ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು 200 ಬೆಡ್ ಸಾಮರ್ಥ್ಯದ ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ ಅಗತ್ಯ ಸಿಬ್ಬಂದಿ ನಿಯೋಜನೆಗೆ ರಾಜ್ಯ ಸರ್ಕಾರಕ್ಕೆ ಮನವಿ ನೀಡಲಾಗುವುದು. ಪ್ರಸ್ತುತ 70 ಬೆಡ್ಗಳನ್ನು ಬಳಸಿಕೊಂಡು ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದರೆ ದೊಡ್ಡ ಕಟ್ಟಡದ ನಿರ್ವಹಣೆ ವೆಚ್ಚವೇ ಅಧಿಕವಾಗಿದೆ. ಲ್ಟ್ಿ ಕೆಟ್ಟುಹೋಗಿದ್ದು, ಅನೇಕ ಕಡೆಗಳಲ್ಲಿ ಮಳೆ ನೀರು ಸೋರಿಕೆಯಾಗುತ್ತಿದೆ. ಇಲಿ ಮತ್ತು ಹೆಗ್ಗಣಗಳ ಕಾಟ ಅಧಿಕವಾಗಿದೆ. ಯಂತ್ರೋಪಕರಣಗಳು ವಿದೇಶದಿಂದ ಆಮದಾಗಿದ್ದು, ಇದರ ನಿರ್ವಹಣೆಯೂ ದುಬಾರಿಯಾಗಿದೆ. ಆಸ್ಪತ್ರೆಯ ಒಟ್ಟು ವಾರ್ಷಿಕ ನಿರ್ವಹಣೆಗೆ 60 ಲಕ್ಷ ರೂ. ಅಗತ್ಯವಿದೆ. ಈ ಬಗ್ಗೆ ಹೊಸ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಸರ್ಜನ್ ಡಾ. ಅಶೋಕ್, ಆಸ್ಪತ್ರೆ ಉಪ ವೈದ್ಯಾಧಿಕಾರಿ ಸಂದೀಪ್ ಉಪಸ್ಥಿತರಿದ್ದರು.