ಉಡುಪಿಯಲ್ಲಿ ರಾಜ್ಯ ಮಟ್ಟದ ಟೆಕ್ವಾಂಡೋ ಪಂದ್ಯಾವಳಿ

ಉಡುಪಿಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಟೆಕ್ವಾಂಡೋ ಪಂದ್ಯಾವಳಿಯನ್ನು ಯಶ್​ಪಾಲ್​ ಸುವರ್ಣ -ಉದ್ಘಾಟಿಸಿದರು. ವಾದಿರಾಜ ರಾವ್​, ಶ್ರೀಪಾದ್​ ಆರ್​. ರಾವ್​, ರಮ್ಯಾ ವಿ., ಡಾ.ಜಗದೀಶ್​ ಗಸ್ತಿ, ಸುಭಾಷ್​ ಸಾಲ್ಯಾನ್​, ಟಿಎಂಜೆಎಫ್​ ಲಯನ್​ ಸುರೇಶ್​ ಪ್ರಭು, ಹರೀಶ್​, ಸಂತೋಷ್​ ನಾಯಕ್​ ಇತರರಿದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಟೆಕ್ವಾಂಡೋ ಪಂದ್ಯಾವಳಿಯನ್ನು ಯಶ್​ಪಾಲ್​ ಸುವರ್ಣ -ಉದ್ಘಾಟಿಸಿದರು. ವಾದಿರಾಜ ರಾವ್​, ಶ್ರೀಪಾದ್​ ಆರ್​. ರಾವ್​, ರಮ್ಯಾ ವಿ., ಡಾ.ಜಗದೀಶ್​ ಗಸ್ತಿ, ಸುಭಾಷ್​ ಸಾಲ್ಯಾನ್​, ಟಿಎಂಜೆಎಫ್​ ಲಯನ್​ ಸುರೇಶ್​ ಪ್ರಭು, ಹರೀಶ್​, ಸಂತೋಷ್​ ನಾಯಕ್​ ಇತರರಿದ್ದರು.
Published on

* ಶಾಸಕ ಯಶ್​ಪಾಲ್​ ಸುವರ್ಣ ಉದ್ಘಾಟನೆ

* 350ಕ್ಕೂ ಅಧಿಕ ಕ್ರೀಡಾಪಟುಗಳು ಭಾಗಿ

ಉಡುಪಿ: ಕರ್ನಾಟಕ ಟೇಕ್ವಾಂಡೋ, ಯಕ್ಷಿತ್​ ಯುವ ಫೌಂಡೇಷನ್​ ಸಹಕಾರದಲ್ಲಿ ಉಡುಪಿ ಜಿಲ್ಲಾ ಟೆಕ್ವಾಂಡೋ ಸಂಸ್ಥೆ ವತಿಯಿಂದ ಅಜ್ಜರಕಾಡು ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಸಬ್​ ಜೂನಿಯರ್​, ಕ್ಯಾಡೆಟ್​, ಜೂನಿಯರ್​ ಮತ್ತು ಸೀನಿಯರ್​ ವಿಭಾಗದ 2ನೇ ಆವೃತ್ತಿಯ "ಕರಾವಳಿ ಟೇಕ್ವಾಂಡೋ ಚಾಂಪಿಯನ್​ ಶಿಪ್​-2026'ಅನ್ನು ಉಡುಪಿ ಶಾಸಕ  ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು.
ಉಡುಪಿ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಗೌರವಾಧ್ಯಕ್ಷ ವಾದಿರಾಜ ರಾವ್​, ಯಕ್ಷಿತ್​ ಯುವ ಫೌಂಡೇಷನ್​ ಅಧ್ಯಕ್ಷ ಶ್ರೀಪಾದ್​ ಆರ್​. ರಾವ್​ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಅಧ್ಯಕ್ಷೆ ರಮ್ಯಾ ವಿ. ಅಧ್ಯಕ್ಷತೆ ವಹಿಸಿದ್ದರು.
ಬೆಳಗಾವಿ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾರೀರಿಕ ಶಿಕ್ಷಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಡಾ.ಜಗದೀಶ್​ ಗಸ್ತಿ, ಓಪುಲಾ ಸಾಫ್ಟ್ ವೇರ್​ನ ಸಿಇಒ ಸುಭಾಷ್​ ಸಾಲ್ಯಾನ್​, ಡಿಸ್ಟ್ರಿಕ್​ 317ಸಿ ಜಿಲ್ಲಾ ಮಾಜಿ ಗವರ್ನರ್​ ಟಿಎಂಜೆಎಫ್​ ಲಯನ್​ ಸುರೇಶ್​ ಪ್ರಭು, ಹರೀಶ್​, ಸಂತೋಷ್​ ನಾಯಕ್​, ಕರ್ನಾಟಕ ಟೇಕ್ವಾಂಡೋ ಸಂಸ್ಥೆಯ ಉಪಾಧ್ಯಕ್ಷ ವಿಶ್ವಕರ್ಮ ಆಚಾರ್ಯ (ಸ್ವಾಮಿ), ಉಡುಪಿ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಸಂಸ್ಥಾಪಕ ರಾಜಶೇಖರ ಕೆ.ಪಿ. ಇದ್ದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 350ಕ್ಕೂ ಅಧಿಕ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ಅಕ್ಷಯ್​ ಹೆಗಡೆ ಮತ್ತು ಗೀತಾ ವಾದಿರಾಜ ರಾವ್​ ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net