ವಿದ್ಯಾರ್ಥಿ ಸಂಘದಿಂದ ನಾಯಕತ್ವ ಗುಣ, ಆತ್ಮವಿಶ್ವಾಸ ಹೆಚ್ಚಳ
ಉಡುಪಿ ತೆಂಕನಿಡಿಯೂರಿನ ಪ್ರೌಢಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಯಶ್ಪಾಲ್ ಸುವರ್ಣ ಉದ್ಘಾಟಿಸಿದರು. ಜಗದೀಶ್ ಆರ್. ಆಚಾರ್ಯ, ಸುಕನ್ಯಾ ಶೆಟ್ಟಿ, ವಿಜಯ್ ಕೊಡವೂರು, ಆನಂದ್, ವಿಜಯಪ್ರಕಾಶ್ ಬೈಲಕೆರೆ, ಶರತ್ ಬೈಲಕೆರೆ, ಗಾಯತ್ರಿ ಸುರೇಶ್, ಕೃಷ್ಣ ಶೆಟ್ಟಿ, ಚರಣ್ ರಾಜ್, ರತ್ನಾಕರ್ ಶೆಣೈ, ಎನ್. ವಿಶ್ವನಾಥ್ ಕರಬ, ಗಾಯತ್ರಿ ಎನ್. ಇದ್ದರು.
Published on:
Copied
Follow Us
* ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಭಿಪ್ರಾಯ
* ತೆಂಕನಿಡಿಯೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶೌಚಗೃಹ ಉದ್ಘಾಟನೆ
ಉಡುಪಿ: ವಿದ್ಯಾರ್ಥಿ ಸಂಘವು ನಾಯಕತ್ವ ಗುಣ ಬೆಳೆಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುತ್ತದೆ. ಯಕ್ಷಶಿಕ್ಷಣ ಟ್ರಸ್ಟ್ ಉಚಿತವಾಗಿ ನಡೆಸುವ ಯಕ್ಷಗಾನ ತರಬೇತಿಯ ಸದುಪಯೋಗ ಮಾಡಿಕೊಂಡು ವಿದ್ಯಾರ್ಥಿಗಳು ಕರಾವಳಿಯ ವಿಶಿಷ್ಟ ಕಲೆಯನ್ನು ಬೆಳೆಸಬೇಕು ಎಂದು ಶಾಸಕ ಯಶ್ಪಾಲ್ ಸುವರ್ಣ ಕರೆ ನೀಡಿದರು.
ಉಡುಪಿ ತೆಂಕನಿಡಿಯೂರಿನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜ್ನ ಪ್ರೌಢಶಾಲಾ ವಿಭಾಗದಲ್ಲಿ ಶುಕ್ರವಾರ (ಜು.24) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿ. ಶ್ರೀಮತಿ ಪ್ರಕಾಶಿನಿ ಸ್ಮರಣಾರ್ಥ ಅವರ ಪತಿ ಆನಂದ್ ನಿರ್ಮಿಸಿಕೊಟ್ಟ ಸೈಕಲ್ ಸ್ಟ್ಯಾಂಡ್ ಹಾಗೂ ಶೌಚಗೃಹ, ಯಕ್ಷ ಶಿಕ್ಷಣ ಟ್ರಸ್ಟ್ ಸಹಕಾರದಲ್ಲಿ ಯಕ್ಷಗಾನ ತರಬೇತಿ ಮತ್ತು ಶಾಲೆಯ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಗದೀಶ್ ಆರ್. ಆಚಾರ್ಯ, ಗ್ರಾಪಂ ಮಾಜಿ ಅಧ್ಯೆ ಸುಕನ್ಯಾ ಶೆಟ್ಟಿ, ನಗರಸಭಾ ಮಾಜಿ ಸದಸ್ಯ ವಿಜಯ್ ಕೊಡವೂರು, ದಾನಿ ಆನಂದ್, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ವಿಜಯಪ್ರಕಾಶ್ ಬೈಲಕೆರೆ, ತಾಪಂ ಮಾಜಿ ಸದಸ್ಯ ಶರತ್ ಬೈಲಕೆರೆ, ಗಾಯತ್ರಿ ಸುರೇಶ್, ಕೃಷ್ಣ ಶೆಟ್ಟಿ, ಚರಣ್ ರಾಜ್, ಯಕ್ಷಗಾನ ಗುರುಗಳಾದ ರತ್ನಾಕರ್ ಶೆಣೈ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್. ವಿಶ್ವನಾಥ್ ಕರಬ ಉಪಸ್ಥಿತರಿದ್ದರು.
ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎನ್. ಸ್ವಾಗತಿಸಿದರು. ಶಿಕ್ಷಕ ದಿವಾಕರ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
"
ಸರ್ಕಾರಿ ಶಾಲೆಗಳ ಸಾಧನೆಯಲ್ಲಿ ದಾನಿಗಳ ಸಹಕಾರ ಮಹತ್ವದಾಗಿದೆ. ಶಾಲಾಭಿವೃದ್ಧಿ ಸಮಿತಿಯ ಬೇಡಿಕೆಯಂತೆ ಅನುದಾನ ಒದಗಿಸಿ 4 ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ ನಿಮಾರ್ಣವಾಗಿದೆ. ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಪ್ರಕಾಶಿನಿ ಅವರ ಸ್ಮರಣಾರ್ಥ ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ಸ್ಟ್ಯಾಂಡ್ ನಿರ್ಮಿಸುವ ಮೂಲಕ ಶಿಕ್ಷಣಕ್ಕೆ ವಿಶೇಷ ಸಹಕಾರ ನೀಡಿದ ಅವರ ಕುಟುಂಬ ಸದಸ್ಯರಿಗೆ ಶಾಸಕನ ನೆಲೆಯಲ್ಲಿ ಧನ್ಯವಾದ ಸಲ್ಲಿಸುತ್ತೇನೆ.