ಸಂತ-ಶರಣರ ತತ್ತ್ವ ಅರಿಯಬೇಕು ಯುವಪೀಳಿಗೆ

ಉಡುಪಿಯಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿಯನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ಡಾ. ಗಣನಾಥ್​ ಶೆಟ್ಟಿ ಎಕ್ಕಾರು, ಎಂ.ಎ. ಗಫೂರ್​​, ಅಬೀದ್​ ಗದ್ಯಾಳ, ಪೂರ್ಣಿಮಾ, ದಿನಕರ್​ ಹೇರೂರು, ಪ್ರದೀಪ್​ ಮಡಿವಾಳ ಹೆರ್ಗ ಇದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿಯನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ಡಾ. ಗಣನಾಥ್​ ಶೆಟ್ಟಿ ಎಕ್ಕಾರು, ಎಂ.ಎ. ಗಫೂರ್​​, ಅಬೀದ್​ ಗದ್ಯಾಳ, ಪೂರ್ಣಿಮಾ, ದಿನಕರ್​ ಹೇರೂರು, ಪ್ರದೀಪ್​ ಮಡಿವಾಳ ಹೆರ್ಗ ಇದ್ದರು.
Published on

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅನಿಸಿಕೆ

* ಮಡಿವಾಳ ಮಾಚಿದೇವ ಜಯಂತಿ ಉದ್ಘಾಟನೆ

ಉಡುಪಿ: ಶರಣರು, ಸಂತರು ತಮ್ಮ ಜೀವಿತಾವಧಿಯಲ್ಲಿ ಸಮಾಜಕ್ಕೆ ನೀಡಿದ ತತ್ತ್ವ, ಕೊಡುಗೆಗಳನ್ನು ನಾವೆಲ್ಲರೂ ಸ್ಮರಿಸಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರವೇ ಅನೇಕ ಮಹನೀಯರ ಜಯಂತಿ ಆಚರಿಸುತ್ತಿದೆ. 12ನೇ ಶತಮಾನದಲ್ಲಿದ್ದ ಶೋಷಣೆ, ಜಾತೀಯತೆ, ಮೇಲು-ಕೀಳೆಂಬ ತಾರತಮ್ಯ, ಅಸ್ಪೃಶ್ಯತೆ ನಿವಾರಿಸಿ ಸಮಾನತೆ ತರಲು ಮಡಿವಾಳ ಮಾಚಿದೇವ ಅವರು ಶ್ರಮಿಸಿದ್ದರು. ಅವುಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಮಾಡಬೇಕಿದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಅಂಬಾಗಿಲು ಶ್ರೀ ಗುರು ಮಾಚೀದೇವ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ರಜಕ ಯಾನೆ ಮಡಿವಾಳ ಸಂಘ (ರಿ.) ಉಡುಪಿ ವತಿಯಿಂದ ಭಾನುವಾರ (ಫೆ.1) ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸನ್ಮಾರ್ಗದ ಹಾದಿ

ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್​ ಮಾತನಾಡಿ, ಅನೇಕ ಶರಣರು ತಮ್ಮ ವಚನ ಸಾಹಿತ್ಯದಲ್ಲಿ ತಮ್ಮ ಅನುಭವಗಳನ್ನೇ ಮನ ಮುಟ್ಟುವಂತೆ ಹಾಗೂ ತಮ್ಮದೇ ಶೈಲಿಯಲ್ಲಿ ಸರಳವಾಗಿ ತಿಳಿಸಿದ್ದಾರೆ. ಬಸವೇಶ್ವರರು, ಮಾಚಿದೇವ ಸೇರಿದಂತೆ ಹಲವಾರು ದಾರ್ಶನಿಕರು ಸನ್ಮಾಗದಲ್ಲಿ ನಡೆಯುವ ಹಾದಿ ತೋರಿದ್ದಾರೆ ಎಂದರು.

ಶರಣರ ವಚನದಲ್ಲಿದೆ ಮನುಷ್ಯತ್ವ

ಡಾ. ಶಿವರಾಮ ಕಾರಂತ ಟ್ರಸ್ಟ್​ನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಉಪನ್ಯಾಸ ನೀಡಿ, 12ನೇ ಶತಮಾನದಲ್ಲಿ ಬಸವಣ್ಣನ ನೇತೃತ್ವದಲ್ಲಿ ಕಲ್ಯಾಣದಲ್ಲಿ ನಡೆದ ಕ್ರಾಂತಿಯ ಸಂದರ್ಭದಲ್ಲಿಯೇ ಅನೇಕ ಶರಣರು ಹೋರಾಡಿ ಸಮಾಜದಲ್ಲಿ ಸಮಾನತೆ ತರಲು ಪ್ರಯತ್ನಿಸಿದ್ದಾರೆ. 850 ವರ್ಷದ ಹಿಂದೆ ಶರಣರು ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವೆಂದು ವಚನಗಳ ಮೂಲಕ ತಿಳಿಸಿದ್ದಾರೆ. ವಚನಗಳ ತತ್ತ್ವ ಪಾಲಿಸಿದ್ದಲ್ಲಿ ಮನುಷ್ಯತ್ವ ಕಾಣಲು ಸಾಧ್ಯ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಸಮುದಾಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶ್ರೀ ರಜಕ ಯಾನೆ ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ್​ ಮಡಿವಾಳ ಹೆರ್ಗ ವಂದಿಸಿದರು. ಇಲಾಖೆಯ ಸಿಬ್ಬಂದಿ ವರ್ಷಾ ಬಿ. ಕೋಟ್ಯಾನ್​ ಕಾರ್ಯಕ್ರಮ ನಿರೂಪಿಸಿದರು.
"

ಮಡಿವಾಳ ಮಾಚಿದೇವ ಅವರ ವ್ಯಕ್ತಿತ್ವ, ಶ್ರದ್ಧೆ, ಭಕ್ತಿಯನ್ನು ಗಮನಿಸಿದ್ದ ಮಲ್ಲಿಕಾರ್ಜುನ ಸ್ವಾಮೀಜಿ ಅವರಿಗೆ ಶಿಕ್ಷಣ, ಜ್ಞಾನ ನೀಡಿದ್ದರು. ಬಸವಣ್ಣನವರ ಕಾಯಕ ತತ್ತ್ವ, ಭಕ್ತಿ, ದಾಸೋಹ ಸೇರಿದಂತೆ ಅವರ ಜಂಗಮ ಸೇವೆಗಳ ಬಗ್ಗೆ ಪ್ರಭಾವಿತರಗಿ ಕಲ್ಯಾಣಕ್ಕೆ ಬಂದು ಶಿವಭಕ್ತರ ಕಾಯಕದಲ್ಲಿ ನಿಷ್ಠೆ ಉಳ್ಳವರ ಬಟ್ಟೆಗಳನ್ನು ಮಡಿಗೊಳಿಸುವ ಕೆಲಸ ಮಾಡುತ್ತಿದ್ದರು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿಯೇ ವಚನ ಸಾಹಿತ್ಯ ರಕ್ಷಿಸಿ, ಉಳಿಸಲು ಸಹಕರಿಸಿದರು. ಮಡಿವಾಳ ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net