ಕಲ್ಮಾಡಿ-ಬಂಕೇರಕಟ್ಟ ಮಾರ್ಗಕ್ಕೆ ಹೊಸ ಸೇತುವೆ

ಉಡುಪಿ ನಗರಸಭೆಯ ಕಲ್ಮಾಡಿ ವಾರ್ಡ್​ನಲ್ಲಿ ಅಭಿವೃದ್ಧಿಗೊಂಡ ಕೆರೆಯನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ಪ್ರಭಾಕರ್​ ಪೂಜಾರಿ, ಸುಂದರ್​ ಜೆ. ಕಲ್ಮಾಡಿ, ಬಾಲಕೃಷ್ಣ ಶೆಟ್ಟಿ, ವಿನಯಕುಮಾರ್​, ವಿವೇಕ್​, ವಿನೋದ್​ ಹೊಸಕಟ್ಟ, ಲಕ್ಷ್ಮೀಶ್​ ಬಂಗೇರ ಇತರರಿದ್ದರು.
ಉಡುಪಿ ನಗರಸಭೆಯ ಕಲ್ಮಾಡಿ ವಾರ್ಡ್​ನಲ್ಲಿ ಅಭಿವೃದ್ಧಿಗೊಂಡ ಕೆರೆಯನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ಪ್ರಭಾಕರ್​ ಪೂಜಾರಿ, ಸುಂದರ್​ ಜೆ. ಕಲ್ಮಾಡಿ, ಬಾಲಕೃಷ್ಣ ಶೆಟ್ಟಿ, ವಿನಯಕುಮಾರ್​, ವಿವೇಕ್​, ವಿನೋದ್​ ಹೊಸಕಟ್ಟ, ಲಕ್ಷ್ಮೀಶ್​ ಬಂಗೇರ ಇತರರಿದ್ದರು.
Published on

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಮಾಹಿತಿ

* ಅಭಿವೃದ್ಧಿಗೊಂಡ ಕೆರೆಯ ಉದ್ಘಾಟನೆ

ಉಡುಪಿ: ಕಲ್ಮಾಡಿ ಗರಡಿ ಬಳಿಯಲ್ಲಿರುವ ಕೆರೆ ಅಭಿವೃದ್ಧಿ ಮಾಡುವ ಸ್ಥಳೀಯರ ಬೇಡಿಕೆ ಹಿನ್ನೆಲೆಯಲ್ಲಿ ನಗರಸಭೆಯ ಮೂಲಕ ಅನುದಾನ ಒದಗಿಸಿ ಕಾಮಗಾರಿ ಪೂರ್ಣಗೊಂಡಿದೆ. ಈಗಾಗಲೇ ಕಲ್ಮಾಡಿ ವಾರ್ಡ್​ಗೆ ಮೂಲ ಸೌಕರ್ಯ ಅಭಿವೃದ್ಧಿಗೆ ಗರಿಷ್ಠ ಅನುದಾನ ಒದಗಿಸಿದ್ದು, ಶೀಘ್ರದಲ್ಲಿಯೇ 5 ಕೋಟಿ ರೂ. ವೆಚ್ಚದಲ್ಲಿ ಕಲ್ಮಾಡಿ-ಬಂಕೇರಕಟ್ಟ ಹೊಸ ಸೇತುವೆಯ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ತಿಳಿಸಿದರು.
ಉಡುಪಿ ನಗರಸಭೆಯ ಕಲ್ಮಾಡಿ ವಾರ್ಡ್​ನ ಗರಡಿ ಬಳಿ 35 ಲಕ್ಷ ರೂ. ವೆಚ್ಚದ ಕಾಮಗಾರಿಯಿಂದ ಅಭಿವೃದ್ಧಿಗೊಂಡ ಕೆರೆಗೆ ರಾಭಿಶೇಕ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಪ್ರಭಾಕರ್​ ಪೂಜಾರಿ, ಮಾಜಿ ಸದಸ್ಯರಾದ ಸುಂದರ್​ ಜೆ. ಕಲ್ಮಾಡಿ, ಬಾಲಕೃಷ್ಣ ಶೆಟ್ಟಿ, ಸ್ಥಳೀಯ ಮುಖಂಡರಾದ ವಿನಯಕುಮಾರ್​, ವಿವೇಕ್​, ವಿನೋದ್​ ಹೊಸಕಟ್ಟ, ಲಕ್ಷ್ಮೀಶ್​ ಬಂಗೇರ, ಮನೋಜಕುಮಾರ್​, ಸಚಿನ್​, ನಿತಿನ್​, ರಾಘವ್​ ಪೂಜಾರಿ, ರತ್ನಾಕರ್​ ಸಾಲ್ಯಾನ್​, ರಮೇಶ್​ ಮಾಸ್ಟರ್​, ರೋಹಿತ್​ ಬೊಟ್ಟಲ, ಗೋವಿಂದ ಗುರಿಕಾರ, ಸಾಧು ಪೂಜಾರಿ, ಗಿರೀಶ್​ ಕಲ್ಮಾಡಿ, ಚಂದ್ರಕಾಂತ್​ ಕಲ್ಮಾಡಿ, ಯಶೋದಾ ಕಲ್ಮಾಡಿ, ಜಯಶ್ರೀ, ಸುಶೀಲಾ ಇನ್ನಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net