ಆರೋಗ್ಯ ಸೇವೆಗೆ ಪ್ರಧಾನಿ ಮೋದಿ ವಿಶೇಷ ಆದ್ಯತೆ

ಉಡುಪಿಯ ನಿಡಂಬಳ್ಳಿಯಲ್ಲಿ ನಿರ್ಮಾಣಗೊಂಡ ಆಯುಷ್ಮಾನ್​ ಆರೋಗ್ಯ ಕೇಂದ್ರವನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ಎಂ.ಎ. ಗಫೂರ್, ಡಾ. ವಾಸುದೇವ, ಡಾ. ಅಕ್ಷತಾ, ಗುರು ಪ್ರಸಾದ್​, ನಾಗರಾಜ್​ ಕುಂದರ್​, ಉಮೇಶ್​ ಪೂಜಾರಿ, ಪ್ರಭಾಕರ್​ ಪೂಜಾರಿ, ಪ್ರೇಮಲತಾ ಇತರರಿದ್ದರು.
ಉಡುಪಿಯ ನಿಡಂಬಳ್ಳಿಯಲ್ಲಿ ನಿರ್ಮಾಣಗೊಂಡ ಆಯುಷ್ಮಾನ್​ ಆರೋಗ್ಯ ಕೇಂದ್ರವನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ಎಂ.ಎ. ಗಫೂರ್, ಡಾ. ವಾಸುದೇವ, ಡಾ. ಅಕ್ಷತಾ, ಗುರು ಪ್ರಸಾದ್​, ನಾಗರಾಜ್​ ಕುಂದರ್​, ಉಮೇಶ್​ ಪೂಜಾರಿ, ಪ್ರಭಾಕರ್​ ಪೂಜಾರಿ, ಪ್ರೇಮಲತಾ ಇತರರಿದ್ದರು.
Published on

ಉಡುಪಿ ಶಾಕ ಯಶ್​ಪಾಲ್​ ಸುವರ್ಣ ಶ್ಲಾಘನೆ

* ಆಯುಷ್ಮಾನ್​ ಆರೋಗ್ಯ ಕೇಂದ್ರ ಉದ್ಘಾಟನೆ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ಜನತೆಯ ಆರೋಗ್ಯ ಸೇವೆಗೆ ವಿಶೇಷ ಆದ್ಯತೆ ನೀಡಿದೆ. ಅದಕ್ಕೆ ನಿಡಂಬಳ್ಳಿಯಲ್ಲಿ ಉದ್ಘಾಟನೆಗೊಂಡ ಆಯುಷ್ಮಾನ್​ ಆರೋಗ್ಯ ಕೇಂದ್ರವೂ ನಿದರ್ಶನವಾಗಿದೆ. ಇಲ್ಲಿನ ಜನತೆಗೆ ಉತ್ತಮ ಸೇವೆ ಲಭಿಸಲಿ. ಜತೆಗೆ ಆರೋಗ್ಯವಂತ ಸಮಾಜದ ಕುರಿತು ಜಾಗೃತಿ ಮೂಡಿಸುವ ಕಾರ್ಯವಾಗಲಿ ಎಂದು ಶಾಸಕ ಯಶ್​ಪಾಲ್​ ಸುವರ್ಣ ಹೇಳಿದರು.
ಉಡುಪಿಯ ಕಲ್ಯಾಣಪುರ ಗ್ರಾಪಂ ವ್ಯಾಪ್ತಿಯ ನಿಡಂಬಳ್ಳಿಯಲ್ಲಿ 65 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಆಯುಷ್ಮಾನ್​ ಆರೋಗ್ಯ ಕೇಂದ್ರವನ್ನು ಶನಿವಾರ (ಜೂ.6) ಉದ್ಘಾಟಿಸಿ ಮಾತನಾಡಿದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್​ ಮಾತನಾಡಿ, ಆರೋಗ್ಯಕ್ಕೆ ಸಂಬಂಧಿಸಿ ಸರ್ಕಾರದ ಯೋಜನೆ ಹಾಗೂ ಸೇವೆಗಳು ಈ ಆಯುಷ್ಮಾನ್​ ಆರೋಗ್ಯ ಕೇಂದ್ರದ ಮೂಲಕ ಸಾರ್ವಜನಿಕರಿಗೆ ಸಿಗುವಂತಾಗಲಿ ಎಂದು ಆಶಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ, ವೈದ್ಯರಾದ ಡಾ. ಅಕ್ಷತಾ, ಇಲಾಖೆಯ ಇಂಜಿನಿಯರ್​ ಗುರು ಪ್ರಸಾದ್​, ಕಲ್ಯಾಣಪುರ ಗ್ರಾಪಂ ಮಾಜಿ ಅಧ್ಯಕ್ಷರಾದ ನಾಗರಾಜ್​ ಕುಂದರ್​, ಸತೀಶ್​ ನಾಯ್ಕ್​, ಕೃಷ್ಣ ದೇವಾಡಿಗ, ಬಡಾನಿಡಿಯೂರು ಗ್ರಾಪಂ ಮಾಜಿ ಅಧ್ಯಕ್ಷರಾದ ಉಮೇಶ್​ ಪೂಜಾರಿ, ಪ್ರಭಾಕರ್​ ತಿಂಗಳಾಯ, ಉಡುಪಿ ನಗರಸಭಾ ಮಾಜಿ ಅಧ್ಯಕ್ಷ ಪ್ರಭಾಕರ್​ ಪೂಜಾರಿ, ಗ್ರಾಪಂ ಮಾಜಿ ಸದಸ್ಯರಾದ ಪ್ರೇಮಲತಾ, ನವೀನ್​ ಕಾಂಚನ್​, ಜಾನ್ಸನ್​, ಪ್ರಶಾಂತ್​ ಆಚಾರ್ಯ, ಅನಿತಾ ನಾಯ್ಕ್​, ಪ್ರಮುಖರಾದ ಸುಧೀರ್​ ಕಲ್ಯಾಣಪುರ, ಆಶಾ ಕಾರ್ಯಕರ್ತೆಯರು, ಆರೋಗ್ಯ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net