ಎಸ್​. ಕಾರ್ಯಕ್ರಮ ನಿರ್ವಹಿಸಿದರು.

ಸಪ್ತಾಹದಿಂದ ಓದುಗರಲ್ಲಿ ಪುಸ್ತಕ ಪ್ರೀತಿ ಬೆಳೆಸಲು ಹಾಗೂ ಹೊಸ ಓದುಗರನ್ನು ಗ್ರಂಥಾಲಯದತ್ತ ಆಕರ್ಷಿಸಲು ಸಹಕಾರಿಯಾಗುತ್ತದೆ. ನ.20ರ ವರೆಗೆ ಪುಸ್ತಕ ಪ್ರದರ್ಶನ ಹಾಗೂ ಗ್ರಂಥಾಲಯ ಸದಸ್ಯತ್ವ ನೋಂದಣಿ ಅಭಿಯಾನ ನಡೆಯಲಿದೆ. ಹಿರಿ-ಕಿರಿಯರೆಲ್ಲರೂ ಸದುಪಯೋಗ ಮಾಡಿಕೊಳ್ಳಬೇಕು.
ಸುನೀತಾ ಬಿ.ಎಸ್​. ಗ್ರಂಥಾಲಯ ಸಹಾಯಕಿ.