ಗ್ರಾಮೀಣರ ಆರೋಗ್ಯ ಸೇವೆಗೆ ಮೋದಿ ಸರ್ಕಾರ ಆದ್ಯತೆ

ಉಡುಪಿಯ ಕೆಂಜೂರಿನಲ್ಲಿ ಆಯುಷ್ಮಾನ್​ ಆರೋಗ್ಯ ಕೇಂದ್ರ ಸ್ಥಾಪನೆಗೆ ಯಶ್​ಪಾಲ್​ ಸುವರ್ಣ ಶಂಕುಸ್ಥಾಪನೆ ನೆರವೇರಿಸಿದರು. ಪ್ರತಾಪ್​ ಹೆಗ್ಡೆ ಮಾರಾಳಿ, ಡಾ.ಸವಿತಾ ಕುಂದರ್​, ಆದರ್ಶ್​ ಶೆಟ್ಟಿ ಕೆಂಜೂರು, ದಿನೇಶ ಶೆಟ್ಟಿ, ರಮಾನಂದ್​ ಶೆಟ್ಟಿ, ಸುಧಾಕರ್​ ಶೆಟ್ಟಿ ಇನ್ನಿತರರು ಇದ್ದರು.
ಉಡುಪಿಯ ಕೆಂಜೂರಿನಲ್ಲಿ ಆಯುಷ್ಮಾನ್​ ಆರೋಗ್ಯ ಕೇಂದ್ರ ಸ್ಥಾಪನೆಗೆ ಯಶ್​ಪಾಲ್​ ಸುವರ್ಣ ಶಂಕುಸ್ಥಾಪನೆ ನೆರವೇರಿಸಿದರು. ಪ್ರತಾಪ್​ ಹೆಗ್ಡೆ ಮಾರಾಳಿ, ಡಾ.ಸವಿತಾ ಕುಂದರ್​, ಆದರ್ಶ್​ ಶೆಟ್ಟಿ ಕೆಂಜೂರು, ದಿನೇಶ ಶೆಟ್ಟಿ, ರಮಾನಂದ್​ ಶೆಟ್ಟಿ, ಸುಧಾಕರ್​ ಶೆಟ್ಟಿ ಇನ್ನಿತರರು ಇದ್ದರು.
Published on

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಶ್ಲಾಘನೆ 

* ಕೆಂಜೂರಿನಲ್ಲಿ ಆಯುಷ್ಮಾನ್​ ಕೇಂದ್ರಕ್ಕೆ ಶಂಕುಸ್ಥಾಪನೆ

ಉಡುಪಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಗ್ರಾಮೀಣ ಭಾಗದ ಜನತೆಯ ಆರೋಗ್ಯ ಸೇವೆಗೆ ವಿಶೇಷ ಆದ್ಯತೆ ನೀಡಿದೆ. ಹಳ್ಳಿಯಲ್ಲೂ ಸಹ ಜನರಿಗೆ ಸುಲಭವಾಗಿ ಆರೋಗ್ಯ ಸೇವೆ ಪಡೆಯುವಂತಾಗಲು ತುರ್ತು ವ್ಯವಸ್ಥೆ ಇರಬೇಕೆಂಬ ಕಾರಣದಿಂದ ಆಯುಷ್ಮಾನ್​ ಆರೋಗ್ಯ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಸ್ಥಳಿಯರಿಗೆ ಉತ್ತಮ ಸೇವೆ ಲಭಿಸಿ ಆರೋಗ್ಯವಂತ ಸಮಾಜದ ಜಾಗೃತಿ ಮೂಡಿಸುವ ಕಾರ್ಯವಾಗಲಿ ಎಂದು ಶಾಸಕ ಯಶ್​ಪಾಲ್​ ಸುವರ್ಣ ಹಾರೈಸಿದರು.
ಉಡುಪಿಯ ಕಳ್ತೂರು ಗ್ರಾಪಂ ವ್ಯಾಪ್ತಿಯ ಕೆಂಜೂರಿನಲ್ಲಿ 65 ಲಕ್ಷ ರೂ. ವೆಚ್ಚದಲ್ಲಿ ನಿಮಾರ್ಣಗೊಳ್ಳಲಿರುವ ಆಯುಷ್ಮಾನ್​ ಆರೋಗ್ಯ ಕೇಂದ್ರದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಜಿಪಂ ಮಾಜಿ ಸದಸ್ಯ ಪ್ರತಾಪ್​ ಹೆಗ್ಡೆ ಮಾರಾಳಿ, ವೈದ್ಯಾಧಿಕಾರಿ ಡಾ.ಸವಿತಾ ಕುಂದರ್​, ಗ್ರಾಮದ ಮುಖಂಡರಾದ ಆದರ್ಶ್​ ಶೆಟ್ಟಿ ಕೆಂಜೂರು, ದಿನೇಶ ಶೆಟ್ಟಿ, ರಮಾನಂದ್​ ಶೆಟ್ಟಿ, ನಾಗೇಶ್​ ನಾಯಕ್​, ಉಷಾ ಪೂಜಾರಿ, ಮನೋಜಕುಮಾರ್​, ಹರೀಶ್​ ಶೆಟ್ಟಿ, ರವಿಂದ್ರ ಪೂಜಾರಿ, ಉದಯ್​ ಶೆಟ್ಟಿ, ಶಾಂತರಾಜ್​ ಶೆಟ್ಟಿ, ನವೀನಚಂದ್ರ ಶೆಟ್ಟಿ, ನವೀನ ಪುತ್ರನ್​, ರಘುರಾಮ್​ ಶೆಟ್ಟಿ, ಸತೀಶ್​ ಶೆಟ್ಟಿ, ಶ್ರೀಕಾಂತ ಆಚಾರ್ಯ, ಗ್ರಾಪಂ ಆಡಳಿತಾಧಿಕಾರಿ ಸುಧಾಕರ್​ ಶೆಟ್ಟಿ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net