ಕೊಳಚೆ ನೀರಿನ ದುರ್ವಾಸನೆ ನಿಯಂತ್ರಿಸಿ

ಉಡುಪಿಯ ನಿಟ್ಟೂರಿನಲ್ಲಿರುವ ಒಳಚರಂಡಿ ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ  ಯಶ್​ಪಾಲ್​ ಸುವರ್ಣ ಭೇಟಿ ನೀಡಿ ಪರಿಶೀಲಿಸಿದರು. ಮಹಾಂತೇಶ್​ ಹಂಗರಗಿ, ಕಿರಣಕುಮಾರ್​ ಬೈಲೂರು, ಸಂತೋಷ್​ ಜತ್ತನ್​, ಬಾಲಕೃಷ್ಣ ಶೆಟ್ಟಿ, ಗಿರೀಶ್​ ಅಂಚನ್​, ದಿನೇಶ್​ ಅಮೀನ್​ ಇತರರಿದ್ದರು.
ಉಡುಪಿಯ ನಿಟ್ಟೂರಿನಲ್ಲಿರುವ ಒಳಚರಂಡಿ ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ಯಶ್​ಪಾಲ್​ ಸುವರ್ಣ ಭೇಟಿ ನೀಡಿ ಪರಿಶೀಲಿಸಿದರು. ಮಹಾಂತೇಶ್​ ಹಂಗರಗಿ, ಕಿರಣಕುಮಾರ್​ ಬೈಲೂರು, ಸಂತೋಷ್​ ಜತ್ತನ್​, ಬಾಲಕೃಷ್ಣ ಶೆಟ್ಟಿ, ಗಿರೀಶ್​ ಅಂಚನ್​, ದಿನೇಶ್​ ಅಮೀನ್​ ಇತರರಿದ್ದರು.
Published on

* ಅಧಿಕಾರಿಗಳಿಗೆ ಶಾಸಕ ಯಶ್​ಪಾಲ್​ ಸೂಚನೆ

* ನಿಟ್ಟೂರಿನ ಶುದ್ಧೀಕರಣ ಘಟಕಕ್ಕೆ ಭೇಟಿ

ಉಡುಪಿ: ನಿಟ್ಟೂರು ಕೊಳಚೆ ನೀರು ಶುದ್ಧೀಕರಣ ಘಟಕದಿಂದ ಪರಿಸರದಲ್ಲಿರುವ ಸ್ಥಳೀಯ ಜನರಿಗೆ ದುರ್ವಾಸನೆ ಹಾಗೂ ಕುಡಿಯುವ ನೀರಿನ ಬಾವಿಗಳಿಗೆ ಕಲುಷಿತ ನೀರು ಸೇರುತ್ತಿದೆ. ಈ ಬಗ್ಗೆ ದೂರುಗಳು ಬರುತ್ತಿದ್ದು, ತಕ್ಷಣವೇ ಅಗತ್ಯ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಶಾಸಕ ಯಶ್​ಪಾಲ್​ ಸುವರ್ಣ ಸೂಚಿಸಿದರು.
ಉಡುಪಿ ನಗರಸಭೆಯ ನಿಟ್ಟೂರಿನಲ್ಲಿರುವ ಒಳಚರಂಡಿ ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ಅಧಿಕಾರಿಗಳೊಂದಿಗೆ ಭಾನುವಾರ (ಫೆ.22) ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.

ಉನ್ನತೀಕರಣ ಕಾಮಗಾರಿ

ರಾಷ್ಟ್ರೀಯ ಹಸಿರು ಪೀಠದ ಆದೇಶದ ಮೇರೆಗೆ ಮಂಜೂರಾದ 30 ಕೋಟಿ ರೂ. ಅನುದಾನದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕದ ಉನ್ನತೀಕರಣ ಕಾಮಗಾರಿ ಕುರಿತು ಅಧಿಕಾರಿಗಳೊಂದಿಗೆ ಯಶ್​ಪಾಲ್​ ಚರ್ಚಿಸಿದರು. ಅಲ್ಲದೆ, ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಿದರು.
ಉಡುಪಿ ನಗರಸಭಾ ಪೌರಾಯುಕ್ತ ಮಹಾಂತೇಶ್​ ಹಂಗರಗಿ, ನಗರಸಭೆಯ ಮಾಜಿ ಅಧ್ಯಕ್ಷ ಕಿರಣಕುಮಾರ್​ ಬೈಲೂರು, ಮಾಜಿ ಸದಸ್ಯರಾದ ಸಂತೋಷ್​ ಜತ್ತನ್​, ಬಾಲಕೃಷ್ಣ ಶೆಟ್ಟಿ, ಗಿರೀಶ್​ ಅಂಚನ್​, ಹರೀಶ್​ ಶೆಟ್ಟಿ, ಸುಂದರ್​ ಕಲ್ಮಾಡಿ, ಮಂಜುನಾಥ್​ ಮಣಿಪಾಲ, ಅಶೋಕ್​ ನಾಯ್ಕ್​, ಗಿರಿಧರ್​ ಆಚಾರ್ಯ ಕರಂಬಳ್ಳಿ, ಟಿ.ಜಿ. ಹೆಗ್ಡೆ, ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್​ ಅಮೀನ್​, ಸಹಾಯಕ ಕಾರ್ಯಪಾಲಕ ಅಭಿಯಂತ ದುರ್ಗಾಪ್ರಸಾದ್​ ಹಾಗೂ ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು.
"

ಉಡುಪಿ ನಗರ ವೇಗವಾಗಿ ಬೆಳೆಯುತ್ತಿದೆ. ಹೀಗಾಗಿ ನಗರದ ಒಳಚರಂಡಿ ಕೊಳಚೆ ನೀರು ಶುದ್ಧೀಕರಣ ಘಟಕದ ಸಾಮರ್ಥ್ಯ ವಿಸ್ತರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ತಕ್ಷಣ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net