ಉತ್ತಮ ರಸ್ತೆ ಸಂಪರ್ಕದಿಂದ ಭಕ್ತರಿಗೆ ಅನುಕೂಲ

ಉಡುಪಿಯ ಶೀಂಬ್ರ ಸಿದ್ಧಿವಿನಾಯಕ ದೇಗುಲ ಸಂಪರ್ಕದ ಕಾಂಕ್ರೀಟ್​ ರಸ್ತೆಯನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ಪ್ರಭಾಕರ್​ ಪೂಜಾರಿ, ಅಜಿತ್​ ಪೈ, ರಮೇಶ್​ ರಾವ್​, ಬಾಲಾಜಿ ರಾಘವೇಂದ್ರ ಆಚಾರ್ಯ, ಚಂದ್ರಕಾಂತ್​ ಕೆ.ಎನ್​., ನಾಗರಾಜ್​ ತಂತ್ರಿ, ಹರಿಕೃಷ್ಣ ಶಿವತ್ತಾಯ, ಮಧುಕರ್​ ಮುದ್ರಾಡಿ ಇತರರಿದ್ದರು.

Published on

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅನಿಸಿಕೆ

* ಶೀಂಬ್ರದಲ್ಲಿ ಕಾಂಕ್ರೀಟ್​ ರೋಡ್​ ಉದ್ಘಾಟನೆ

ಉಡುಪಿ: ಶೀಂಬ್ರದಲ್ಲಿರುವ ಇತಿಹಾಸ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನವು ಉಡುಪಿಯ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿದೆ. ಕೃಷ್ಣಂಗಾರಕ ಚತುರ್ದಶಿಯಂದು ದೇಶದ ವಿವಿಧ ಭಾಗಗಳಿಂದ ಇಲ್ಲಿನ ಸ್ವರ್ಣ ನದಿಯಲ್ಲಿ ತೀರ್ಥ ಸ್ನಾನಕ್ಕೆಂದು ಸಹಸ್ರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಈ ಪುಣ್ಯ ಕ್ಷೇತ್ರಕ್ಕೆ ಉತ್ತಮ ಸಂಪರ್ಕ ಒದಗಿಸಲು 75 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್​ ರಸ್ತೆ ನಿರ್ಮಿಸಲಾಗಿದ್ದು, ದೇಗುಲಕ್ಕೆ ಬರುವ ಭಕ್ತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ಹೇಳಿದರು.
ಉಡುಪಿಯ ಮೂಡುಪೆರಂಪಳ್ಳಿ ವಾರ್ಡ್​ನಲ್ಲಿ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸಲು ಅಭಿವೃದ್ಧಿ ಪಡಿಸಿದ ಕಾಂಕ್ರೀಟ್​ ರಸ್ತೆ ಉದ್ಘಾಟಿಸಿ ಮಾತನಾಡಿದರು.
ಉಡುಪಿ ನಗರಸಭಾ ಮಾಜಿ ಅಧ್ಯಕ್ಷ ಪ್ರಭಾಕರ್​ ಪೂಜಾರಿ, ಗಣ್ಯರಾದ ಅಜಿತ್​ ಪೈ, ರಮೇಶ್​ ರಾವ್​, ಬಾಲಾಜಿ ರಾಘವೇಂದ್ರ ಆಚಾರ್ಯ, ಯುವ ಬ್ರಾಹ್ಮಣ ಪರಿಷತ್​ನ ಚಂದ್ರಕಾಂತ್​ ಕೆ.ಎನ್​., ನಾಗರಾಜ್​ ತಂತ್ರಿ, ಹರಿಕೃಷ್ಣ ಶಿವತ್ತಾಯ, ಪ್ರಶಾಂತ್​ ಭಟ್​ ಪೆರಂಪಳ್ಳಿ, ಅನಿತಾ ಬೆಲಿಂಡ ಡಿಸೋಜ, ಮಂಜುನಾಥ್​ ಮಣಿಪಾಲ, ಡೆನಿಸ್​ ಮಸ್ಕರೇನ್ಹಸ್​, ಸುಮಾ, ವಿಜಯಾ ಪೂಜಾರಿ, ಗಣಪತಿ ಭಟ್​, ವಾದಿರಾಜ ಆಚಾರ್ಯ, ಬಿಜೆಪಿ ಜಿಲ್ಲಾ ವಕ್ತಾರ ಮಧುಕರ್​ ಮುದ್ರಾಡಿ, ಶಶಾಂಕ್​ ಶಿವತ್ತಾಯ, ಗೋಪಾಲ್​ ಆಚಾರ್​ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net