ಕುಡಿಯುವ ನೀರು ಪೂರೈಕೆಗೆ ಸನ್ನದ್ಧರಾಗಿರಿ

ಗ್ರಾಪಂ ಆಡಳಿತಾಧಿಕಾರಿ ಹಾಗೂ ಪಿಡಿಒಗಳೊಂದಿಗೆ ಯಶ್​ಪಾಲ್​ ಸುವರ್ಣ ಸಭೆ ನಡೆಸಿದರು. ಎಚ್​. ಇಬ್ರಾಹಿಂಪುರ, ಶ್ರೀಕಾಂತ್​ ಹೆಗ್ಡೆ ಇದ್ದರು.
ಗ್ರಾಪಂ ಆಡಳಿತಾಧಿಕಾರಿ ಹಾಗೂ ಪಿಡಿಒಗಳೊಂದಿಗೆ ಯಶ್​ಪಾಲ್​ ಸುವರ್ಣ ಸಭೆ ನಡೆಸಿದರು. ಎಚ್​. ಇಬ್ರಾಹಿಂಪುರ, ಶ್ರೀಕಾಂತ್​ ಹೆಗ್ಡೆ ಇದ್ದರು.
Published on

* ಅಧಿಕಾರಿಗಳಿಗೆ ಶಾಸಕ ಯಶ್​ಪಾಲ್​ ಸುವರ್ಣ ಸೂಚನೆ 

* ಬ್ರಹ್ಮಾವರದಲ್ಲಿ ಗ್ರಾಪಂ ಪಿಡಿಒಗಳೊಂದಿಗೆ ಸಭೆ

ಉಡುಪಿ: ಮಳೆಗಾಲದ ಪೂರ್ವ ತಯಾರಿ ಬಗ್ಗೆ ಈಗಿನಿಂದಲೇ ಗಮನ ಹರಿಸಬೇಕು. ಕೃತಕ ನೆರೆಗೆ ಕಾರಣವಾಗುವ ತೋಡು, ಮೋರಿಗಳ ಹೂಳೆತ್ತಿಸಬೇಕು. ಕಟ್ಟಡ ಇನ್ನಿತರ ಕಾಮಗಾರಿ ಸ್ಥಳಗಳಲ್ಲಿ ಮುಂಜಾಗ್ರತೆ ವಹಿಸಬೇಕು. ಅಪಾಯಕಾರಿ ವಿದ್ಯುತ್​ ಕಂಬ ಹಾಗೂ ಮರಗಳಿದ್ದಲ್ಲಿ ತೆರವು ಮಾಡಿಸಬೇಕು. ಪ್ರಸ್ತುತ ಬಿಸಿಲು ತಾಪ ಹೆಚ್ಚುತ್ತಿದ್ದು, ಕುಡಿಯುವ ನೀರಿಗೆ ತೊಂದರೆ ಆಗಬಹುದು. ಗ್ರಾಪಂ ವತಿಯಿಂದ ಅಗತ್ಯ ಪ್ರಮಾಣದ ನೀರು ಪೂರೈಕೆಗೆ ಸನ್ನದ್ಧರಾಗಿರಬೇಕು ಎಂದು ಶಾಸಕ ಯಶ್​ಪಾಲ್​ ಸುವರ್ಣ ಸೂಚನೆ ನೀಡಿದರು.
ಉಡುಪಿ ವಿಧಾನಸಭಾ ಕ್ಷೇತ್ರದ ಬ್ರಹ್ಮಾವರ ತಾಲೂಕಿನ 13 ಗ್ರಾಪಂಗಳ ಆಡಳಿತಾಧಿಕಾರಿ ಹಾಗೂ ಪಿಡಿಒಗಳೊಂದಿಗೆ ತುರ್ತು ಸಭೆ ನಡೆಸಿ, ಕುಡಿಯುವ ನೀರಿನ ಸಂಗ್ರಹ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದು ಮಾತನಾಡಿದರು.
ಹೊಸ ಪೈಪ್​ ಲೈನ್​, ದುರಸ್ತಿ ಕಾಮಗಾರಿ, ಬಾವಿ ಆಳಗೊಳಿಸುವಿಕೆ, ಬೋರ್ವೆಲ್​ ಪ್ಲಷಿಂಗ್​, ಹೆಚ್ಚುವರಿ ಪಂಪ್​ಗಳ ಖರೀದಿ ಇನ್ನಿತರ ಪೂರ್ವ ತಯಾರಿಗಳ ಬಗ್ಗೆ ತುರ್ತಾಗಿ ಗಮನ ಹರಿಸಬೇಕು. ಕಳೆದ ವರ್ಷ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದ ಪ್ರದೇಶಗಳಿಗೆ ವಿಶೇಷ ಗಮನ ನೀಡಬೇಕು. ಅನಿವಾರ್ಯವಾದಲ್ಲಿ ಟ್ಯಾಂಕರ್​ ಮೂಲಕ ನೀರು ಸರಬರಾಜು ಮಾಡಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಬ್ರಹ್ಮಾವರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಚ್​. ಇಬ್ರಾಹಿಂಪುರ, ತಹಸೀಲ್ದಾರ್​ ಶ್ರೀಕಾಂತ್​ ಹೆಗ್ಡೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net