ಹೆದ್ದಾರಿಯ ಅಭಿವೃದ್ಧಿಗೆ ಸಲ್ಲಿಸಿ ತುರ್ತು ಪ್ರಸ್ತಾವನೆ

ಉಡುಪಿ ನಗರದ ಹೆದ್ದಾರಿಯಲ್ಲಿ ತುರ್ತು ಕಾಮಗಾರಿಯ ಕುರಿತು ಅಧಿಕಾರಿಗಳೊಂದಿಗೆ ಯಶ್​ಪಾಲ್​ ಸುವರ್ಣ ಪರಿಶೀಲಿಸಿದರು. ಪ್ರಭಾಕರ್​ ಪೂಜಾರಿ, ಹರೀಶ್​ ರಾಮ್​ ಬನ್ನಂಜೆ, ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಗಿರೀಶ್​ ಅಂಚನ್​, ಟಿ.ಜಿ. ಹೆಗ್ಡೆ ಇತರರಿದ್ದರು.
ಉಡುಪಿ ನಗರದ ಹೆದ್ದಾರಿಯಲ್ಲಿ ತುರ್ತು ಕಾಮಗಾರಿಯ ಕುರಿತು ಅಧಿಕಾರಿಗಳೊಂದಿಗೆ ಯಶ್​ಪಾಲ್​ ಸುವರ್ಣ ಪರಿಶೀಲಿಸಿದರು. ಪ್ರಭಾಕರ್​ ಪೂಜಾರಿ, ಹರೀಶ್​ ರಾಮ್​ ಬನ್ನಂಜೆ, ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಗಿರೀಶ್​ ಅಂಚನ್​, ಟಿ.ಜಿ. ಹೆಗ್ಡೆ ಇತರರಿದ್ದರು.
Published on

* ಅಧಿಕಾರಿಗಳಿಗೆ ಶಾಸಕ ಯಶ್​ಪಾಲ್​ ಸೂಚನೆ

* ಅಂದಾಜು ಪಟ್ಟಿ ಸಿದ್ಧಗೊಳಿಸಲು ಆಗ್ರಹ 

ಉಡುಪಿ: ರಾಷ್ಟ್ರೀಯ ಹೆದ್ದಾರಿ 169-ಎ ಉಡುಪಿ ಕರಾವಳಿ ಬೈಪಾಸ್​ನಿಂದ ಮಣಿಪಾಲದ ಸಿಂಡಿಕೇಟ್​ ಸರ್ಕಲ್​ವರೆಗಿನ ರಸ್ತೆ ಮಾರ್ಗದಲ್ಲಿ ಅನೇಕ ಅಗತ್ಯ ಹಾಗೂ ತುರ್ತು ಅಭಿವೃದ್ಧಿ ಕಾಮಗಾರಿ ಆಗಬೇಕಿದೆ. ಆ ಕುರಿತು ತಕ್ಷಣವೇ ಅಂದಾಜು ಪಟ್ಟಿ ತಯಾರಿಸಿ ಪ್ರಸ್ತಾವನೆ ಸಲ್ಲಿಸಿ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಶಾಸಕ ಯಶ್​ಪಾಲ್​ ಸುವರ್ಣ ಸೂಚನೆ ನೀಡಿದರು.
ಉಡುಪಿ ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಗಬೇಕಿರುವ ಕಾಮಗಾರಿ ಕುರಿತಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಉಡುಪಿ ನಗರಸಭೆಯ ಅಧಿಕಾರಿಗಳೊಂದಿಗೆ ಸೋಮವಾರ (ಜೂ.22) ವಿವಿಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
ಕರಾವಳಿ ಜಂಕ್ಷನ್​ ಬಳಿಯಿಂದ ಬನ್ನಂಜೆ ನಾರಾಯಣ ಗುರು ಸರ್ಕಲ್​ವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣ, ಬನ್ನಂಜೆ ಜಂಕ್ಷನ್​ ಅಭಿವೃದ್ಧಿ, ರಸ್ತೆಯ ಇಕ್ಕೆಲಗಳಲ್ಲಿ ಇಂಟರ್​ ಲಾಕ್​ ಮರು ಅಳವಡಿಕೆ, ಕಡಿಯಾಳಿ ಕುಂಜಿಬೆಟ್ಟು ಭಾಗದಲ್ಲಿ ಚರಂಡಿ ನಿರ್ಮಾಣ, ಶಾರದಾ ಕಲ್ಯಾಣ ಮಂಟಪ ಜಂಕ್ಷನ್​ ಅಭಿವೃದ್ಧಿ, ಎಂಜಿಎಂ ಕಾಲೇಜು ಮುಂಭಾಗದಿಂದ ಇಂದ್ರಾಳಿ ರೈಲ್ವೆ ನಿಲ್ದಾಣದ ರಸ್ತೆಯವರೆಗೆ ಇಂಟರ್​ ಲಾಕ್​ ಅಳವಡಿಕೆ, ಲಕ್ಷ್ಮೀಂದ್ರನಗರದ ಬಳಿ ವ್ಯವಸ್ಥಿತ ಚರಂಡಿ ನಿರ್ಮಾಣ ಕಾರ್ಯ ತ್ವರಿತವಾಗಿ ಆಗಬೇಕಿದೆ ಎಂದರು.
ಉಡುಪಿ ನಗರಸಭಾ ಮಾಜಿ ಅಧ್ಯಕ್ಷ ಪ್ರಭಾಕರ್​ ಪೂಜಾರಿ, ಮಾಜಿ ಸದಸ್ಯರಾದ ಹರೀಶ್​ ರಾಮ್​ ಬನ್ನಂಜೆ, ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಗಿರೀಶ್​ ಅಂಚನ್​, ಟಿ.ಜಿ. ಹೆಗ್ಡೆ, ಸ್ಥಳೀಯ ಮುಖಂಡರಾದ ಸತೀಶ್​ ಕುಲಾಲ್​ ಕಡಿಯಾಳಿ, ಸತೀಶ್​ ಭಾಗವತ್​, ಧನ್ಯವಂತ ಪ್ರಭು ಬನ್ನಂಜೆ, ಪೌರಾಯುಕ್ತ ಮಹಾಂತೇಶ ಹಂಗರಗಿ, ಇಂಜಿನಿಯರ್​ ಕಾರ್ತಿಕ್​, ರಾ.ಹೆ. ಪ್ರಾಧಿಕಾರದ ಅಧಿಕಾರಿಗಳಾದ ಮಂಜನ್​ ಗೌಡ, ನವೀನ್​ ರಾಜ್​, ಶಶಿಧರ್​ ಇತರರು ಉಪಸ್ಥಿತರಿದ್ದರು.

