ಕುಡಿಯುವ ನೀರಿಗೆ ಸಮಸ್ಯೆಯಾಗದಿರಲಿ

ಉಡುಪಿಯ ಬಜೆ ಡ್ಯಾಂಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಯಶ್​ಪಾಲ್​ ಸುವರ್ಣ ನೀರಿನ ಸಂಗ್ರಹ ಪರಿಶೀಲಿಸಿದರು. ಮಹಾಂತೇಶ್​ ಹಂಗರಗಿ, ಪ್ರಭಾಕರ್​ ಪೂಜಾರಿ, ಸುಮಿತ್ರಾ ನಾಯಕ್​, ಗಿರೀಶ್​ ಅಂಚನ್​, ಬಾಲಕೃಷ್ಣ ಶೆಟ್ಟಿ, ಹರೀಶ್​ ಶೆಟ್ಟಿ ಇತರರಿದ್ದರು.
ಉಡುಪಿಯ ಬಜೆ ಡ್ಯಾಂಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಯಶ್​ಪಾಲ್​ ಸುವರ್ಣ ನೀರಿನ ಸಂಗ್ರಹ ಪರಿಶೀಲಿಸಿದರು. ಮಹಾಂತೇಶ್​ ಹಂಗರಗಿ, ಪ್ರಭಾಕರ್​ ಪೂಜಾರಿ, ಸುಮಿತ್ರಾ ನಾಯಕ್​, ಗಿರೀಶ್​ ಅಂಚನ್​, ಬಾಲಕೃಷ್ಣ ಶೆಟ್ಟಿ, ಹರೀಶ್​ ಶೆಟ್ಟಿ ಇತರರಿದ್ದರು.
Published on

* ಅಧಿಕಾರಿಗಳಿಗೆ ಶಾಸಕ ಯಶ್​ಪಾಲ್​ ಸುವರ್ಣ ಸೂಚನೆ

* ಬಜೆ ಅಣೆಕಟ್ಟೆಗೆ ಭೇಟಿ, ವಾಟರ್​ ಲೆವೆಲ್​ ಪರಿಶೀಲನೆ

ಉಡುಪಿ: ವಾರಾಹಿ ಯೋಜನೆಯ ಮೂಲಕವೂ ಉಡುಪಿ ನಗರಕ್ಕೆ ಕುಡಿಯುವ ನೀರು ಸರಬರಾಜಾಗುತ್ತಿದ್ದು, ಬಜೆ ಅಣೆಕಟ್ಟೆಯಿಂದಲೂ ನಿರಂತರ ನೀರು ಪೂರೈಕೆಗೆ ನೀರಿನ ಲಭ್ಯತೆ ಇದೆ. ಹೀಗಾಗಿ ಉಡುಪಿ ನಗರದ ಜನತೆಗೆ ನಿರಂತರ ನೀರು ಸರಬರಾಜಿನಲ್ಲಿ ಯಾವುದೇ ಸಮಸ್ಯೆಯಾಗದಂತೆ ಈಗಿನಿಂದಲೇ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕ ಯಶ್​ಪಾಲ್​ ಸುವರ್ಣ ಸೂಚನೆ ನೀಡಿದರು.
ಉಡುಪಿ ನಗರಸಭೆಯ ವತಿಯಿಂದ ನಗರಕ್ಕೆ ಕುಡಿಯುವ ನೀರು ಪೂರೈಸುವ ಬಜೆ ಅಣೆಕಟ್ಟು ಪ್ರದೇಶಕ್ಕೆ ಅಧಿಕಾರಿಗಳೊಂದಿಗೆ ಸೋಮವಾರ (ಫೆ.9) ಭೇಟಿ ನೀಡಿ ನೀರಿನ ಸಂಗ್ರಹ ಮಟ್ಟ ಪರಿಶೀಲಿಸಿ ಮಾಹಿತಿ ಪಡೆದರು.
ಇತ್ತೀಚೆಗೆ ಉನ್ನತಿಕರಣಗೊಂಡ ನೀರು ಶುದ್ಧೀಕರಣ ಘಟಕಕ್ಕೂ ಸಹ ಭೇಟಿ ನೀಡಿ ಕಾರ್ಯ ಚಟುವಟಿಕೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಉತ್ತಮವಾಗಿ ಘಟಕ ನಿರ್ವಹಣೆಯೊಂದಿಗೆ ಉಡುಪಿ ಜನತೆಗೆ ನಿರಂತರ ಶುದ್ಧ ಕುಡಿಯುವ ನೀರು ನೀಡಲು ವಿಶೇಷ ಆದ್ಯತೆ ನೀಡಿ ಎಂದು ಸಲಹೆ ನೀಡಿದರು.
ಉಡುಪಿ ನಗರಸಭಾ ಪೌರಾಯುಕ್ತ ಮಹಾಂತೇಶ್​ ಹಂಗರಗಿ, ನಗರಸಭಾ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ್​ ಪೂಜಾರಿ, ಮಾಜಿ ಸದಸ್ಯರಾದ ಸುಮಿತ್ರಾ ನಾಯಕ್​, ಗಿರೀಶ್​ ಅಂಚನ್​, ಬಾಲಕೃಷ್ಣ ಶೆಟ್ಟಿ, ಹರೀಶ್​ ಶೆಟ್ಟಿ, ಗಿರಿಧರ್​ ಆಚಾರ್ಯ, ಸಂತೋಷ್​ ಜತ್ತನ್​, ಟಿ.ಜಿ. ಹೆಗ್ಡೆ, ಮಂಜುನಾಥ್​ ಮಣಿಪಾಲ, ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತ ದುರ್ಗಾಪ್ರಸಾದ್​, ವಾರಾಹಿ ಯೋಜನೆಯ ಅಭಿಯಂತ ಆರ್ಕೇಶ್​ ಗೌಡ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net