ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಒಗ್ಗೂಡೋಣ

ಉಡುಪಿಯ ಮೂಡನಿಡಂಬೂರಿನ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ಆಯೋಜಿಸಿದ್ದ ಮುಷ್ಟಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಯಶ್​ಪಾಲ್​ ಸುವರ್ಣ ಮಾತನಾಡಿದರು. ಟಿ.ಜಿ. ಹೆಗ್ಡೆ, ಪ್ರಸಾದ್​ ರಾಜ್​ ಕಾಂಚನ್​, ಸುಪ್ರಸಾದ್​ ಶೆಟ್ಟಿ, ಉದಯಕುಮಾರ್​ ಶೆಟ್ಟಿ, ಪ್ರಭಾಕರ್​ ಪೂಜಾರಿ, ಪ್ರಭಾತ್​ ಶೆಟ್ಟಿ, ಜಯಕರ್​ ಶೆಟ್ಟಿ ಇಂದ್ರಾಳಿ, ಮೋಹನ್​ ಶೆಟ್ಟಿ ಇತರರಿದ್ದರು.
ಉಡುಪಿಯ ಮೂಡನಿಡಂಬೂರಿನ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ಆಯೋಜಿಸಿದ್ದ ಮುಷ್ಟಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಯಶ್​ಪಾಲ್​ ಸುವರ್ಣ ಮಾತನಾಡಿದರು. ಟಿ.ಜಿ. ಹೆಗ್ಡೆ, ಪ್ರಸಾದ್​ ರಾಜ್​ ಕಾಂಚನ್​, ಸುಪ್ರಸಾದ್​ ಶೆಟ್ಟಿ, ಉದಯಕುಮಾರ್​ ಶೆಟ್ಟಿ, ಪ್ರಭಾಕರ್​ ಪೂಜಾರಿ, ಪ್ರಭಾತ್​ ಶೆಟ್ಟಿ, ಜಯಕರ್​ ಶೆಟ್ಟಿ ಇಂದ್ರಾಳಿ, ಮೋಹನ್​ ಶೆಟ್ಟಿ ಇತರರಿದ್ದರು.
Published on

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆಶಯ

* ಮುಷ್ಟಿ ಕಾಣಿಕೆ ಸಮರ್ಪಣೆಗೆ ಚಾಲನೆ

ಉಡುಪಿ: ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಸಮಸ್ತ ಹಿಂದೂ ಸಮಾಜ ಒಗ್ಗಟ್ಟಿನಿಂದ ಕೆಲಸ ಮಾಡಲು ಮುಂದೆ ಬರಬೇಕು. ಕರಾವಳಿ ಭಾಗದ ಜನರ ಅತ್ಯಂತ ನಂಬಿಕೆ ಹಾಗೂ ಶ್ರದ್ಧಾ ಕೇಂದ್ರವಾದ ಗರೋಡಿಯ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ನಾನೋರ್ವ ಭಕ್ತನಾಗಿ ಹಾಗೂ ಕ್ಷೇತ್ರದ ಶಾಸಕನಾಗಿ ಧಾರ್ಮಿಕ ದತ್ತಿ ಇಲಾಖೆಯಿಂದ ಹೆಚ್ಚಿನ ಅನುದಾನ ದೊರಕಿಸಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ಭರವಸೆ ನೀಡಿದರು.
ಉಡುಪಿಯ ಮೂಡನಿಡಂಬೂರಿನ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯ ಸಮಗ್ರ ಜೀರ್ಣೋದ್ಧಾರ ಹಾಗೂ ಪುನ: ಪ್ರತಿಷ್ಠೆ ನಿಮಿತ್ತ ಭಾನುವಾರ (ಜೂ.7) ಆಯೋಜಿಸಿದ್ದ ಮುಷ್ಟಿ ಕಾಣಿಕೆ ಸಮರ್ಪಣೆಗೆ ಚಾಲನೆ ನೀಡಿ ಮಾತನಾಡಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ವಿನಯಕುಮಾರ್​ ಸೊರಕೆ, ಕಾಂಗ್ರೆಸ್​ ಮುಖಂಡ ಪ್ರಸಾದ್​ ರಾಜ್​ ಕಾಂಚನ್​ ಮಾತನಾಡಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಟಿ.ಜಿ. ಹೆಗ್ಡೆ ಅಧ್ಯಕ್ಷತೆ ವಹಿಸಿ, ಮುಷ್ಟಿ ಕಾಣಿಕೆ ಸಮರ್ಪಣೆ ಸೇವೆ ಜೂ.15ರ ವರೆಗೆ ಇರಲಿದೆ ಎಂದರು.
ನಗರಸಭಾ ಮಾಜಿ ಅಧ್ಯಕ್ಷ ಪ್ರಭಾಕರ್​ ಪೂಜಾರಿ, ಆಡಳಿತ ಮೊಕ್ತೇಸರ ಪ್ರಭಾತ್​ ಶೆಟ್ಟಿ, ಸಹಕಾರಿ ಧುರೀಣ ಜಯಕರ್​ ಶೆಟ್ಟಿ ಇಂದ್ರಾಳಿ, ಸವಿತಾ ಹರೀಶ ರಾಮ್​, ಇಂಜಿನಿಯರ್​ ರಂಜನ್​, ಸುಪ್ರಸಾದ್​ ಶೆಟ್ಟಿ , ಉದಯಕುಮಾರ್​ ಶೆಟ್ಟಿ, ಗುಂಡು ಶೆಟ್ಟಿ, ಶೇಖರ್​ ಜತ್ತನ್​, ಹರಿಯಪ್ಪ ಕೋಟ್ಯಾನ್, ​ಡಾ. ಸಂದೀಪ್​ ಸನಿಲ್​, ಸುರೇಶ್​ ಶೆಟ್ಟಿ, ಉದಯ್​ ಶೆಟ್ಟಿ, ಆರ್​.ಕೆ. ರಾಮಕೃಷ್ಣ ವಾಗ್ಲೆ, ಗುರುರಾಜ್​ ಶೆಟ್ಟಿ, ವಿಠ್ಠಲ್​ ಶೆಟ್ಟಿ, ಮೀನಾಕ್ಷಿ ಮಾಧವ, ಗರೋಡಿಯ ಗುರಿಕಾರರು, ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮುಷ್ಟಿ ಕಾಣಿಕೆಯ ಆರಂಭ ದಿನದಂದೇ ಆಗಮಿಸಿದ್ದ ಭಕ್ತರಿಂದ 50 ಲಕ್ಷ ರೂ.ಗಿಂತ ಹೆಚ್ಚಿನ ಹಣ ಸಂಗ್ರಹಗೊಂಡಿತು. ವಿವಿಧ ದಾನಿಗಳಿಗೆ ಸನ್ಮಾನಿಸಲಾಯಿತು. 
ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯ ಆಡಳಿತ ಮಂಡಳಿಯ ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಕಾರ್ಯದರ್ಶಿ ಮೋಹನ್​ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಸತೀಶ್​ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net