ಶಾಲೆ ಹೋಗಲು ಸರ್ವೀಸ್​ ರಸ್ತೆ ನಿರ್ಮಿಸಿ

ಇಂದ್ರಾಳಿ ಇಂಗ್ಲಿಷ್​ ಮೀಡಿಯಂ ಸ್ಕೂಲ್​.
ಉಡುಪಿ ನಗರಸಭೆಯ ಮೂಲಕ ಈಗಾಗಲೇ ಮಂಜೂರುಗೊಂಡಿರುವ ಎಂಜಿಎಂ ಕಾಲೇಜು ಮುಂಭಾಗ ಹಾಗೂ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಬಳಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ತಕ್ಷಣ ಆರಂಭಿಸಬೇಕು. ಅಗತ್ಯ ಸ್ಥಳಗಳಲ್ಲಿ ಬಸ್​ ಶೆಲ್ಟರ್​ ನಿರ್ಮಿಸಲೂ ಸಹ ಅಂದಾಜು ಪಟ್ಟಿ ತಯಾರಿಸಬೇಕು. ಇಂದ್ರಾಳಿಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಗೊಂಡ ಬಳಿಕ ಪಕ್ಕದಲ್ಲೇ ಇರುವ ಇಂದ್ರಾಳಿ ಇಂಗ್ಲಿಷ್​ ಮೀಡಿಯಂ ಸ್ಕೂಲ್​ಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ತೆರಳಲು ಕಷ್ಟವಾಗುತ್ತಿದೆ. ಮಳೆ ಬಂದರೆ ಆ ಜಾಗದಲ್ಲಿ ನೀರು ಸಂಗ್ರಹಗೊಳ್ಳುತ್ತದೆ. ಹೀಗಾಗಿ ಇಂದ್ರಾಳಿ ಸೇತುವೆಯ ಬಳಿ ಆ ಶಾಲೆಗೆ ಸಂಪರ್ಕಿಸುವಂತೆ ಸರ್ವಿಸ್​ ರಸ್ತೆ ನಿರ್ಮಾಣಕ್ಕೂ ಸಹ ಅಂದಾಜು ಪಟ್ಟಿ ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ನಗರಸಭೆ ಪೌರಾಯುಕ್ತರಿಗೆ ಯಶ್​ಪಾಲ್​ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net