ಮಲ್ಪೆಯಲ್ಲಿ ನೂತನ ಪ್ರವೇಶ ದ್ವಾರ, ಹೆದ್ದಾರಿ ಕಾಮಗಾರಿ ಆರಂಭ
ಮಲ್ಪೆಯಲ್ಲಿ ನೂತನ ದ್ವಾರ ನಿರ್ಮಾಣ ಹಾಗೂ ಹೆದ್ದಾರಿ ಕಾಮಗಾರಿ ಕುರಿತು ಅಧಿಕಾರಿಗಳೊಂದಿಗೆ ಯಶ್ಪಾಲ್ ಸುವರ್ಣ ಸಮಾಲೋಚನೆ ನಡೆಸಿದರು. ಕಿಶೋರ್ ಡಿ. ಸುವರ್ಣ, ಜಗನ್ನಾಥ ಕುಂದರ್, ರಾಮಚಂದ್ರ ಕುಂದರ್, ದಯಾನಂದ್ ಸುವರ್ಣ, ಕರುಣಾಕರ್ ಸಾಲ್ಯಾನ್ ಇತರರಿದ್ದರು.
Published on:
Copied
Follow Us
* ಉಡುಪಿ ಯಶ್ ಪಾಲ್ ಸುವರ್ಣ ಮಾಹಿತಿ
* ಇಲಾಖಾ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ
ಉಡುಪಿ: ಮಳೆಗಾಲದ ಹಿನ್ನೆಲೆಯಲ್ಲಿ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಎಲ್ಲ ಚಟುವಟಿಕೆ ಸ್ಥಗಿತವಾಗಿದ್ದು, ಬಂದರಿನ ನೂತನ ಪ್ರವೇಶ ದ್ವಾರ ನಿರ್ಮಾಣ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಂಗಳವಾರದಿಂದ ಆರಂಭಗೊಂಡಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಮೀನುಗಾರಿಕೆ, ಬಂದರು ಹಾಗೂ ರಾಷ್ಟ್ರೀಯ ಹೆದ್ದಾರಿ-169ರ ಅಧಿಕಾರಿಗಳೊಂದಿಗೆ ಬಂದರು ಪ್ರವೇಶ ದ್ವಾರಕ್ಕೆ ಸೋಮವಾರ (ಜೂ.8) ಸಂಜೆ ಭೇಟಿ ನೀಡಿ ಕಾಮಗಾರಿಯ ಕುರಿತಂತೆ ಸಮಾಲೋಚನೆ ನಡೆಸಿದ್ದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಮಸ್ಯೆಯಾಗದಂತೆ ಕಾಮಗಾರಿ
ಹೆದ್ದಾರಿ ಕಾಮಗಾರಿಗೆ ಪೂರಕವಾಗಿ ಗೇಟ್ನ ಅಗಲವನ್ನು 24 ಮೀಟರ್ಗೆ ಮರುವಿನ್ಯಾಸ ಮಾಡಲಾಗಿದೆ. ಮಲ್ಪೆ ಬಂದರು ಸಂಪರ್ಕಿಸುವ ಹೆದ್ದಾರಿ ಭಾಗದಲ್ಲಿ ಕಿರು ಸೇತುವೆ ನಿರ್ಮಾಣ ವಿಸ್ತರಿಸಲು, ಗೇಟ್ ಹಾಗೂ ಕಿರು ಸೇತುವೆ ಎರಡನ್ನೂ ಏಕಕಾಲದಲ್ಲಿ ಆರಂಭಿಸಲು ತಿಳಿಸಲಾಗಿದೆ. ಬಂದರಿನ ಚಟುವಟಿಕೆಗೆ ಸಮಸ್ಯೆಯಾಗದಂತೆ ಕೆಲಸ ಮಾಡುವಂತೆ ತಿಳಿಸಲಾಗಿದೆ. ಬಂದರಿನಲ್ಲಿದ್ದ ಹಳೆಯ ಪ್ರವೇಶ ದ್ವಾರ ತೆರವು ಮಾಡಲಾಗಿದೆ ಎಂದರು.
ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕಿಶೋರ್ ಡಿ. ಸುವರ್ಣ, ಕಾರ್ಯದರ್ಶಿ ಜಗನ್ನಾಥ ಕುಂದರ್, ಮೀನುಗಾರ ಮುಖಂಡರಾದ ರಾಮಚಂದ್ರ ಕುಂದರ್, ದಯಾನಂದ್ ಸುವರ್ಣ, ಕರುಣಾಕರ್ ಸಾಲ್ಯಾನ್, ಸುಭಾಷ್ ಮೆಂಡನ್, ಪ್ರಕಾಶ್ ಬಂಗೇರ, ಕೃಷ್ಣ ಕೋಟ್ಯಾನ್, ಸುರೇಶ್ ಕುಂದರ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
"
ಬಂದರು ಇಲಾಖೆಯ ಅಧೀನದಲ್ಲಿರುವ ರಾ.ಹೆ. ಕಾಮಗಾರಿಗೆ ಅಗತ್ಯವಿರುವ ಜಾಗ ತಕ್ಷಣ ತೆರವು ಮಾಡಿಸಬೇಕು. ಮೆಸ್ಕಾಂನವರು ವಿದ್ಯುತ್ ಕಂಬಗಳ ಸ್ಥಳಾಂತರ, ಬಂದರು ಪ್ರವೇಶಕ್ಕೆ ಬದಲಿ ಮಾರ್ಗದ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಲು, ವಾಹನ ಸುಗಮ ಸಂಚಾರಕ್ಕಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲು ಮಲ್ಪೆ ಪೊಲೀಸ್ ಠಾಣಾ ಅಧಿಕಾರಿಗಳಿಗೆ ಸೂಚಿಸಿದ್ದೇನೆ.